ಬೆಳ್ಮ ಸೇವಾಶ್ರಮದಲ್ಲಿ ಕಸಾಪ ರಾಜ್ಯೋತ್ಸವ ಸಂಭ್ರಮ

Date:

ಕೊಣಾಜೆ: ನಮ್ಮ ಭಾಷೆ, ದೇಶ ಹಾಗೂ ಹಿರಿಯರನ್ನು ಗೌರವಿಸುವುದೇ ಸಂಸ್ಕೃತಿ. ಕನ್ನಡ ಮತ್ತು ಕನಕದಾಸರಂತಹ ಮಹಾತ್ಮರನ್ನು ನೆನೆಯುವುದರಿಂದ ನಮಗೆ ಒಳಿತಾಗುವುದು ಎಂದು ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಅವರು ಸೋಮವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ, ಕನಕದಾಸ ಪೀಠ ಮಂಗಳೂರು ವಿವಿ ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆ ಬೆಳ್ಮ ಸೇವಾಶ್ರಮ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಭಾಷೆಯಷ್ಟೇ ಅಲ್ಲ ಬದುಕು
ಕನ್ನಡ ನಮಗೆ ಭಾಷೆ, ನೆಲ, ಸಂಸ್ಕೃತಿಯಷ್ಟೇ ಅಲ್ಲ ಅದು ನಮಗೆ ಬದುಕು ಕೊಟ್ಟಿದೆ. ಬಸವಣ್ಣ, ಕನಕದಾಸರಂತಹ ಅನೇಕ ಸಂತರು ಬಾಳಿದ ಕನ್ನಡನಾಡು ಅನೇಕ ಮೌಲ್ಯ ಆದರ್ಶಗಳ ತವರೂರು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ ಜಿಲ್ಲಾ ಕಸಾಪ ಉಳ್ಳಾಲ ಘಟಕ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹರಿಕಥಾ ಪರಿಷತ್ ಅಧ್ಯಕ್ಷರಾದ ಕೆ ಮಹಾಬಲ ಶೆಟ್ಟಿ ಮಾತನಾಡಿ ಭಕ್ತಿ ಬದುಕಿನ ನಿಜವಾದ ಶಕ್ತಿ ಎಂದರು.

ಸಮಾರಂಭದಲ್ಲಿ ದ.ಕ ಜಿಲ್ಲಾ ಕಸಾಪ ಉಳ್ಳಾಲ ಘಟಕದ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಕಾರ್ಯಕ್ರಮ ಸಂಯೋಜಕ ತೋನ್ಸೆ ಪುಷ್ಕಳ ಕುಮಾರ್ , ಸೇವಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಜಿ.ಆರ್ ಶೆಟ್ಟಿ, ಕವಿ ಗುಣಾಜೆ ರಾಮಚಂದ್ರ ಭಟ್ , ಮಂಗಳೂರು ವಿವಿ ತುಳುಪೀಠದ ಪ್ರಸಾದ್ ಅಂಚನ್ ಮತ್ತಿತರರು ಭಾಗವಹಿಸಿದ್ದರು.

ಭಕ್ತ ಕನಕದಾಸ ಹರಿಕಥೆ
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕನಕದಾಸ ಪ್ರಶಸ್ತಿ ಪುರಸ್ಕೃತರಾದ ತೋನ್ಸೆ ಪುಷ್ಕಳ ಕುಮಾರ್ ಇವರನ್ನು ಗೌರವಿಸಲಾಯಿತು. ಬಳಿಕ ಅವರಿಂದ ಭಕ್ತ ಕನಕದಾಸ ಎಂಬ ಹರಿಕಥೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಹಾಗೂ ಕೌಶಿಕ್ ಮಂಜನಾಡಿ ಸಹಕರಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...