ಕಾಡುಮಠ ಪ್ರಾಥಮಿಕ ಶಾಲೆಗೆ ಸ್ವಚ್ಚ ನೀರಿನ ಘಟಕ ಕೊಡುಗೆ

Date:

ಬಂಟ್ವಾಳ: ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಮುಖ್ಯೋಪಾಧ್ಯಾಯಯರು ಕೊಳ್ನಾಡು ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ಅವರಿಗೆ ಸ್ವಚ್ಚನೀರಿನ ಘಟಕ ನೀಡಲು ಮನವಿ ಸಲ್ಲಿಸಿದ್ದರು.ಮನವಿಗೆ ಸ್ಪಂದಿಸಿ ಸಮಾಜಿಕ ಮುಖಂಡರೂ,ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ ಸಹಕಾರದಿಂದ ಸಂಘ ಸಂಸ್ಥೆಯೊಂದರ ಮುಖಾಂತರ ಸ್ವಚ್ಚನೀರಿನ ಘಟಕವನ್ನು ಇಂದು ಹಸ್ತಾಂತರಿಸಲಾಯಿತು.ಇದರ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿ ನಾಯಕ ಮನ್ವಿತ್ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಕೊಳ್ನಾಡು ಗ್ರಾ.ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ‌.ಸಾಲೆತ್ತೂರು, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅದ್ಯಕ್ಷರಾದ ಆರಿಪ್ ಕರೈ, ಅನುಗ್ರಹ ಕಾಲೇಜು ಟ್ರಸ್ಟಿ ಹೈದರ್ ನೀರ್ಕಜೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಅದ್ಯಕ್ಷರಾದ ಶ್ವೇತಾ ಮೇಡಂ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಸ್ಮ ಹಸೈನಾರ್, ಕಾಡುಮಠ ಶಾಲೆಯ ಹಳೆವಿದ್ಯಾರ್ಥಿ ಸಂಘದ ಹಪೀಝ್ ಸಾಲೆತ್ತೂರು, ಅನುಗ್ರಹ ಕಾಲೇಜು ಉಪನ್ಯಾಸಕಿ ರಾಬೀಯ, ಶಾಲಾಬಿವೃದ್ದಿ ಸಮಿತಿಯ ಸದಸ್ಯರಾದ ಇಕ್ಬಾಲ್ ಬಸಬೆಟ್ಟು, ಖಾದರ್ ಸಾಲೆತ್ತೂರು, ಶಿಕ್ಷಕಿಯರಾದ ಶಶಿ.ಬಿ, ಪುಷ್ಪಾವತಿ, ಕೀರ್ತಿ. ಕೆ,ಧನ್ಯ ಕೆ., ಗೌರವ ಶಿಕ್ಷಕಿ ಸೆಕಿನ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಪ್ರಬಾರ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿ, ಲತಾ ಎಸ್.  ಧನ್ಯವಾದ ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...