
ಮುಂಬಯಿ, ಸೆ.೧೦: ಅನಿವಾಸಿ ಭಾರತೀಯರಲ್ಲಿನ ಹೆಸರಾಂತ ಸಂಸ್ಥೆ ಕನ್ನಡ ಸಂಘ ಬಹ್ರೇನ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಳೆದ ಶುಕ್ರವಾರ ಬಹ್ರೇನ್‌ನ ಮನಾಮದಲ್ಲಿನ ಬಹ್ರೇನ್ ಕಲ್ಚರಲ್ ಹಾಲ್‌ನಲ್ಲಿ ನೆರವೇರಿಸಲ್ಪಟ್ತಿತು.
ಕರ್ನಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್, ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ ಕರ್ನಾಟಕ) ಇದರ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಅಂತರಾಷ್ಟಿçÃಯ ಪ್ರಸಿದ್ಧ ಕಲಾವಿದ ಜಾದೂಗಾರ ಕುದ್ರೋಳಿ ಗಣೇಶ್ ಮ್ಯಾಜಿಕ್-ಮೈಂಡ್-ಮಿಸ್ಟರಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕನ್ನಡಿಗರು ಕುದ್ರೋಳಿ ಗಣೇಶ್ ಅವರು ಪ್ರೇಕ್ಷಕರಿಗೆ ವಿಭಿನ್ನ ರಂಜನೆ ನೀಡಿದ್ದು, ಮೈಂಡ್ ಮ್ಯಾಜಿಕ್ ಸಮ್ಮೋಹಿನಿಗೆ ಬೆರಗಾಗಿ ಮನಸ್ಸಿನ ಭಾವನೆಗಳನ್ನು ಓದುವ ಚಮತ್ಕಾರವನ್ನು ಕಂಡು ಅಚ್ಚರಿಗೊಂಡರು.
ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಕುದ್ರೋಳಿ ಗಣೇಶ್ ನನ್ನ ಬದುಕಿನ ಮೊದಲನೇ ವಿದೇಶ ಪ್ರಯಾಣ ಬಹರೇನ್ ಆಗಿದ್ದು ೧೯೯೭ರಲ್ಲಿ ಪ್ರದರ್ಶನ ಸೇರಿದಂತೆ ಮೂರನೇ ಬಾರಿಗೆ ಬಹ್ರೇನ್‌ವಾಸಿ ಕನ್ನಡಿಗರೊಂದಿಗೆ ಬೆರೆಯಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದರು.
ಬೆಹರೇನ್ ಕನ್ನಡ ಸಂಘದ ನೂತನ ಅಧ್ಯಕ್ಷ ಅಜಿತ್ ಬಂಗೇರಾ ಅವರು ಕುದ್ರೋಳಿ ಗಣೇಶ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.




