
ಪುತ್ತೂರು: ಪಿ.ಬಿ.ಅಬ್ದುಲ್ ರಹಿಮಾನ್ ಹಾಜಿ (ಬಪ್ಪಳಿಗೆ ಅದ್ರಾಮ ಹಾಜಿ )ರವರು ಆರೋಗ್ಯದಲ್ಲಿ ಏರುಪೇರಾಗಿ ರಾತ್ರಿ 01:30ರ ಸಮಯದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದ ದುಃಖದ ವಾರ್ತೆಯನ್ನು ಕೇಳಲು ಸಾಧ್ಯವಾಯಿತು. ಇವರ ನಿಧನಕ್ಕೆ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ.ಸೃಷ್ಟಿಕರ್ತನು ಇವರ ಪರಲೋಕ ಯಾತ್ರೆಯನ್ನು ಸುಗಮಗೊಳಿಸಲಿ. ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರುಇದರ ಅಧ್ಯಕ್ಷರಾದ ಹಾಜಿ ಅಶ್ರಫ್ ಕಲ್ಲೇಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


