ಮೂಡುಬಿದಿರೆ: ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನ ಹಾಗೂ ಶ್ರೀ ವೆಂಕಟರಮಣ ಭಜನಾ ಮಂಡಳಿ ಮೂಡುಬಿದಿರೆ ವತಿಯಿಂದ ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ಅಖಂಡ ಏಕಾಹ ಭಜನಾ ಅಮೃತ ಮಹೋತ್ಸವದಂಗವಾಗಿ ನ.೨೬ಕ್ಕೆ ಪೂ.೮ಕ್ಕೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಬೆಳಿಗ್ಗೆ ೯-೩೦ಕ್ಕೆ ವಿಷ್ಣುಸಹಸ್ರನಾಮ ಹವನ ಆರಂಭಗೊಂಡು ಮಧ್ಯಾಹ್ನ ೧೨ಕ್ಕೆ ಹವನದ ಪೂರ್ಣಾಹುತಿ ನಡೆಯಿತು.



