ಜ್ಞಾನ ವಿಕಾಸ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ: ಶ್ರದ್ದಾ ಅಮಿತ್

Date:

ಮೂಡುಬಿದಿರೆ : ಗ್ರಾಮೀಣ ಪ್ರದೇಶದ ಮಹಿಳೆಯರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಬಲೀಕರಣ ಮಾಡುವ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮಗಳು ಮಹತ್ತರ ಪಾತ್ರವನ್ನು ವಹಿಸಿದೆ ಎಂದು ಬೆಂಗಳೂರು ಕ್ಷೇಮವನದ ಕಾರ್ಯನಿರ್ವಹಣಾಧಿಕಾರಿ ಶೃದ್ಧಾ ಅಮಿತ್ ಹೇಳಿದರು.

ಅವರು ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಬಡಕೋಡಿಯಲ್ಲಿ ಸೋಮವಾರ ನಡೆದ ಜ್ಞಾನವಿಕಾಸ ಸದಸ್ಯರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆಯಿಂದ ಹೊರಗಡೆ ಬಂದು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆಯುವಂತಾಗಿದೆ. ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಂಡು ಆರ್ಥಿಕ ನೆರವಿನ ಸದ್ಬಳಕೆಯನ್ನು ವಿವೇಚನಯುತವಾಗಿ ಬಳಸಿಕೊಂಡು ಕುಟುಂಬದ ಅಭಿವೃದ್ದಿಯನ್ನು ಇಂದು ಕಾಣುವಂತಾಗಿದೆ ಎಂದು ತಿಳಿಸಿದರು.


ಕಾರ್ಯಕಮದಲ್ಲಿ ಪ್ರಬುದ್ದ ಕೇಂದ್ರ ಸದಸ್ಯರಾದ ರಾಜೀವಿ ಮತ್ತು ವಸಂತಿ ಅವರು ಕೇಂದ್ರಕ್ಕೆ ಸೇರಿಕೊಂಡ ನಂತರ ಮನೆಯಲ್ಲಿ ಆದ ಪರಿವರ್ತನೆಯ ಬಗ್ಗೆ ಅನಿಸಿಕೆಯನ್ನು ವ್ಯಕಪಡಿಸಿದರು.

ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟಿಗಳಾದ ಸಂಪತ್‌ ಸಾಮ್ರಾಜ್ಯ, ಪ್ರಾದೇಶಿಕ ನಿರ್ದೇಶಕರರಾದ ಆನಂದ ಸುವರ್ಣ, ಗ್ರಾಮ ಪಂಚಾಯತ್ ಅದ್ಯಕ್ಷ ಉದಯ್‌, ಜನಜಾಗೃತಿ ವೇದಿಕೆಯ ಲಕ್ಷ್ಮಣ ಸುವರ್ಣ, ಮಹಾವೀರ ಹೆಗ್ಡೆ , ಮುನಿರಾಜ್‌ ಹೆಗ್ಡೆ ಗಣ್ಯರಾದ ಜಯಂತ ಹೆಗ್ಡೆ, ವೇದ ಕುಮಾರ್‌ ಜೈನ್‌, ವಿಶ್ವನಾಥ ಕೋಟ್ಯಾನ್‌, ನಿರ್ದೇಶಕ ದಿನೇಶ್‌, ಯೋಜನಾಧಿಕಾರಿ ಧನಂಜಯ್‌, ಜ್ಞಾನವಿಕಾಸ ಸಮಾನ್ವಯಾಧಿಕಾರಿ ವಿದ್ಯಾ, ಶಿರ್ತಾಡಿ ವಲಯದ ಮೇಲ್ವಿಚಾರಕಿ ಪುಷ್ಪ, ಒಕ್ಕೂಟದ ಅದ್ಯಕ್ಷ ಶೇಖರ್‌ ಪೂಜಾರಿ , ರವಿ ಎನ್. ಶೋಭಾ, ಸುಕೇಶ್ ಹಾಗೂ ಜ್ಞಾನವಿಕಾಸದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರಬುದ್ದ ಕೇಂದ್ರದ ಸದಸ್ಯೆ ಜಾನಿ ಪಾರ್ದನ ಹಾಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...