ಬರವಣಿಗೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ – ಮೆಹಂದಳೆ

Date:

ಕರ್ನಾಟಕದ ಒಟ್ಟು ವ್ಯಾಪ್ತಿಯಲ್ಲಿ ವರ್ಷಕ್ಕೆ ಸುಮಾರು ಆರು ಸಾವಿರ ಸಾಹಿತ್ಯ ಕೃತಿಗಳು ಪ್ರಕಟವಾಗುತ್ತಿದ್ದರೂ ಇವುಗಳಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವಂತವುಗಳು ಕೇವಲ ಹತ್ತಾರು ಮಾತ್ರ, ಇಂತಹ ಸಂದರ್ಭದಲ್ಲಿ ಬರಹಗಾರರು ಗುಣ ಮಟ್ಟದ ಬರವಣಿಗೆ ಬಗ್ಗೆ ಹೆಚ್ಚು ಅದ್ಯತೆ ನೀಡಬೇಕಾಗಿ ಸಾಹಿತಿ ಸಂತೋಷಕುಮಾರ ಮೆಹಂದಳೆ ಅಭಿಪ್ರಾಯಪಟ್ಟರು.

ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ ರಜತ ರಂಗು ಪ್ರಯುಕ್ತ 16 ನೇ ಆವೃತ್ತಿಯ 2025ರ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸೂಕ್ತ ಆನುಭವ ಮತ್ತು ಓದಿನ ಹಿನ್ನೆಲೆಯಿಲ್ಲದೆ, ಕೇವಲ ಗ್ರಂಥಾಲಯ ಸರಬರಾಜಿನ ಉದ್ದೇಶದಿಂದ ಮಾತ್ರ ಕೃತಿ ರಚನೆ ಉತ್ತಮವಲ್ಲ ಎಂದು ಅವರು ಸಂಧರ್ಭದಲ್ಲಿ ಹೇಳಿದರು.

ವಿವಿಧ ಕ್ಷೇತ್ರಗಳ ಕರ್ನಾಟಕದ ಪಂಚ ಸಾಧಕರಾದ ಡಾ ಎಸ್ ಎಮ್ ಶಿವಪ್ರಕಾಶ್, ಡಾ ಪ್ರಕಾಶ ಕೇಶವ ನಾಡಿಗ್, ಜಬೀವುಲ್ಲಾ ಎಂ ಅಸದ್, ರೆಮೊನಾ ಎವೆಟ್ ಪೆರೇರಾ ಮತ್ತು ಗೋಕಾವಿ ಗೆಳೆಯರ ಬಳಗದ ಪರವಾಗಿ ಜಯಾನಂದ ಮಾದರ ಅವರಿಗೆ ಡಾ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ರಘು ಇಡ್ಕಿದು ಅಭಿನಂದನ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನ ಹೊರ ತಂದಿರುವ ಹಿರಿಯ ಲೇಖಕ ಕಡ್ಕೆ ರಾಮ ಅವಭೃತ ಅವರ ಪರ್ಯಟನಾನುಭವ ಕೃತಿ ಬಿಡುಗಡೆ ನಡೆಯಿತು. ಡಾ ಮೀನಾಕ್ಷಿ ರಾಮಚಂದ್ರ, ಡಾ ಶ್ರೀಧರ್ ಅವಭೃತ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಸಾಹಿತಿ ಮಹೇಶ ಆರ್ ನಾಯಕ್ ಸ್ವಾಗತಿಸಿದರು. ಎನ್ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ....

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...