ಅಸೈಗೋಳಿ: 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಸೈಗೋಳಿ ಯುವಕ ಮಂಡಲದ ಕೇಂದ್ರ ಮೈದಾನದಲ್ಲಿ‘ಕ್ರೀಡಾ ಸಂಭ್ರಮ-2026

Date:

ಅಸೈಗೋಳಿ: 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಸೈಗೋಳಿ ಯುವಕ ಮಂಡಲದ ಕೇಂದ್ರ ಮೈದಾನದಲ್ಲಿ‘ಕ್ರೀಡಾ ಸಂಭ್ರಮ-2026ಪ್ರಸ್ತುತ ದಿನಗಳಲ್ಲಿ ಕೇವಲ ಪಠ್ಯ ಶಿಕ್ಷಣ ಸಾಲದು, ಪಠ್ಯೇತರ ಚಟುವಟಿಕೆಗಳೂ ಅಗತ್ಯ. ಸ್ಪರ್ಧೆಗಳ ಅಯೋಜನೆಯಿಂದ ಮಕ್ಕಳು ಮೊಬೈಲ್ ಬಿಟ್ಟು ಮೈದಾನದಲ್ಲಿ ಕಳೆಯುವ ಅವಕಾಶ ಸಿಗುತ್ತದೆ, ಮಕ್ಕಳಿಗೆ ಎಷ್ಟೇ ಆಸ್ತಿಯನ್ನು ಮಾಡಿಟ್ಟರೂ ಅರೋಗ್ಯ ಇಲ್ಲ ಅಂದ್ರೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಕ್ರೀಡೆ ಬಹಳ ಪ್ರಮುಖ್ಯ ವಾಗಿದೆ ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಸಹಾಯಕ ನಿರ್ದೇಶಕ ಪ್ರೊ.ರಮೇಶ್ ಹೇಳಿದರು.
ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ನಡೆಯಲಿರುವ ೩೮ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ‘ಅಸೈಗೋಳಿ ಮೊಸರು ಕುಡಿಕೆ’ ಉತ್ಸವದ ಪ್ರಯುಕ್ತ ಅಸೈಗೋಳಿ ಯುವಕ ಮಂಡಲದ ಕೇಂದ್ರ ಮೈದಾನದಲ್ಲಿ ಭಾನುವಾರ ನಡೆದ ‘ಕ್ರೀಡಾ ಸಂಭ್ರಮ-೨೦೨೬’ ಉದ್ಘಾಟಿಸಿ ಮಾತನಾಡಿದರು.
ಬಂಟರ ಸಂಘ ಉಳ್ಳಾಲ ವಲಯಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಲ್ಲ. ಮಾನಸಿಕ, ದೈಹಿಕ ಆರೋಗ್ಯ, ಸರ್ವಧರ್ಮ ಸಮನ್ವಯತೆ, ಪ್ರೀತಿ, ತಾಳ್ಮೆ, ಪರಸ್ಪರ ಬೆರೆಯುವಿಕೆ ಮುಂತಾದ ಜೀವನ ಮೌಲ್ಯಗಳಿವೆ ಎಂದು ತಿಳಿಸಿದರು.
ಅಸೈಗೋಳಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಫುಲ್ಲು ಅಧ್ಯಕ್ಷತೆ ವಹಿಸಿ, ಕ್ರೀಡೆಗೆ ಜಾತಿ, ಧರ್ಮದ ಹಂಗಿಲ್ಲ. ಎಲ್ಲರೂ ಭಾಗವಹಿಸುವ ಕ್ರೀಡಾಕೂಟ ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್, ಪರಂಜ್ಯೋತಿ ಮಾತೃಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ, ಸಂಚಾಲಕ ಕೃಷ್ಣಪ್ಪ, ಸಿದ್ದಾರ್ಥ್ ಶೆಟ್ಟಿ ಜತೆಕಾರ್ಯದರ್ಶಿ ವಿಶ್ವನಾಥ ಪೂಜಾರಿ, ವನಿತಾ ಮನಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕ್ರೀಡಾ ಸಂಚಾಲಕ ರಾಧಾಕೃಷ್ಣ ರೈ ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಟಿ.ನಾಯಕ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸೇತುವೆ ಕುಸಿತ: ತಕ್ಷಣ ಸ್ಪಂದಿಸಿದ ಬಜ್ಪೆ ನಾಗರಿಕರಕ್ಷಣಾ ವೇದಿಕೆ – ಎರಡು ದಿನಗಳಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆಗೆ ಅಧಿಕಾರಿಗಳ ಭರವಸೆ

ಬಜ್ಪೆ, ಮಂಗಳೂರು–ಬಜ್ಪೆ–ಕಟ್ಟೀಲ್ ರಾಜ್ಯ ಹೆದ್ದಾರಿಯ ಕರಬಾರು ಸಮೀಪದಲ್ಲಿರುವ ಸೇತುವೆ ಕುಸಿದು ವಾಹನ...

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಗೊಂದಲ – ಅಕೀಮ್ ಕೂರ್ನಡ್ಕ ಆಸ್ಪತ್ರೆಗೆ ದಾಖಲು

ಪುತ್ತೂರು: ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಉಂಟಾದ ಗೊಂದಲ ಹಾಗೂ ಉದ್ವಿಗ್ನ...

ಸೆ.ಬಂಟ್ಸ್ ಹಾಸ್ಟೆಲ್, ಶ್ರೀ ರಾಮಕೃಷ್ಣ ಶಾಲಾ ಮೈದಾನದಲ್ಲಿ ಅಂತರ್ ಜಿಲ್ಲಾ ಮಟ್ಟದ ಬಂಟ ಕ್ರೀಡೋತ್ಸವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ದಕ್ಷಿಣ ಕನ್ನಡ, ಉಡುಪಿ ಮತ್ತು...