VL TV Kannada

1092 POSTS

Exclusive articles:

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ ಡಾ| ಜಿ.ಪಿಕುಸುಮಾ (ಅಧ್ಯಕ್ಷ್ಷೆ) – ಸವಿತಾಎಸ್.ಶೆಟ್ಟಿ (ಗೌ| ಪ್ರ| ಕಾರ್ಯದರ್ಶಿ)

ಮುಂಬಯಿ, ಸೆ.01: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ 2025 - 2025ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಘಾಟ್ಕೋಪರ್ ಪಶ್ಚಿಮದಲ್ಲಿನ ಮನಿಫೋಲ್ಡ್ ಸಮಾಲೋಚನಾ ಸಭಾಗೃಹದಲ್ಲಿ ನಡೆಸಲಾದ ಪತ್ರಕರ್ತರ ಸಂಘದ ಕಾರ್ಯಕಾರಿ ಸಭೆಯಲ್ಲಿ ಆಯ್ಕೆಗೊಳಿಸಲಾಯಿತು. ಬೃಹನ್ಮುಂಬಯಿಯಲ್ಲಿನ ಹಿರಿಯ ಪತ್ರಕರ್ತೆ, ಮೊಗವೀರ ಮಾಸಿಕದ ಮಾಜಿ ಸಂಪಾದಕಿ, ಸಾಫಲ್ಯ ತ್ರೈಮಾಸಿದ ಸಂಪಾದಕಿ ಡಾ| ಜಿ.ಪಿ ಕುಸುಮಾ ಅಧ್ಯಕ್ಷರಾಗಿ ಸರ್ವಾನುಮತದಿಂದಯ್ಕೆ ಗೊಂಡರು. ವಿಶ್ವನಾಥ್ ಪೂಜಾರಿ ನಿಡ್ಡೋಡಿ (ಉಪಾಧ್ಯಕ್ಷ), ಶ್ರಿಮತಿ ಸವಿತಾ ಸುರೇಶ್ ಶೆಟ್ಟಿ (ಗೌರವ ಪ್ರಧಾನ ಕಾರ್ಯದರ್ಶಿ), ಸುರೇಶ್ ಎನ್.ಮೂಲ್ಯ (ಗೌರವ ಕೋಶಾಧಿಕಾರಿ), ಶ್ಯಾಮ್ ಎಂ.ಹಂಧೆ (ಜೊತೆ ಕಾರ್ಯದರ್ಶಿ), ಡಾ| ದುರ್ಗಪ್ಪ ವೈ.ಕೋಟಿಯವರ್ (ಜೊತೆ ಕೋಶಾಧಿಕಾರಿ) ಇವರನ್ನು ನೂತನ ಪದಾಧಿಕಾರಿಗಳಾಗಿ ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು. ಸಂಘದ ಸಲಹಾ ಸಮಿತಿ ಸದಸ್ಯ, ನಿಯೋಜಿತ ಚುನಾವಣಾಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ ಅವರು ಇತ್ತೀಚೆಗೆ ಪತ್ರಕರ್ತರ ಸಂಘದ ಆಯ್ಕೆ ಪ್ರಕ್ರಿಯೆ ನಡೆಸಿದ್ದು ಕಾರ್ಯಕಾರಿ ಸಮಿತಿಗೆ 16 ಸದಸ್ಯರ ಆಯ್ಕೆ ಆಗಿದ್ದರು. ಆಯ್ದ ನೂತನ ಸದಸ್ಯರಲ್ಲಿ ಡಾ| ಶಿವ ಮೂಡಿಗೆರೆ, ರೋನ್ಸ್ ಬಂಟ್ವಾಳ್, ಸಾ.ದಯಾ (ದಯಾನಂದ್), ರಂಗ ಎಸ್.