
ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ ಮದರಸ ಸುರಿಬೈಲ್ ಇದರ ವತಿಯಿಂದ “ಮಿಸ್ಕೆ ಮದೀನಾ” ರಬೀಹ್ ಫೆಸ್ಟ್ 2ಕೆ25 ಕಾರ್ಯಕ್ರಮವು 2025 ಸೆಪ್ಟೆಂಬರ್ 14 ಆದಿತ್ಯವಾರದಂದು ನಡೆಯಲಿದೆ.
ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅದ್ಯಕ್ಷರಾದ ಅಬ್ದುಲ್ ಅಝೀಝ್ ದೊಡ್ಡಮನೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬಹುಮಾನ್ಯರಾದ ಮುಹಮ್ಮದ್ ಸಖಾಫಿ ಮುದರ್ರಿಸ್ ಸುರಿಬೈಲ್ ಇವರು ದುವಾಃ ಆಶೀರ್ವಚನಗೈದು ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನಡೆಯುವ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆ ಹಾಗೂ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸುರಿಬೈಲ್ ನುಸ್ರತುಲ್ ಉಲೂಂ ಮದರಸ ಸಮಿತಿ ತಿಳಿಸಿದೆ.