ಅಜ್ಮೀರ್ ದರ್ಗಕ್ಕೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತ

Date:

vltvkannada.com ಕೊಣಾಜೆ: ಅಜ್ಮೀರ್ ದರ್ಗಕ್ಕೆ ತೆರಳಿದ್ದ ತೌಡುಗೋಳಿಯ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.
ತೌಡುಗೋಳಿಯ ಶೇಖಬ್ದುಲ್ಲ (60) ಮೃತ ವ್ಯಕ್ತಿ. ನರಿಂಗಾನ ವರ್ಕಾಡಿ ಗಡಿ ಭಾಗ ತೌಡುಗೋಳಿಯ ನಿವಾಸಿ, ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿ ಲಿಂಬೆ ಹಣ್ಣು ವ್ಯಾಪಾರಿಯಾಗಿದ್ದ ಶೇಖಬ್ದುಲ್ಲ ಮೂರು ದಿನಗಳ ಹಿಂದೆ ತನ್ನ ಮಿತ್ರರೊಂದಿಗೆ ಮಂಗಳೂರಿನಿಂದ ಅಜ್ಮಿರ್ ದರ್ಗ ಪ್ರವಾಸ ಕೈಗೊಂಡಿದ್ದರು. ಶುಕ್ರವಾರ ದರ್ಗಾ ದರ್ಶನ ಮುಗಿಸಿದ ಬಳಿಕ ಎದೆನೋವು ಕಂಡುಬಂದಿದ್ದು ಆಸ್ಪತ್ರೆಗೆ ದಾಖಲಿಸುವ ಮುನ್ನ ಸಾವನ್ನಪ್ಪಿದ್ದಾರೆ.


ಶೇಖಬ್ದುಲ್ಲ ಅವರು ಕಳೆದ ನಲ್ವತ್ತು ವರ್ಷಗಳಿಂದ ಲಿಂಬೆ ಹಣ್ಣು ವ್ಯಾಪಾರಿಯಾಗಿದ್ದು ಪ್ರತಿ ವರ್ಷವೂ ಅಜ್ಮಿರ್ ಗೆ ಪ್ರವಾಸ ಕೈಗೊಳ್ಳುತ್ತಿದ್ದರು. ಎರಡು ವರ್ಷದ ಹಿಂದೆಯೂ ಅಜ್ಮಿರ್ ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರೂ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿ ಚೇತರಿಸಿಕೊಂಡಿದ್ದರು. ಶೇಖಬ್ದುಲ್ಲ ಅವರ ಪತ್ನಿ ಎರಡು ವರ್ಷದ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ದಿಢೀರ್ ಸಾವು ಮಾನಸಿಕವಾಗಿ ಒಂದಷ್ಟು ಕುಗ್ಗಿಸಿದ್ದರೂ ಯಾರಿಗೂ ತೋರಿಸಿಕೊಳ್ಳದೆ ಧಾರ್ಮಿಕ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಚೇತರಿಸಿಕೊಂಡಿದ್ದರು. ಶೇಖಬ್ದುಲ್ಲ ಅವರ ಮೃತ ದೇಹವನ್ನು ಅಜ್ಮಿರ್ ನಿಂದ ಶುಕ್ರವಾರ ಮಧ್ಯಾಹ್ನ ಅಂಬುಲೆನ್ಸ್ ಮೂಲಕ ಕರೆತರಲಾಗುತ್ತಿದ್ದು ಶನಿವಾರ ಮಧ್ಯಾರಾತ್ರಿ ಸ್ವಗೃಹಕ್ಕೆ ತಲುಪುವ ನಿರೀಕ್ಷೆ ಇದ್ದು ತೌಡುಗೋಳಿಯ ಮಸೀದಿ ಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಶೇಖಬ್ದುಲ್ಲ ಅವರಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಫೋಟೋ 15ಉಳ್ಳಾಲ್ ಶೇಖಬ್ದುಲ್ಲ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...