ಅಧ್ಯಕ್ಷರಾಗಿ ಅಡ್ವೊಕೇಟ್ ಸಿದ್ದಿಕ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ತಾಜುದ್ದೀನ್ ಮಂಗಳೂರು ಆಯ್ಕೆ
ಮಂಗಳೂರು, ಅ.17: ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕ ಇದರ ಕರಾವಳಿ ಜಿಲ್ಲೆಗಳ ವಕೀಲರ ವೇದಿಕೆಯ ಸಭೆಯು ಮಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯಿತು.

ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕದ ಅಧ್ಯಕ್ಷರಾದ ಅಡ್ವೊಕೇಟ್ ಬಾಲನ್ (ಬೆಂಗಳೂರು ಹೈಕೋರ್ಟ್)ರವರ ನಿರ್ದೇಶನದಂತೆ AILC ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹೈಕೋರ್ಟ್ ನ ಖ್ಯಾತ ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ರಚಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳು:
- ಅಧ್ಯಕ್ಷರು: ಅಡ್ವೊಕೇಟ್ ಸಿದ್ದಿಕ್ ಹಾಜಿ, ಪುತ್ತೂರು
- ಉಪಾಧ್ಯಕ್ಷರು: ಅಡ್ವೊಕೇಟ್ ಜೀಶಾನ್ ಅಲಿ, ಮಂಗಳೂರು ಮತ್ತು ಅಡ್ವೊಕೇಟ್ ಗ್ರೆಗೋರಿ ಡಿಸೋಜ, ಪುತ್ತೂರು
- ಪ್ರಧಾನ ಕಾರ್ಯದರ್ಶಿ: ಅಡ್ವೊಕೇಟ್ ತಾಜುದ್ದೀನ್, ಮಂಗಳೂರು
- ಕಾರ್ಯದರ್ಶಿ: ಅಡ್ವೊಕೇಟ್ ರಶೀದ್, ಸುಳ್ಯ
- ಖಜಾಂಚಿ: ಅಡ್ವೊಕೇಟ್ ಇಜ್ಹಾಜ್, ಬಂಟ್ವಾಳ

ಸಭೆಯಲ್ಲಿ ವಕೀಲರ ಹಕ್ಕುಗಳು, ವೃತ್ತಿಪರ ಸಮಸ್ಯೆಗಳು, ನ್ಯಾಯಾಂಗ ಕ್ಷೇತ್ರದಲ್ಲಿ ವಕೀಲರು ಎದುರಿಸುತ್ತಿರುವ ಸವಾಲುಗಳು ಹಾಗೂ ವಕೀಲರ ಸಂಘಟನೆಯನ್ನು ಬಲಪಡಿಸುವ ಕುರಿತು ಚರ್ಚಿಸಲಾಗಿದ್ದು, ಕರಾವಳಿ ಭಾಗದ ವಕೀಲರನ್ನು ಸಂಘಟಿಸಿ, ಅವರ ವೃತ್ತಿಪರ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಘಟಕವನ್ನು ರಚಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಸಾಹಿರಾ ಕೆ. ಜುಬೈರ್ (ಬೆಂಗಳೂರು), ಹಾಗೂ ಅಡ್ವೊಕೇಟ್ ಅಶ್ರಫ್ ಕೆ. (ಪುತ್ತೂರು) ಅವರು ಉಪಸ್ಥಿತರಿದ್ದರು.



