ಮುಡಿಪು: ಓಂ ಶ್ರೀ ಗಣೇಶ ಯುವಕ ಮಂಡಲ (ರಿ) ಹಾಗೂ ಮಹಿಳಾ ಮಂಡಳಿ ಪಾಣೇಲ ಶಾಂತಿನಗರ ಇದರ ನೇತೃತ್ವದಲ್ಲಿ ದಿನಾಂಕ 23/11/2025 ಆದಿತ್ಯವಾರದಂದು 8.00 ಗಂಟೆಗೆ ಕುರ್ನಾಡು ಪಡೀಲ್ ನಿಂದ ಪಾಣೇಲ ಶಾಂತಿನಗರ ಮೈದಾನದ ವರೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು, ಫಜೀರು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಪಾಣೇಲ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ನವೀನ್ ಪಾದಲ್ಪಾಡಿ, ಯುವ ವಕೀಲರಾದ ಮಹಮ್ಮದ್ ಅಸ್ಗರ್ ಮುಡಿಪು, ಬಿಜೆಪಿ ಫಜೀರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಕುಮಾರ್ ಅಡಪ ಫಜೀರುಗುತ್ತು, ಓಂ ಶ್ರೀ ಗಣೇಶ ಯುವಕ ಮಂಡಲದ ಅಧ್ಯಕ್ಷರಾದ ಜಗದೀಶ್ ಕೋಟ್ಯಾನ್ ಪಾಣೇಲ ಹಾಗೂ ಯುವಕ ಮಂಡಲ ಮತ್ತು ಮಹಿಳಾ ಮಂಡಳಿಯ ಸದಸ್ಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

“ನಮ್ಮ ಪರಿಸರ ನಮ್ಮ ಹೊಣೆ” ಅಭಿಯಾನದ ಅಡಿಯಲ್ಲಿ ನಿರಂತರವಾಗಿ ಓಂ ಶ್ರೀ ಗಣೇಶ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.


