ತೊಕ್ಕೊಟ್ಟು: ಆಯಾದಿ ಕ್ಲೌಡ್‌ವರ್ಸಿಟಿ ನ ಕಾರ್ಪೊರೇಟ್ ಕಚೇರಿ ಉದ್ಘಾಟನೆ

Date:

ಉಳ್ಳಾಲ: ಅಯಾದಿ ಕ್ಲೌಡ್‌ವರ್ಸಿಟಿ ಯ ಮಂಗಳೂರು ಕಾರ್ಪೊರೇಟ್ ಕಚೇರಿಯನ್ನು ತೊಕ್ಕೊಟ್ಟು ರಹಮತ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಮುಖ್ಯ ಅತಿಥಿಯಾಗಿದ್ದರು. ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಶರೀಫ್ ಉಳ್ಳಾಲ ಇದರ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೊಳಿಯಾರ್ ಹಾಗೂ SMR ಎಜುಕೇಶನ್ ಅಕಾಡೆಮಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಭಾಗವಹಿಸಿದ್ದರು. ಅನುದಾನಿತ ಶಾಲಾ ಶಿಕ್ಷಕರ ಅಸೋಸಿಯೇಷನ್ನಿನ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಹಾಗೂ ಶಕ್ತಿ ರೆಸಿಡೆನ್ಷಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸುರಾಜ್ ಹಾಜರಿದ್ದರು.



ಉಳ್ಳಾಲ ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ರಹಮತ್ ಕಾಂಪ್ಲೆಕ್ಸ್ ಮಾಲೀಕರಾದ ಆರ್.ಎಂ. ಮನ್ಸೂರ್ ಹಾಜಿ, ತಕ್ವಾ ಜುಮಾ ಮಸೀದಿ ಪಂಪ್ವೆಲ್ ಪ್ರಧಾನ ಮ್ಯಾನೇಜರ್ ಹಸನ್ ಕುಂಞಿ, ಲೇಖಕ-ಪ್ರಕಾಶಕ ಡಿ.ಐ. ಅಬೂಬಕ್ಕರ್ ಕೈರಂಗಳ , ರಶೀದ್ ರಹಮತ್, ನಿತಿನ್ ರಾಜ್, ವಕೀಲರಾದ ಬಿ. ರಾಮಚಂದ್ರ, ಡೆಮರಿಟ್ಸ್ ಡೆಲ್ಕಾ ಡಿಸೋಜಾ, ಸಲಾಂ, ರಿಜ್ವಾನ್ ಎಂಪೈರ್ , ಅಯಾದಿ ಕ್ಲೌಡ್‌ವರ್ಸಿಟಿಯ ಆಡಳಿತ ನಿರ್ದೇಶಕರಾದ ಇಬ್ರಾಹಿಂ ಸಖಾಫಿ ಕೊಟ್ಟೂರು, ಧಾರ್ಮಿಕ ಪರಿಷತ್‌ ಸದಸ್ಯ ಸುರೇಶ್‌ ಭಟ್ನಗರ, ಅಯಾದಿ ಕ್ಲೌಡ್‌ ವರ್ಸಿಟಿಯ ಚೇರ್‌ ಮೆನ್‌ ಎಂ.ಕೆ.ಸಿರಾಜುದ್ದೀನ್‌, ಉನೈಸ್‌ ಮಾಂಗಾಡ್‌, ಹ್ಯಾರೀಸ್‌ ಮಾಂಗಾಡ್‌, ಫೈಝಲ್‌ ನೆರೊತ್ತು, ಅಯಾದಿ ಗ್ಲೋಬಲ್‌ ಸ್ಕೂಲ್‌ ಪ್ರಾಂಶುಪಾಲೆ ಡಾ.ಅಜಿತಾ ಹೇಮಚಂದ್ರನ್‌, ಮುಖ್ಯ ಸೇಲ್ಸ್‌ ಮುಖ್ಯಸ್ಥೆ ಶ್ಯಾಮಿಲಿ ದೀಪಕ್‌, ಕಾರ್ಯಕ್ರಮ ಸಂಯೋಜಕಿ ಜಿಶಾ ಬೈಜು, ಸಾರ್ವಜನಿಕ ಸಂಪರ್ಕ ಅಧಿಕಾರಿ ಶಕೀರಾ, ಅಂಶಿದಾ ಆಯಿಪಾಡಿ ಉಪಸ್ಥಿತರಿದ್ದರು.
ಮೊಹಮ್ಮದ್‌ ತಾಜುದ್ದೀನ್‌ ಉಳ್ಳಾಲ್‌ ವಂದಿಸಿದರು.

