ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

Date:

ಮೂಡುಬಿದಿರೆ: ನನ್ನ ಇಂದಿನ ಎಲ್ಲಾ ಸಾಧನೆಗಳಿಗೆ ಆಳ್ವಾಸ್ ಕಾರಣ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮೂಲಕ ಆಳ್ವಾಸ್ ನೀಡಿದ ಅವಕಾಶಗಳು ಮತ್ತು ಮಾರ್ಗದರ್ಶನದಿಂದ ನನ್ನ ಜೀವನದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಉಡುಪಿ ವಲಯದ ಫಾರೆಸ್ಟ್ ಬೀಟ್ ಆಫೀಸರ್ ಹಾಗೂ ಹಿರಿಯ ವಿದ್ಯಾರ್ಥಿ ಶರತ್ ಶೆಟ್ಟಿ ನುಡಿದರು.

ಅವರು ಆಳ್ವಾಸ್ ಕಾಲೇಜ್ ಆಫ್ ಫಿಸಿಯೋತೆರೆಪಿ ಆಯೋಜಿಸಿದ್ದ ರಾಜೀವ್ ಗಾಂಧಿ ವಿಜ್ಞಾನ ವಿವಿಗಳ ಮಂಗಳೂರು ವಲಯ ಮಟ್ಟದ ಹುಡುಗರ ಮತ್ತು ಹುಡುಗಿಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.ಆಳ್ವಾಸ್‌ನ ಶಿಸ್ತು, ಕಠಿಣ ಪರಿಶ್ರಮ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವ ವ್ಯವಸ್ಥೆ ನನ್ನಂತಹ ಅನೇಕ ವಿದ್ಯಾರ್ಥಿಗಳನ್ನು ಯಶಸ್ಸಿನ ಹಾದಿಗೆ ಕೊಂಡೊಯ್ದಿದೆ. ಇಂದು ನಾನು ಸರಕಾರಿ ಉದ್ಯೋಗಿಯಾಗಿರುವುದು ಆಳ್ವಾಸ್‌ನಲ್ಲಿ ಕಲಿತ ನೈತಿಕತೆ, ಶ್ರಮ ಮತ್ತು ನಿಷ್ಠೆಯ ಫಲ. ಈ ಹಂತದಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವಾ ಮಾತನಾಡಿ, ಆಳ್ವಾಸ್‌ನಲ್ಲಿ ನಿಜವಾದ ಕಲಿಕೆ ಸಂಜೆ ಐದು ಗಂಟೆಯ ನಂತರ ಆರಂಭವಾಗುತ್ತದೆ. ದಿನನಿತ್ಯದ ತರಗತಿಗಳ ನಂತರ ನಡೆಯುವ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯವನ್ನು ಕಲಿಸುತ್ತವೆ. ಇಂತಹ ಕಲಿಕೆಯಲ್ಲಿ ತೊಡಗಿಕೊಂಡವರ ಬದುಕು ಹಸನಾಗಿದೆ. ಇಂದಿನ ಮುಖ್ಯ ಅತಿಥಿಗಳು ಈ ನೆಲೆಯಲ್ಲಿ ಜೀವಂತ ನಿದರ್ಶನ ಎಂದು ಹೇಳಿದರು.
ಪುರುಷರ ವಿಭಾಗದಲ್ಲಿ 18, ಮಹಿಳೆಯರ ವಿಭಾಗದಲ್ಲಿ 12 ತಂಡಗಳು ಭಾಗವಹಿಸಿದವು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚರ‍್ಯೆ ಪ್ರೋ ಕ್ಷಮಾ ಸುಶೀಲ್ ಶೆಟ್ಟಿ, ಆಳ್ವಾಸ್ ದೈಹಿಕ ಕಾಲೇಜಿನ ಪ್ರಾಚರ‍್ಯ ಮಧು ಜಿಆರ್, ದೈಹಿಕ ನಿರ್ದೇಶಕರಾದ ಅವಿನಾಶ್, ಹರೀಶ್ ಗೌಡ ಇದ್ದರು. ಉದ್ಘಾಟನೆಯ ಬಳಿಕ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ದೊರಕಿತು. ಉಪನ್ಯಾಸಕಿ ಸೌಧ ಕರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...