ಕೊಣಾಜೆ: ಡಾ. ಹಾಮಾನಾ ಸಂಶೋಧನ ಕೇಂದ್ರ, ಎಸ್. ಡಿ. ಎಂ ಕಾಲೇಜು ಉಜಿರೆ ಇಲ್ಲಿನ ಪಿಎಚ್.ಡಿ ಮಾರ್ಗದರ್ಶಕರು ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿನ ಪರೀಕ್ಷಾಂಗ ಕುಲಸಚಿವರಾದ ಡಾ. ಶ್ರೀಧರ ಹೆಚ್. ಜಿ ಇವರ ಮಾರ್ಗದರ್ಶನದಲ್ಲಿ ಆನಂದ ಎಂ.ಕಿದೂರು ಇವರು ‘ಭಾರತೀಸುತರ ಸಾಹಿತ್ಯದ ವಿವಿಧ ನೆಲೆಗಳು’ ಎಂಬ ವಿಷಯದ ಮೇಲೆ ಸಿದ್ಧಪಡಿಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್. ಡಿ ಪದವಿ ನೀಡಿದೆ.
ಮೂಲತಃ ಮಡಿಕೇರಿಯ ಎಸ್. ಆರ್ ನಾರಾಯಣ ರಾಯರು ‘ಭಾರತೀಸುತ’ ಕಾವ್ಯನಾಮದಲ್ಲಿ ಕಥೆ, ಕಾದಂಬರಿಗಳನ್ನು ರಚಿಸಿದ್ದು ಈ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿರುತ್ತಾರೆ.
ಆನಂದ ಎಂ ಇವರು ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದ ಮುನ್ನಿತ್ತೋಡು ಬಾಲಕೃಷ್ಣ ಬಂಗೇರ ಮತ್ತು ಸುಮತಿ ದಂಪತಿಯರ ಪುತ್ರ.
ಇವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದಲ್ಲಿ ‘ಕನಕದಾಸರ ಕೀರ್ತನೆಗಳಲ್ಲಿ ಪುರಾಣ ಕಥಾಪಾತ್ರಗಳ ನಿರೂಪಣೆ’ ಎಂಬ ವಿಷಯದಲ್ಲಿ ಕಿರುಕಾಲಿಕ ಸಂಶೋಧನೆ ಕೈಗೊಂಡಿದ್ದು ಪ್ರಸುತ ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ, ಉಪ್ಪಿನಂಗಡಿ ಇಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.