
ಉಳ್ಳಾಲ,ಸೆ11 : ಎಸ್.ಡಿ.ಪಿ.ಐ ದೇರಳಕಟ್ಟೆ ಬ್ಲಾಕ್ ಸಮಿತಿಯ ಮಾಸಿಕ ಸಭೆಯು ಬ್ಲಾಕ್ ಅಧ್ಯಕ್ಷರಾದ ಕಮರುದ್ದೀನ್ ಮಲಾರ್ ರವರ ಅಧ್ಯಕ್ಷತೆಯಲ್ಲಿ ದೇರಳಕಟ್ಟೆಯ ಪಕ್ಷದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಗೆ ಮಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್ ಕೆ ಪಕ್ಷದ ಬಲವರ್ಧನೆ,ನಿಧಿ ಸಂಗ್ರಹ ಹಾಗೂ ಮುಂಬರುವ ಚುನಾವಣೆಯಲ್ಲಿ ಪಕ್ಷದ ನಾಯಕರ ಸಕ್ರಿಯ ಪಾಲ್ಗೊಳ್ಳುವಿಕೆಯ ಕುರಿತು ಒತ್ತಿ ಹೇಳಿದರು.
ಸಭೆಯಲ್ಲಿ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬುವಂತೆ,ಸದಸ್ಯತ್ವ ವಿಸ್ತರಣೆ,ವಿವಿಧ ಘಟಕಗಳ ಶಕ್ತಿಕೇಂದ್ರಿತ ಚಾಲನೆ,ಸಾರ್ವಜನಿಕ ಜಾಗೃತಿ ಅಭಿಯಾನಗಳು ಹಾಗೂ ರಾಜಕೀಯ ಚಟುವಟಿಕೆಗಳ ಬಗ್ಗೆ ವಿವರಣೆ ಚರ್ಚೆ ನಡೆಯಿತು.
ಈ ಸಭೆಯಲ್ಲಿ ಮಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯರಾದ ಲತೀಫ್ ಕಲ್ಲಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಝಾಹಿದ್ ಮಲಾರ್ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ದೇರಳಕಟ್ಟೆ ಬ್ಲಾಕ್ ಉಸ್ತುವಾರಿ ಹಾಗೂ ಕ್ಷೇತ್ರ ಸಮಿತಿ ಕಾರ್ಯದರ್ಶಿ ಆರೀಫ್ ಬೋಳಿಯಾರ್ ಕ್ಷೇತ್ರ ಸಮಿತಿ ಸದಸ್ಯರಾದ ಜುನೈದ್ RKC ಬ್ಲಾಕ್ ಸಮಿತಿಯ ಕಾರ್ಯದರ್ಶಿ ಝೈನುದ್ದೀನ್ ಹರೇಕಳ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹರೇಕಳ ಸಮಿತಿ ಸದಸ್ಯರಾದ ನವಾಝ್ ಕುತ್ತಾರ್ ಹಾಗೂ ಗ್ರಾಮ ಸಮಿತಿಯ ನಾಯಕರುಗಳು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಪಕ್ಷದ ಮುಂದಿನ ಹೆಜ್ಜೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಝೈನು ಹರೇಕಳ ಸ್ವಾಗತಿಸಿದರು ನವಾಝ್ ಕುತ್ತಾರ್ ಧನ್ಯವಾದಗೈದರು.