ಪೂಜಾರಿ,ಗೋಪಾಲ ಪೂಜಾರಿ ತ್ರಾಸಿ, ಸದರಾಮ ಎನ್.ಶೆಟ್ಟಿ, ಜಯರಾಮ ಜಿ.ನಾಯಕ್, ಹರೀಶ್ ಪೂಜಾರಿ ಕೊಕ್ಕರ್ಣೆ, ಶ್ರೀಮತಿ ಲತಾ ಶೆಟ್ಟಿ ಮುದ್ದುಮನೆ, ವಿಶ್ವನಾಥ ಹೆಗಡೆ ದೊಡ್ಮನೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮತ್ತು ಚಂದ್ರಶೇಖರ್ ಆರ್.ಬೆಳ್ಚಡ, ಶ್ರೀಮತಿ ಸುಸನ್ಹಾ ಎಲ್. ಕುವೆಲ್ಲೋ, ಲಕ್ಷ್ಮಣ ಪೂಜಾರಿ ಕೊಡೇರಿ (ಸಮಿತಿ ಸಹ ಸದಸ್ಯರುಗಳಾಗಿ) ಆಯ್ಕೆಯಾಗಿರುವರು. ಸಲಹಾ ಸಮಿತಿ ಸದಸ್ಯರಾಗಿ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಆರ್.ಕೆ.ಶೆಟ್ಟಿ, ಡಾ| ಸುರೇಶ್ ಎಸ್.ರಾವ್ ಕಟೀಲು, ಕಡಂದಲೆ ಸುರೇಶ್ ಎಸ್.ಭಂಡಾರಿ, ಸುರೇಂದ್ರ ಎ.ಪೂಜಾರಿ, ಸಿಎ| ಜಗದೀಶ್ ಬಿ.ಶೆಟ್ಟಿ, ಲಕ್ಷ ಣ ಸಿ.ಪೂಜಾರಿ, ಗ್ರೇಗೋರಿ ಡಿ’ಅಲ್ಮೇಡಾ, ಶಶಿಧರ್ ಬಿ. ಶೆಟ್ಟಿ ಬರೋಡ, ಡಾ| ಸದಾನಂದ ಆರ್.ಶೆಟ್ಟಿ, ಡಾ| ಸತ್ಯಪ್ರಕಾಶ್ ಶೆಟ್ಟಿ ಹಾಗೂ ವಿಶೇಷ ಆಮಂತ್ರಿತ ಸದಸ್ಯರುಗಳಾಗಿ ಡಾ| ಶಿವರಾಮ ಕೆ.ಭಂಡಾರಿ, ಸದಾನಂದ ಡಿ.ನಾಯಕ್, ಗುರುದತ್ತ್ ಎಸ್.ಪೂಂಜ, ಸುಧಾಕರ್ ಉಚ್ಚಿಲ್, ನ್ಯಾ| ಅಮಿತಾ ಎಸ್.ಭಾಗ್ವತ್, ಶಿವರಾಜ್ ಜಿ.ಶೆಟ್ಟಿ, ಮಾಣಿಕ್‌ರಾವ್ ಎನ್.ಹಾಗರ್ಗಿ, ಜೋನ್ ವಿಲ್ಸವ್ ಲೋಬೊ ಇವರನ್ನು ಸಭೆಯು ಆಯ್ಕೆ ಗೊಳಿಸಿತು. ಸಂಘವು ಹದಿನೆಂಟರ ಸೇವೆಯಲ್ಲಿ ಸಾಗುತ್ತಿದ್ದು ಏಳನೇ ಬಾರಿಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಇದಾಗಿದೆ. ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವನೆಗೈದ ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಅಭಿವಂದಿಸಿದರು. ಸಾ.ದಯಾ (ದಯಾನಂದ್) ಸಭಾ ಕಲಾಪ ನಡೆಸಿದರು. ಸವಿತಾ ಸುರೇಶ್ ಶೆಟ್ಟಿ ಅಭಾರ ಮನ್ನಿಸಿದರು.

