ಮುಡಿಪು: ಬೆಳಕು ಚಾರಿಟೇಬಲ್ ಟ್ರಸ್ಟ್ ಮುಡಿಪು(ರಿ) ಇದರ ವತಿಯಿಂದ ಲಯನ್ಸ್ ಕ್ಲಬ್ ಕುರ್ನಾಡು, ಬ್ಲಡ್ ಡೋನಸ್೯ ಮಂಗಳೂರು, ಫಾದರ್ ಮುಲ್ಲರ್ ಅಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಮುಡಿಪು ಭಾರತಿ ಶಾಲಾ ವಠಾರದಲ್ಲಿ ನಡೆಯಿತು.

ಅಖಿಲ ಭಾರತ ಕ್ರಿಶ್ಚಿಯನ್ ಒಕ್ಕೂಟದ ರಾಜ್ಯಾಧ್ಯಕ್ಷ ಆಲ್ವಿನ್ ಡಿ,ಸೋಜಾ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ನಮ್ಮಗೆ ರಕ್ತದ ಅಗತ್ಯ ಬಂದಾಗ ರಕ್ತದಾನಿಗಳ ಮೊರೆ ಹೋಗುವ ಬದಲು ನಾವು ರಕ್ತದಾನ ಮಾಡಿ ಇತರರಿಗೆ ರಕ್ತದಾನ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದು ಹೇಳಿದರು.

ಸುನ್ನಿ ಯುವಜನ ಸಂಘ ಮುಡಿಪು ಝೋನ್ ಅಧ್ಯಕ್ಷ ಬಿ.ಎ ಉಸ್ಮಾನ್ ಸಖಾಫಿ ಕಡ್ವಾಯಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬೆಳಕು ಚಾರಿಟೇಬಲ್ ಟ್ರಸ್ಟ್ ಸಾಮಾಜಕ್ಕೆ ಬೆಳಕು ನೀಡುವ ಕಾರ್ಯ ಶ್ಲಾಘನೀಯ.ಜಾತಿ ಧರ್ಮ ನೋಡದೆ ಅನಿವಾರ್ಯ ಸಂದರ್ಭದಲ್ಲಿ ಸಾಹಯ ಮಾಡುವುದು ಮನುಷ್ಯ ಧರ್ಮದ ಒಂದು ಭಾಗವಾಗಿದೆ ಎಂದು ಹೇಳಿದರು.ಬೆಳಕು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎಂ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಟ್ರಸ್ಟಿ ರೋನಿ ಡಿಸೋಜಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಲಯನ್ಸ್ ಕ್ಲಬ್ ಕುರ್ನಾಡು ಅಧ್ಯಕ್ಷ ಅಜಿತ್ ಪಜೀರ್, ಬ್ಲಡ್ ಡೋನಸ್೯ ಮಂಗಳೂರು ಕಾರ್ಯನಿರ್ವಾಹಕ ಸಿರಾಜ್, ವಿಶ್ವಕರ್ಮ ಸಂಘದ ಮಾಜಿ ಅಧ್ಯಕ್ಷ ನವೀನ್ ಅಚಾರ್ಯ, ಉದ್ಯಮಿ ಅರುಣ್ ಡಿಸೋಜಾ, ಭಾರತಿ ಶಾಲೆ ಮುಡಿಪು ಅಧ್ಯಕ್ಷ ಕೆ.ಎಸ್ ಭಟ್, ಸಮಾಜಿಕ ಕಾರ್ಯಕರ್ತ ದಾಮೋದರ ಆಚಾರ್ಯ, ಮಂಗಳೂರು ವಕೀಲ ಕಾರ್ಯಕಾರಿ ಸಂಘದ ಸದಸ್ಯ ಮೊಹಮ್ಮದ್ ಅಸ್ಗರ್, ಕೆವೀನ್ ನಸ್ರಾದೊ ಉಪಸ್ಥಿತರಿದ್ದರು.



