VL TV Kannada

150 POSTS

Exclusive articles:

ದೇರಳಕಟ್ಟೆ: ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ಗೆ ಚಾಲನೆ

ದೇರಳಕಟ್ಟೆ : ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಆಶ್ರಯದಲ್ಲಿ 1500 ವರ್ಷದ ಮೀಲಾದುನ್ನಬಿ ರ್ಯಾಲಿ ಹಾಗೂ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ಗೆ ಚಾಲನೆ ಶುಕ್ರವಾರ ನಡೆಯಿತು. ಇಲ್ಯಾಸ್...

ಉಳ್ಳಾಲದಲ್ಲಿ ಸಂಭ್ರಮದ ಮೀಲಾದ್ ಕಾರ್ಯಕ್ರಮ ಮತ್ತು ರ‍್ಯಾಲಿ

ಉಳ್ಳಾಲ: ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ (402) ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮ ದಿನ ಪ್ರಯುಕ್ತ ಬೃಹತ್ ಮೀಲಾದು ನ್ನಬಿ...

ಎಂಸಿಸಿ ಬ್ಯಾಂಕಿನ ಬೈಂದೂರು ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ

ಬೈಂದೂರು: ಎಂಸಿಸಿ ಬ್ಯಾಂಕ್, ಮಂಗಳೂರು ಇದರ ಬೈಂದೂರು ಶಾಖೆಯಲ್ಲಿ ಸೆಪ್ಟೆಂಬರ್ 4, 2025 ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ ಡಾ| ಜಿ.ಪಿಕುಸುಮಾ (ಅಧ್ಯಕ್ಷ್ಷೆ) – ಸವಿತಾಎಸ್.ಶೆಟ್ಟಿ (ಗೌ| ಪ್ರ| ಕಾರ್ಯದರ್ಶಿ)

