ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂಯ೯ಕಾಂತ್ ಭಟ್ ಗೆ ಸಂಸ್ಮರಣಾ ಪ್ರಶಸ್ತಿ ಪ್ರದಾನ

Date:

ಮೂಡುಬಿದಿರೆ: ಶ್ರೀಮಂತ ಕಲೆಯಾದ ಯಕ್ಷಗಾನದ ಹಿಂದಿನ ಪರಂಪರೆಯನ್ನು ಜೈನ ಪರಂಪರೆಯ ಮೂಲಕ ನೆನಪಿಸುವಂತಹ ಪ್ರಯತ್ನವನ್ನು ಶ್ರೀಧರ ಪಾಂಡಿಯವರ ನೆನಪಿನೊಂದಿಗೆ ಮಾಡುತ್ತಿದ್ದೇವೆ. ಇದು ನಮ್ಮ ಬಹು ವರ್ಷಗಳ ಕನಸು. ಮುಂಬರುವ ದಿನಗಳಲ್ಲಿ ಯಕ್ಷಗಾನವನ್ನು ದೊಂದಿ ಬೆಳಕಿನೊಂದಿಗೆ ಯಕ್ಷಗಾನ ಪರಂಪರೆಯ ಮೂಲ ಸ್ವರೂಪದಲ್ಲಿ ಯಾವುದೇ ಆಧುನಿಕ ಉಪಕರಣಗಳು ಇಲ್ಲದೇ, ಪ್ರಕೃತಿಯೊಂದಿಗೆ ಬೆರೆತು ಪ್ರಸ್ತುತಪಡಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

ಅವರು ಸಾವಿರ ಕಂಬದ ಬಸದಿಯ ಆವರಣದ ಮರೋಡಿ ಗುಡ್ಡನ್‌ಬೆಟ್ಟು ಗುತ್ತು ದಿ.ಶಾಂತಿರಾಜ ಪಾಂಡಿ ಮತ್ತು ನಲ್ಲೂರು ಮರ್ದ್ರಬೆಟ್ಟು ದಿ.ಭುಜಬಲಿ ಅಧಿಕಾರಿ ಸ್ಮರಣೀಯ ವೇದಿಕೆಯಲ್ಲಿ ಭಾನುವಾರ ನಡೆದ ಯಕ್ಷಗಾನ ಅರ್ಥಧಾರಿ, ಪ್ರಸಂಗಕತೃ ಎಂ. ಶ್ರೀಧರ ಪಾಂಡಿ ಸಾಣೂರು ಅವರ 14ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಪ್ರಶಸ್ತಿ ಪ್ರದಾನ : ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಕೆ. ಎಂ. ರಾಘವ ನಂಬಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯನಾರಾಯಣ ಭಟ್ ಅವರಿಗೆ ಶ್ರೀಧರ ಪಾಂಡಿಯವರ ಸಂಸ್ಕರಣಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಜಿತ್ ಜೈನ್ ನಾರಾವಿ ಧಾರ್ಮಿಕ ಉಪನ್ಯಾಸ ನೀಡಿದರು.

ನಿವೃತ್ತ ಮುಖ್ಯ ಶಿಕ್ಷಕ, ವಾಗ್ಮಿ ಮುನಿರಾಜ ರೆಂಜಾಳ ಸಂಸ್ಮರಣಾ ಮಾತುಗಳನ್ನಾಡಿ, ಹಿಂದೂ ಪುರಾಣ ಕಥೆಗಳು ಯಕ್ಷಗಾನದಲ್ಲಿ ಬಹಳಷ್ಟಿದೆ. ಆದರೆ ಜಿನಕಥೆಗಳನ್ನು ಯಕ್ಷಗಾನದಲ್ಲಿರುವುದು ವಿರಳ. ಪಾಂಡಿಯವರು ಜಿನ ಸಂಸ್ಕೃತಿಯನ್ನು 24 ಪ್ರಸಂಗಳಲ್ಲಿ ರಚಿಸಿದ್ದಾರೆ. ಶ್ರೀಧರ ಪಾಂಡಿಯವರು ಬರೆದ ಯಕ್ಷಗಾನ ಪ್ರಸಂಗ ಮಸ್ತಾಕಭೀಷೇಕ ಸಂದರ್ಭದಲ್ಲಿ ಪ್ರಸಾರವಾಗಿದೆ. ಅವರ ಕೆಲವು ಪ್ರಸಂಗಕೃತಿಗಳು ಪುಸ್ತಕ ರೂಪಕ್ಕೆ ಬಂದಿದೆ. ಕೆಲವೊಂದಿಷ್ಟು ಪುಸ್ತಕ ರೂಪಕ್ಕೆ ಬರಲು ಬಾಕಿ ಇದೆ. ಸುಲಲಿತವಾಗಿ ಮತ್ತು ಮನಮುಟ್ಟುವಂತೆ ಇರುವುದರಿಂದ ಪಾಂಡಿಯವರ ಯಕ್ಷಗಾನ ಪ್ರಸಂಗಗಳು ಭಾಗವತರಿಗೆ ಅಚ್ಚುಮೆಚ್ಚು ಎಂದರು.

ಶ್ರೀ ಆದಿನಾಥ ಸ್ವಾಮಿ ಬಸದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೊ.ಕೆ. ಗುಣಪಾಲ ಕಡಂಬ, ನಿವೃತ್ತ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಇರ್ವತ್ತೂರು, ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ,ಶ್ರೀಧರ್ ಪಾಂಡಿ ಅವರ ಪುತ್ರ ಶ್ರೀಕಾಂತ್ ಪಾಂಡಿ ಉಪಸ್ಥಿತರಿದ್ದರು. ಶ್ರೀಶಾ ಅತಿಕಾರಿ ಸ್ವಾಗತಿಸಿದರು. ಜಯಶ್ರೀ ಅತಿಕಾರಿ ಕಾರ್ಯಕ್ರಮ ನಿರೂಪಿಸಿದರು. ನಾಗವರ್ಮ ಜೈನ್ ಸನ್ಮಾನಪತ್ರ ವಾಚಿಸಿದರು. ವರ್ಷಾ ಅಧಿಕಾರಿ ವಂದಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಎಂ. ಶ್ರೀಧರ ಪಾಂಡಿ ಸಾಣೂರು ಅವರು ರಚಿಸಿದ ಪ್ರಸಂಗವಾದ `ಜಿನಕಥೆಯ ದೊಂದಿ ಬೆಳಕಿನ ಯಕ್ಷಗಾನ ಶ್ರೀ ಪಾರ್ಶ್ವನಾಥ ಚರಿತೆ ಯನ್ನು ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...