ಮದುವೆ ಬೇರೆ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿರುವ ಮಹಿಳೆಯರಿಗಾಗಿ ಇದೊಂದು ವಿಪುಲ ಅವಕಾಶ. ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೂ ಆನ್ಲೈನ್‌ ಶಿಕ್ಷಣ ನೀಡುವ ಅಯಾದಿ ಸಂಸ್ಥೆಯ ಕಾರ್ಯ ಶ್ರೇಷ್ಟವಾದುದು. ಮನೆಯಲ್ಲಿದ್ದರೂ ತಮಗಿಷ್ಟ, ಅನುಕೂಲಕರ ಶಿಕ್ಷಣವನ್ನು ಇರುವಲ್ಲಿಯೇ ಪಡೆಯಲು ಅವಕಾಶವನ್ನು ಅಯಾದಿ ಸಂಸ್ಥೆ ಕಲ್ಪಿಸಿರುವುದು ಶ್ಲಾಘನೀಯ.
ಬಬಿತಾ ಸುರಾಜ್
ಪ್ರಾಂಶುಪಾಲೆ
ಶಕ್ತಿ ರೆಸಿಡೆನ್ಷಿಯಲ್ ಶಾಲೆ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸ್ಥಾಪನೆ ಮಾಡಿರುವ ಸಂಸ್ಥೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ. 2060ರಲ್ಲಿ ವಿಶ್ವದಲ್ಲೇ ಮುಖ್ಯವಾಹಿನಿಯಲ್ಲಿ ಇರಬೇಕು ಅನ್ನುವ ಉದ್ದೇಶದೊಂದಿಗೆ ಸಂಸ್ಥೆ ಕಾರ್ಯಾಚರಿಸುತ್ತಿದೆ. ಪ್ರಾಮಾಣಿಕ, ಬದ್ಧತೆಯೊಂದಿಗೆ ಸ್ಥಾಪನೆಗೊಂಡಿರುವ ಅಯಾದಿ ಕ್ಲೌಡ್‌ವರ್ಸಿಟಿ ಯ ಶೈಕ್ಷಣಿಕ ಕ್ಷೇತ್ರದಲ್ಲಿರುವ ಜ್ಞಾನ ಸರ್ವರಿಗೂ ಪ್ರಯೋಜನವಾಗಲಿ.
ಯು.ಟಿ.ಖಾದರ್‌
ವಿಧಾನಸಭಾ ಅಧ್ಯಕ್ಷರು.

ಉಳ್ಳಾಲಕ್ಕೆ ನೂತನ ಸೇತುವೆಯೂ ನಿರ್ಮಾಣಗೊಳ್ಳಲಿದೆ. ಕ್ಷೇತ್ರದ ಶಾಸಕರು ರಾಜ್ಯದಲ್ಲೇ ಅಭಿವೃದ್ಧಿಯಲ್ಲಿ ಉಳ್ಳಾಲವನ್ನು ಉತ್ತುಂಗದಲ್ಲಿರಿಸಿದ್ದಾರೆ. ಇಂತಹ ಪ್ರದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಶೈಕ್ಷಣಿಕ ಸಂಸ್ಥೆ ಬೇರೂರಿರುವುದು ಬಹಳಷ್ಟು ಉಪಯೋಗವಾಗಲಿದೆ. ಇದೀಗ ಆಧುನಿಕ ಸಂಸ್ಥೆಯನ್ನು ಆರಂಭಿಸಿದಂತಹ ಶ್ರೇಷ್ಟ ವ್ಯಕ್ತಿತ್ವದ ವ್ಯಕ್ತಿಯ ತರಬೇತಿ ಪಡಕೊಂಡವರು ಪ್ರಸ್ತುತ ಉನ್ನತ ಹುದ್ದೆಗಳಲ್ಲಿದ್ದಾರೆ. ಶಿಕ್ಷಣವನ್ನು ನೀಡುವ ಶಿಕ್ಷಕರು ಅಮೂಲ್ಯವಾಗಿರಬೇಕು, ಗುಣಮಟ್ಟವನ್ನು ಕಾಯುವವರಾಗಬೇಕು, ಅಂತಹ ಶಿಕ್ಷಕರಿಗೆ ತರಬೇತಿ ಕೊಡುವ ಸಂಸ್ಥೆಯ ಕಾರ್ಯ ಶ್ಲಾಘನೀಯ
ಹನೀಫ್‌ ಹಾಜಿ
ಅಧ್ಯಕ್ಷರು
ಉಳ್ಳಾಲ ದರ್ಗಾ ಸಮಿತಿ