ಮಂಗಳೂರಿನಲ್ಲಿ ಡಾ. ಅಗರ್ವಾಲ್ಸ್‌ ಕಣ್ಣಿನ ಆಸ್ಪತ್ರೆ ಉದ್ಘಾಟನೆ, ಸೆ 30ರವರೆಗೆ ಉಚಿತ ಕಣ್ಣಿನ ತಪಾಸಣೆ

ಮಂಗಳೂರು, ಸೆಪ್ಟೆಂಬರ್ 5: ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ಮಂಗಳೂರಿನಲ್ಲಿ ಶುಕ್ರವಾರ ಆರಂಭಗೊಂಡ ಡಾ. ಅಗರ್ವಾಲ್ಸ್‌ ಕಣ್ಣಿನ...

ತೊಕ್ಕೊಟ್ಟು: ಆಯಾದಿ ಕ್ಲೌಡ್‌ವರ್ಸಿಟಿ ನ ಕಾರ್ಪೊರೇಟ್ ಕಚೇರಿ ಉದ್ಘಾಟನೆ

ಉಳ್ಳಾಲ: ಅಯಾದಿ ಕ್ಲೌಡ್‌ವರ್ಸಿಟಿ ಯ ಮಂಗಳೂರು ಕಾರ್ಪೊರೇಟ್ ಕಚೇರಿಯನ್ನು ತೊಕ್ಕೊಟ್ಟು ರಹಮತ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಮುಖ್ಯ ಅತಿಥಿಯಾಗಿದ್ದರು. ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಶರೀಫ್...

ಡೊಂಬಿವಲಿ ತುಳುವ ಮಹಾಸಭಾ ಘಟಕದ ಸಂಚಾಲಕರಾಗಿ ಕಲಾವಿದ, ಅನಿಮೇಟರ್ ಹಾಗೂ ಆರ್ಟ್ ಪ್ರೊಫೆಸರ್ ಜಯ ಸಾಲಿಯನ್ ನೇಮಕ

ಡೊಂಬಿವಲಿ : ಕಲೆ, ಶಿಕ್ಷಣ, ಅನಿಮೇಷನ್ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿರುವ ಕಲಾವಿದ, ಅನಿಮೇಟರ್, ಗುರು ಹಾಗೂ ಅನಿಮೇಷನ್ ಚಿತ್ರ ನಿರ್ದೇಶಕ ಜಯ ಸಾಲಿಯನ್ ಅವರನ್ನು ಡೊಂಬಿವಲಿ...

ಮಂಗಳೂರು: ದಕ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ ಇದರ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಗಳೂರಿನ ಹಂಪನ್‌ಕಟ್ಟೆಯಲ್ಲಿರುವ “ಮಿಲಾಗ್ರಿಸ್ ಸೆನೆಟ್ ಹಾಲ್” ಸಭಾಂಗಣದಲ್ಲಿ ದ.ಕ. ಬಸ್ಸು ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು....

Breaking

ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ಕಾರ್ಮಿಕ ಮೃತ್ಯು: ಸೂಕ್ತ ಪರಿಹಾರಕ್ಕೆ ಎಸ್.ಡಿ.ಟಿ.ಯು ಆಗ್ರಹ.

ಮಂಗಳೂರು:ಪೆ22: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ತಮಿಳುನಾಡಿನ ಮೀನು ಕಾರ್ಮಿಕ...

‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಆದ್ಯಾತ್ಮಿಕ ಜಾಥಾ

ಉಳ್ಳಾಲ‌: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ...

ಮಸ್ಜಿದ್ ಬಿಲಾಲ್ ಸಜಿಪನಡು ಇದರ ನೂತನ ಅಧ್ಯಕ್ಷರಾಗಿ ಜಾಬಿರ್ ಮತ್ತು ಕಾರ್ಯದರ್ಶಿಯಾಗಿ ಇರ್ಶಾದ್

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಸಜಿಪನಡು ಇದರ ವಾರ್ಷಿಕ...

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...
spot_imgspot_img