
ದೇರಳಕಟ್ಟೆ: ಕಣಚೂರು ಶಾಲೆಯಲ್ಲಿ ಅಂತರ್ ಶಾಲಾ ಮಟ್ಟದ “TABLE TENNIS TITANS”- 2025 ಟೇಬಲ್ ಟೆನ್ನಿಸ್ ಪಂದ್ಯಾಟವು ICSE ಮತ್ತು CBSE ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಂಘದ ವತಿಯಿಂದ ದಿನಾಂಕ 01.09.2025ರಂದು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಒಟ್ಟು 20 ಶಾಲೆಗಳ 45 ತಂಡಗಳು ಪಾಲ್ಗೊಂಡಿದ್ದವು.
ರಾಷ್ಟ್ರೀಯ ಪದಕ ವಿಜೇತ ಮತ್ತು ವೃತ್ತಿಪರ ಟೇಬಲ್ ಟೆನ್ನಿಸ್ ತರಬೇತಿದಾರರು ಶ್ರೀ ಅಶ್ವಿನ್ ಕುಮಾರ್ ಪಡುಕೋಣೆ, ಕಣಚೂರು ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ. ಹಾಜಿ ಯು ಕೆ ಮೋನು, ಕಣಚೂರು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕರು ಶ್ರೀಯುತ ಅಬ್ದುಲ್ ರಹಿಮಾನ್, ಕಣಚೂರು ವಿದ್ಯಾಸಂಸ್ಥೆಯ ಟ್ರಸ್ಟಿಯವರಾದ ಶ್ರೀಮತಿ ಉಮಯ್ಯ ಬಾನು, ಪ್ರೊ. ಡಾ. ಎಂ ಅಬ್ದುಲ್ ರಹಿಮಾನ್ ಮಾಜಿ ಕುಲಪತಿಗಳು, ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯ, ಸಲಹಾ ಮಂಡಳಿಯ ಅಧ್ಯಕ್ಷರು, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೆಂದ್ರದ ಆಡಳಿತಾಧಿಕಾರಿ ಡಾಕ್ಟರ್ ರೋಹನ್ ಮೋನಿಸ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇದರ ಡೀನ್ ರವರಾದ ಡಾಕ್ಟರ್ ಷಹನವಾಝ್, ಕಣಚೂರು ಅಲೈಯ್ಡ್ ಹೆಲ್ತ್ ಸೈನ್ಸ್ ವಿಭಾಗದ ಪ್ರಾಂಶುಪಾಲರಾದ ಡಾಕ್ಟರ್ ಶಮೀಮ ಷಹನವಾಝ್, ಕಣಚೂರು ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್ ಇದರ ಪ್ರಾಂಶುಪಾಲರಾದ ಪ್ರೊಫೆಸರ್ ಇಕ್ಬಾಲ್ ಅಹಮದ್ ಯು.ಟಿ, ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಾಹಿದಾ ಬಿ.ಎಂ, ಕಣಚೂರು ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಕ್ಯಾರೆನ್ ಟ್ರೆಸ್ಸಿಲ್ಲಾ ಡಿಸೋಜ, ಕಣಚೂರು ಪ್ರೀ ಸ್ಕೂಲ್ನ ಪ್ರಾಂಶುಪಾಲರಾದ ಶ್ರೀಮತಿ ಲಿನೆಟ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಅಶ್ವಿನ್ ಕುಮಾರ್ ಪಡುಕೋಣೆ ಅವರು ತಮ್ಮ ಅತಿಥಿ ಭಾಷಣದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ನಮ್ಮ ಜೀವನದಲ್ಲಿ ಟೇಬಲ್ ಟೆನ್ನಿಸ್‌ನ ಮಹತ್ವದ ಕುರಿತು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಮುಂಬರುವ ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದ ಅವರು ಕ್ರೀಡೆಯ ಬಗ್ಗೆ ಪರಿಣಿತ ಮಾರ್ಗದರ್ಶನ ನೀಡಿದರು.

ಕಣಚೂರು ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ. ಹಾಜಿ ಯು ಕೆ ಮೋನುರವರು ಕಠಿಣ ಅಭ್ಯಾಸ, ಶಿಸ್ತು, ಒಗ್ಗಟ್ಟು, ದೈಹಿಕ ಕಾರ್ಯಕ್ಷಮತೆ ಉತ್ತಮ ಆಟಗಾರರ ಗುಣಗಳು ಎಂದು ವಿದ್ಯಾರ್ಥಿಗಳಿಗೆ ಹಿತವಚನವನ್ನು ನುಡಿದರು.
ಶಿಕ್ಷಕಿ ಕುಮಾರಿ ನಿಶಾ ಡಿಸೋಜರವರು ಸ್ವಾಗತಿಸಿ, ಪ್ರಾಂಶುಪಾಲರಾದ ಶ್ರೀಮತಿ ಕ್ಯಾರೆನ್ ಟ್ರೆಸ್ಸಿಲಾ ಡಿಸೋಜರವರು ಅತಿಥಿಗಳನ್ನು ಪರಿಚಯಿಸಿದರು. ಕಣಚೂರು ಪ್ರೀ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ಲಿನೆಟ್ ಡಿಸೋಜರವರು ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಸುವರ್ಣ ಹಾಗೂ ಶ್ರೀಮತಿ ಬಜಾವಿನಾ ಅವರು ಕ್ರಾರ್ಯಕ್ರಮವನ್ನು ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಕಣಚೂರು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕರು ಶ್ರೀಯುತ ಅಬ್ದುಲ್ ರಹಿಮಾನ್, ಕಣಚೂರು ವಿದ್ಯಾಸಂಸ್ಥೆಯ ಟ್ರಸ್ಟಿಯವರಾದ ಶ್ರೀಮತಿ ಉಮಯ್ಯ ಬಾನುರವರು, ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೆಂದ್ರದ ಆಡಳಿತಾಧಿಕಾರಿ ಡಾಕ್ಟರ್ ರೋಹನ್ ಮೋನಿಸ್, ಕಣಚೂರು ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್ ಇದರ ಪ್ರಾಂಶುಪಾಲರಾದ ಪ್ರೊಫೆಸರ್ ಇಕ್ಬಾಲ್ ಅಹಮದ್ ಯು.ಟಿ ವಿಜೇತರಿಗೆ ಬಹುಮಾನ ಹಾಗೂಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಿದರು.

ದೈಹಿಕ ಶಿಕ್ಷಣದ ಶಿಕ್ಷಕರಾದ ಕುಮಾರಿ ಶ್ರದ್ಧಾ ಶೆಟ್ಟಿ, ದೀಕ್ಷಿತ್, ಪಂದ್ಯಾಕೂಟದ ತೀರ್ಪುಗಾರ ಅಶ್ವಿನ್ ಪಡುಕೋಣೆ ಪಂದ್ಯಾಕೂಟ ಯಶಸ್ವಿಗೊಳಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದರು.