ನೆರೆ ಪೀಡಿತ ಸಂದರ್ಭದ ಬಡತನದಲ್ಲಿ ಜೀವನ ನಡೆಸಿದವನು. ಇಬ್ರಾಹಿಂ ಹಾಜಿ ಅವರ ಅಧ್ಯಕ್ಷದ ಅವಧಿಯಲ್ಲಿ ಉಳ್ಳಾಲ ದರ್ಗಾ ಸಮಿತಿ ಅನೇಕ ಜನಪರ ಕಾರ್ಯಗಳನ್ನು ನಡೆಸಿದಂತಹ ನಾಡು ಉಳ್ಳಾಲ. ಯು.ಟಿ.ಫರೀದ್‌ ಅವರು ಶಾಸಕರಾಗಿದ್ದ ಅವಧಿಯಲ್ಲಿ ಸರಕಾರಿ ಶಾಲೆಗೆ ನ್ಯೂಪಡ್ಪುವಿನಲ್ಲಿ ಒಂದು ಎಕರೆಯಷ್ಟು ಜಾಗವನ್ನು ಒದಗಿಸಿ ಅದಕ್ಕಾಗಿ ಶ್ರಮವಹಿಸಿದ ಪರಿಣಾಮ ಇಂದು ಪ್ರಶಸ್ತಿಯನ್ನು ಪಡೆದುಕೊಳ್ಳುವಂತಾಗಿದೆ. ಬಡತನದಲ್ಲಿ ಹುಟ್ಟಿದವನಿಗೆ ಇಂತಹ ವೇದಿಕೆಗಳು ದೊರೆಯಲು ಮಾಧ್ಯಮಗಳು ಕಾರಣ. ಅತ್ಯುನ್ನತ ಶಿಕ್ಷಣ ಕಲಿಸುವ ವಿಧಾನಗಳ ಸಂಸ್ಥೆ ತೊಕ್ಕೊಟ್ಟುವಿನಲ್ಲಿ ಆರಂಭವಾಗಿರುವುದು ಈ ಭಾಗದ ಎಲ್ಲರಿಗೂ ಸಹಕಾರಿಯಾಗಲಿದೆ.
ಪದ್ಮಶ್ರೀ ಪುರಸ್ಕೃತ
ಹರೇಕಳ ಹಾಜಬ್ಬ

