ಕೊಣಾಜೆ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡಿರುವ ಪ್ರೊ.ಎ.ಎಂ.ಖಾನ್ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿ ಸಂಘ ಮಂಗಳಾ ಅಲ್ಯುಮಿನಿ ಅಸೋಸಿಯೇಷನ್ ‘ಮಾ’ ವತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು.
ಪ್ರಸ್ತುತ ಮಂಗಳೂರು ಅಲ್ಯುಮಿನಿ ಅಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರೊ.ಎ.ಎಂ.ಖಾನ್ ಅವರಿಗೆ ಧಾರವಾಡದ ಅವರ ಕುಲಪತಿಯವರ ಕಚೇರಿಯಲ್ಲಿಯೇ ‘ಮಾ’ ಅಧ್ಯಕ್ಷರಾದ ಪ್ರೊ.ಶ್ರೀಪತಿ ಕಲ್ಲೂರಾಯ, ಜೊತೆ ಕಾರ್ಯದರ್ಶಿ ಉಮಪ್ಪ ಪೂಜಾರಿಣ ಕಾರ್ಯಕಾರಿ ಸಮಿತಿ ಸದಸ್ಯರಾದ ಮಧುಸೂದನ್ ಭಟ್ ಮೊದಲಾದವರು ಸನ್ಮಾನಿಸಿ ಅಭಿನಂದಿಸಿದರು.