ಮುಂಬಯಿ, ಸೆ.01: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ 2025 - 2025ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಘಾಟ್ಕೋಪರ್ ಪಶ್ಚಿಮದಲ್ಲಿನ ಮನಿಫೋಲ್ಡ್ ಸಮಾಲೋಚನಾ ಸಭಾಗೃಹದಲ್ಲಿ ನಡೆಸಲಾದ ಪತ್ರಕರ್ತರ ಸಂಘದ ಕಾರ್ಯಕಾರಿ ಸಭೆಯಲ್ಲಿ ಆಯ್ಕೆಗೊಳಿಸಲಾಯಿತು. ಬೃಹನ್ಮುಂಬಯಿಯಲ್ಲಿನ ಹಿರಿಯ ಪತ್ರಕರ್ತೆ, ಮೊಗವೀರ ಮಾಸಿಕದ ಮಾಜಿ ಸಂಪಾದಕಿ, ಸಾಫಲ್ಯ ತ್ರೈಮಾಸಿದ ಸಂಪಾದಕಿ ಡಾ| ಜಿ.ಪಿ ಕುಸುಮಾ ಅಧ್ಯಕ್ಷರಾಗಿ ಸರ್ವಾನುಮತದಿಂದಯ್ಕೆ ಗೊಂಡರು. ವಿಶ್ವನಾಥ್ ಪೂಜಾರಿ ನಿಡ್ಡೋಡಿ (ಉಪಾಧ್ಯಕ್ಷ), ಶ್ರಿಮತಿ ಸವಿತಾ ಸುರೇಶ್ ಶೆಟ್ಟಿ (ಗೌರವ ಪ್ರಧಾನ ಕಾರ್ಯದರ್ಶಿ), ಸುರೇಶ್ ಎನ್.ಮೂಲ್ಯ (ಗೌರವ ಕೋಶಾಧಿಕಾರಿ), ಶ್ಯಾಮ್ ಎಂ.ಹಂಧೆ (ಜೊತೆ ಕಾರ್ಯದರ್ಶಿ), ಡಾ| ದುರ್ಗಪ್ಪ ವೈ.ಕೋಟಿಯವರ್ (ಜೊತೆ ಕೋಶಾಧಿಕಾರಿ) ಇವರನ್ನು ನೂತನ ಪದಾಧಿಕಾರಿಗಳಾಗಿ ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು. ಸಂಘದ ಸಲಹಾ ಸಮಿತಿ ಸದಸ್ಯ, ನಿಯೋಜಿತ ಚುನಾವಣಾಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ ಅವರು ಇತ್ತೀಚೆಗೆ ಪತ್ರಕರ್ತರ ಸಂಘದ ಆಯ್ಕೆ ಪ್ರಕ್ರಿಯೆ ನಡೆಸಿದ್ದು ಕಾರ್ಯಕಾರಿ ಸಮಿತಿಗೆ 16 ಸದಸ್ಯರ ಆಯ್ಕೆ ಆಗಿದ್ದರು. ಆಯ್ದ ನೂತನ ಸದಸ್ಯರಲ್ಲಿ ಡಾ| ಶಿವ ಮೂಡಿಗೆರೆ, ರೋನ್ಸ್ ಬಂಟ್ವಾಳ್, ಸಾ.ದಯಾ (ದಯಾನಂದ್), ರಂಗ ಎಸ್.ಪೂಜಾರಿ,ಗೋಪಾಲ ಪೂಜಾರಿ ತ್ರಾಸಿ, ಸದರಾಮ ಎನ್.ಶೆಟ್ಟಿ, ಜಯರಾಮ ಜಿ.ನಾಯಕ್, ಹರೀಶ್ ಪೂಜಾರಿ ಕೊಕ್ಕರ್ಣೆ, ಶ್ರೀಮತಿ ಲತಾ ಶೆಟ್ಟಿ ಮುದ್ದುಮನೆ, ವಿಶ್ವನಾಥ ಹೆಗಡೆ ದೊಡ್ಮನೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮತ್ತು ಚಂದ್ರಶೇಖರ್ ಆರ್.ಬೆಳ್ಚಡ, ಶ್ರೀಮತಿ ಸುಸನ್ಹಾ ಎಲ್. ಕುವೆಲ್ಲೋ, ಲಕ್ಷ್ಮಣ ಪೂಜಾರಿ ಕೊಡೇರಿ (ಸಮಿತಿ ಸಹ ಸದಸ್ಯರುಗಳಾಗಿ) ಆಯ್ಕೆಯಾಗಿರುವರು. ಸಲಹಾ ಸಮಿತಿ ಸದಸ್ಯರಾಗಿ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಆರ್.ಕೆ.ಶೆಟ್ಟಿ, ಡಾ| ಸುರೇಶ್ ಎಸ್.ರಾವ್ ಕಟೀಲು, ಕಡಂದಲೆ ಸುರೇಶ್ ಎಸ್.ಭಂಡಾರಿ, ಸುರೇಂದ್ರ ಎ.ಪೂಜಾರಿ, ಸಿಎ| ಜಗದೀಶ್ ಬಿ.ಶೆಟ್ಟಿ, ಲಕ್ಷ ಣ ಸಿ.ಪೂಜಾರಿ, ಗ್ರೇಗೋರಿ ಡಿ’ಅಲ್ಮೇಡಾ, ಶಶಿಧರ್ ಬಿ. ಶೆಟ್ಟಿ ಬರೋಡ, ಡಾ| ಸದಾನಂದ ಆರ್.ಶೆಟ್ಟಿ, ಡಾ| ಸತ್ಯಪ್ರಕಾಶ್ ಶೆಟ್ಟಿ ಹಾಗೂ ವಿಶೇಷ ಆಮಂತ್ರಿತ ಸದಸ್ಯರುಗಳಾಗಿ ಡಾ| ಶಿವರಾಮ ಕೆ.ಭಂಡಾರಿ, ಸದಾನಂದ ಡಿ.ನಾಯಕ್, ಗುರುದತ್ತ್ ಎಸ್.ಪೂಂಜ, ಸುಧಾಕರ್ ಉಚ್ಚಿಲ್, ನ್ಯಾ| ಅಮಿತಾ ಎಸ್.ಭಾಗ್ವತ್, ಶಿವರಾಜ್ ಜಿ.ಶೆಟ್ಟಿ, ಮಾಣಿಕ್‌ರಾವ್ ಎನ್.ಹಾಗರ್ಗಿ, ಜೋನ್ ವಿಲ್ಸವ್ ಲೋಬೊ ಇವರನ್ನು ಸಭೆಯು ಆಯ್ಕೆ ಗೊಳಿಸಿತು. ಸಂಘವು ಹದಿನೆಂಟರ ಸೇವೆಯಲ್ಲಿ ಸಾಗುತ್ತಿದ್ದು ಏಳನೇ ಬಾರಿಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಇದಾಗಿದೆ. ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವನೆಗೈದ ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಅಭಿವಂದಿಸಿದರು. ಸಾ.ದಯಾ (ದಯಾನಂದ್) ಸಭಾ ಕಲಾಪ ನಡೆಸಿದರು. ಸವಿತಾ ಸುರೇಶ್ ಶೆಟ್ಟಿ ಅಭಾರ ಮನ್ನಿಸಿದರು.

ಮಂಗಳೂರಿನಲ್ಲಿ ಡಾ. ಅಗರ್ವಾಲ್ಸ್‌ ಕಣ್ಣಿನ ಆಸ್ಪತ್ರೆ ಉದ್ಘಾಟನೆ, ಸೆ 30ರವರೆಗೆ ಉಚಿತ ಕಣ್ಣಿನ ತಪಾಸಣೆ

ಮಂಗಳೂರು, ಸೆಪ್ಟೆಂಬರ್ 5: ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ಮಂಗಳೂರಿನಲ್ಲಿ ಶುಕ್ರವಾರ ಆರಂಭಗೊಂಡ ಡಾ. ಅಗರ್ವಾಲ್ಸ್‌ ಕಣ್ಣಿನ...

Breaking

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ “ರೋಹನ್ ಮರೀನಾ ಒನ್”

ಮಂಗಳೂರು: ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್...
spot_imgspot_img