ಆನ್ಲೈನ್‌ ನಲ್ಲಿ ಟೀಚಿಂಗ್‌, ಕೋಚಿಂಗ್‌, ಏಳನೇ ತರಗತಿ ಮೇಲ್ಪಟ್ಟ ಒಪ್ರಮುಖವಾಗಿ ಮಹಿಳೆಯರಿಗೆ ಶಿಕ್ಷಣ ನೀಡುವ ಕಾರ್ಯ ಉತ್ತಮವಾಗಿದೆ. ವಿದೇಶಕ್ಕೆ ತೆರಳುವ ಯುವಕರಾಗಲಿ, ಯುವತಿಯರಾಗಲಿ ದೇಶದ ನಂಟನ್ನೇ ಕಳೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಕೇರಳದ ಕ್ಯಾಲಿಕಟ್‌ ಸೇರಿದಂತೆ ವಿವಿದೆಡೆ ಸ್ಥಾಪನೆಗೊಂಡು ಕಾರ್ಯಾಚರಿಸುತ್ತಿರುವ ಸಂಸ್ಥೆ ಇದೀಗ ಶಿಕ್ಷಣ ಕಾಶಿಯೆಂದೇ ಆಗಿರುವ ಮಂಗಳೂರಿನ ತೊಕ್ಕೊಟ್ಟುವಿಗೆ ಪಾದಾರ್ಪಣೆಗೊಂಡಿರುವುದು ಉತ್ತಮವಾಗಿದೆ. ತಖ್ವಾ ಅಕಾಡೆಮಿಯೂ ವಿಶೇಷ ರೀತಿಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿದ ಫಲವಾಗಿ ಹಲವರು ವೈದ್ಯರು, ಇಂಜಿನಿರುಗಳಾಗಿರುವುದು ಖುಷಿಯನ್ನು ಕೊಟ್ಟಿದೆ.
ರಶೀದ್‌ ಹಾಜಿ
ಚೇರ್ಮೆನ್
ಎಸ್‌ ಎಂ ಆರ್‌ ಎಜ್ಯುಕೇಷನ್‌ ಅಕಾಡೆಮಿ

ಶಿಕ್ಷಣವನ್ನು ಸಾರ್ಥಕ್ಯ ರೀತಿಯಲ್ಲಿ ಕಾರ್ಯಾಚರಿಸುವ ಸಂಸ್ಥೆಯಾಗಿ ಹೊರಹೊಮ್ಮಲಿ. ಕಿತ್ತಳೆ ಹಣ್ಣು ಮಾರಾಟ ನಡೆಸಿ ಇಡೀ ಸರಕಾರಿ ಶಾಲಾ ಕಾಲೇಜನ್ನು ಬೆಳಗಿಸಿದಂತಹ ಹೃದಯವಂತನ ಕೈಯಲ್ಲಿ ಸಂಸ್ಥೆಯನ್ನು ಉದ್ಘಾಟಿಸಿರುವುದು ಉತ್ತಮ ಕಾರ್ಯವಾಗಿದೆ. ಉಳ್ಳಾಲದಲ್ಲಿ ಸಾಮರಸ್ಯ ಕಾಣಲು ದರ್ಗಾ ಅಧ್ಯಕ್ಷರು ಹೇಳಿದಂತೆ ಆಯಾದಿ ಸಂಸ್ಥೆ ಕಾರ್ಯಾಚರಿಸಲಿ. ೧೪,೦೦೦ ಶಿಕ್ಷಕರು ಇರುವಂತಹ ಸಂಸ್ಥೆಯ ವೇದಿಕೆಯಾಗಿರುವುದು ಗೌರವದಾಯಕ. ಕಲಾಂ ಉಸ್ತಾದ್‌ ಅವರ ಕನಸ್ಸು ಈಡೇರಲಿ ಎಂದರು.
ಸಂತೋಷ್‌ ರೈ ಬೋಳಿಯಾರ್‌
ದಿ ಮೈಸೂರ್‌ ಇಲೆಕ್ಟ್ರಿಕಲ್ಸ್‌

