ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ಎಂಟನೇ ವರ್ಷದ ಶಾಲಾ ವಾರ್ಷಿಕೋತ್ಸವ

Date:


ಮೂಡುಬಿದಿರೆ: ಮಕ್ಕಳ ಬಾಲ್ಯ ಎಂದರೆ ಕುತೂಹಲದ ಜಗತ್ತು. ಏಕೆ? ಹೇಗೆ? ಸಾಧ್ಯವೇ? ಎಂಬ ಅನೇಕ ಪ್ರಶ್ನೆಗಳೆ ಅವರ ಮನದಲ್ಲಿ ಮೂಡುತ್ತಿರುತ್ತವೆ. ಹೊಸದನ್ನು ಮಾಡಬೇಕು, ಕಂಡುಹಿಡಿಯಬೇಕು ಎನ್ನುವ ಕಾತರ. ಆದರೆ ತರಗತಿಗಳು ಮೇಲಕ್ಕೆ ಏರಿದಂತೆ ಈ ಗುಣಗಳು ನಿಧಾನವಾಗಿ ಕ್ಷೀಣಿಸುತ್ತಾ ಸಾಗುತ್ತವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿದರು.


ಅವರು ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ಎಂಟನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು.

ಈ ಪರಿವರ್ತನೆಗೆ ನಮ್ಮ ಶಿಕ್ಷಣ ಪದ್ಧತಿ, ಶಿಕ್ಷಕರು ಹಾಗೂ ಪೋಷಕರು ಮುಖ್ಯ ಕಾರಣವಾಗಿದ್ದಾರೆ. ಮಕ್ಕಳ ಕುತೂಹಲ ಬೆಳೆಯುವುದು ಅವರ ಪ್ರಶ್ನೆಯನ್ನು ಜೀವಂತವಾಗಿಡುವ ಮೂಲಕ. ಶಿಕ್ಷಕರು ಎಲ್ಲವನ್ನೂ ಬೋಧಿಸಬೇಕಾಗಿಲ್ಲ, ಬದಲಿಗೆ ತಿಳಿಯುವ ಆಸೆ ಉಳಿಯುವಂತೆ ಬೆಂಬಲಿಸಬೇಕು. ಪೋಷಕರು ಪಾಠವನ್ನು ಕೇವಲ ಪುಸ್ತಕದಲ್ಲಿ ಅಲ್ಲ, ಜೀವನದಲ್ಲೂ ಕಂಡುಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಪೋಷಕರು ಪ್ರೋತ್ಸಾಹಿಸಿದರೆ ಕುತೂಹಲದಿಂದ ಕಲಿಯುವ ಮಗು ನಾಳೆ ಸಮಾಜಕ್ಕೆ ಜವಾಬ್ದಾರಿಯುತ, ವಿಚಾರಶೀಲ, ಮೌಲ್ಯಯುತ ನಾಗರಿಕನಾಗುತ್ತಾನೆ. ಇದೇ ನಿಜವಾದ ಶಿಕ್ಷಣದ ಗುರಿ ಮತ್ತು ಅದನ್ನು ಸಾಧಿಸುವ ಮೊದಲ ಹೆಜ್ಜೆ ಮನೆಯಿಂದಲೇ ಆರಂಭವಾಗಬೇಕಿದೆ.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತೀ ಸಂಸ್ಥೆಯ ವಿದ್ಯಾರ್ಥಿ ಸಮೂಹದಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಇಲ್ಲಿ ಕಲಿಯುವ ಸಾವಿರಾರು ವಿದ್ಯಾರ್ಥಿಗಳ ನಡುವೆ ಕಂಡುಬರುವ ಸಂಸ್ಕೃತಿ, ಭಾಷೆ, ಪರಂಪರೆ, ಕಲಿಕಾ ಶೈಲಿ ಮತ್ತು ವೈಯಕ್ತಿಕ ಸಾಮರ್ಥ್ಯಗಳ ವೈವಿಧ್ಯತೆಯೇ ಇಲ್ಲಿನ ನಿಜವಾದ ಬಲ. ಈ ಸಂಗಮ, ಈ ಒಂದಾಗುವಿಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅನನ್ಯತೆಗೆ ಹಿಡಿದ ಕೈಗನ್ನಡಿ ಎಂದರು.


ದೇಶಿಯ ಮಟ್ಟದಲ್ಲಿ ನಡೆದ ಸಂಶೋಧನಾ ಚಟುವಟಿಕೆಯಲ್ಲಿ ಪಾಲ್ಗೊಂಡು, ಟಾಪ್ 50ರಲ್ಲಿ ಆಯ್ಕೆಗೊಂಡಿರುವ ವಿದ್ಯಾರ್ಥಿನಿ ಗ್ಲೋರಿ ಪ್ರಕಾಶ್‌ಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ , ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ವಿ.ಪ್ರೀತಮ್ ಕುಂದರ್, ಪ್ರಾಚರ‍್ಯ ಮೊಹಮ್ಮದ್ ಶಫಿ ಸೇರಿದಂತೆ ಇನ್ನಿತರ ಗಣ್ಯರು ಇದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕರ‍್ಯಕ್ರಮ ನಡೆಯಿತು. ಸಭಾ ಕರ‍್ಯಕ್ರಮವನ್ನು ದಿಶಾ, ವಿಷ್ಣು ಪ್ರಿಯಾ ನಿರೂಪಿಸಿ, ವರ್ಷಾ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...