ಅಯಾದಿ ಕ್ಲೌಡ್‌ ವರ್ಸಿಟಿಯ ಆಸ್ಟ್ರೇಲಿಯಾದ ಸಿಇಓ ಡಾ.ಅಮೀರ್‌ ಹಸನ್‌ ಮಾತನಾಡಿ, ಡಿಜಿಟಲ್ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿರುವ ಆಯಾದಿ ಕ್ಲೌಡ್‌ವರ್ಸಿಟಿ , ಈ ಹೊಸ ಕಾರ್ಪೊರೇಟ್ ಕಚೇರಿಯ ಮೂಲಕ ಮಂಗಳೂರಿನಲ್ಲಿಯೂ ಸುತ್ತಮುತ್ತಲೂ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದೆ. ಆಯಾದಿ ಕ್ಲೌಡ್‌ವರ್ಸಿಟಿ ಸಮಗ್ರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಮಕ್ಕಳಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ಒದಗಿಸಲು ಆಯಾದಿ ಕ್ಲೌಡ್‌ವರ್ಸಿಟಿ ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಅಕಾಡೆಮಿಕ್ ಶ್ರೇಷ್ಠತೆ, ವ್ಯಕ್ತಿತ್ವ ವಿಕಸನ ಮತ್ತು ನೈಜಜೀವನದ ಸಿದ್ಧತೆಯನ್ನು ಒಟ್ಟುಗೂಡಿಸುವ ಮೂಲಕ ವಿದ್ಯಾರ್ಥಿಗಳು ಶಾಲೆ, ವಿಶ್ವವಿದ್ಯಾಲಯ ಹಾಗೂ ಭವಿಷ್ಯದ ಬದುಕಿನಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಅವಕಾಶ ಕಲ್ಪಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಸಂಸ್ಥೆಯ ಪ್ರತಿನಿಧಿಗಳು ತಿಳಿದುಕೊಂಡಂತೆ, “ನಮ್ಮ ದೃಷ್ಟಿಕೋನ ಕೇವಲ ಪಾಠ ಹೇಳುವುದಲ್ಲ, ಬದಲಾಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸಂವಹನ ಕೌಶಲ ಮತ್ತು ಜಾಗತಿಕ ಅರಿವು ಬೆಳೆಸುವ ವಾತಾವರಣ ನಿರ್ಮಾಣ ಮಾಡುವುದಾಗಿದೆ” ಎಂದು ಹೇಳಿದರು. ಆಯಾದಿ ಕ್ಲೌಡ್‌ವರ್ಸಿಟಿಯ ಮುಖ್ಯ ಆಫರ್‌ಗಳು: ಆಟ ಆಧಾರಿತ ಕಲಿಕೆ: ಮಕ್ಕಳಲ್ಲಿ ಕುತೂಹಲ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ರಂಜನಾತ್ಮಕ ಚಟುವಟಿಕೆಗಳು. ಪ್ರಿ-ಸ್ಕೂಲ್‌ನಿಂದ ಪ್ರೌಢಶಾಲೆವರೆಗೆ: ಪಾಠ್ಯಮೂಲಗಳ ಬಲವಾದ ಆಧಾರಗಳೊಂದಿಗೆ ಆಟ, ತಂಡ ಕಾರ್ಯ ಹಾಗೂ ಸಮಸ್ಯೆ ಪರಿಹಾರ ಕೌಶಲಗಳನ್ನು ಬೆಳೆಸುವುದು. ಭಾಷೆ ಮತ್ತು ಸಂವಹನ ವಿಕಸನ: ಕಲೆ, ಲಯ ಹಾಗೂ ಭಾಷಾ ಕೌಶಲಗಳ ಮೂಲಕ ವಿದ್ಯಾರ್ಥಿಗಳ ಆತ್ಮಪ್ರತಿಪಾದನೆಗೆ ಉತ್ತೇಜನ. ಉನ್ನತ ಶಿಕ್ಷಣ ಕಾರ್ಯಕ್ರಮಗಳು: ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವ ವಿದ್ಯಾರ್ಥಿಗಳನ್ನು ರೂಪಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ ಒದಗಿಸುವುದು. “ಸ್ಥಳೀಯ ನೆಲೆ – ಜಾಗತಿಕ ದೃಷ್ಟಿ” ಎಂಬ ಧ್ಯೇಯದೊಂದಿಗೆ ಆಯಾದಿ ಕ್ಲೌಡ್‌ವರ್ಸಿಟಿ ತನ್ನನ್ನು ಪರಿಚಯಿಸಿಕೊಂಡಿದ್ದು, ಪಾಠಪುಸ್ತಕಗಳ ಪಾರವಾಗಿ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಗುರಿ ಹೊಂದಿದೆ ಎಂದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ....

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...