ಆಲಂಗಾರಿನಲ್ಲಿ ಬಂಧುತ್ವ ಕ್ರಿಸ್ಮಸ್-ಸ್ನೇಹಕೂಟ 2025

Date:

ಎಲ್ಲಾ ಧಮ೯ವನ್ನು ಪ್ರೀತಿಸಿ ಗೌರವಿಸುವುದು ನಮ್ಮ ಕತ೯ವ್ಯ: ಧಮ೯ಗುರು ಮೆಲ್ವೀನ್ ನೊರೋನ್ಹಾ

ಮೂಡುಬಿದಿರೆ: ನಾವೆಲ್ಲರೂ ಒಬ್ಬನೇ ದೇವರ ಮಕ್ಕಳು. ಧಮ೯ ಎಲ್ಲರಿಗೂ ಪವಿತ್ರವಾದುದು. ನಮಗೆಲ್ಲರಿಗೂ ಇರುವುದು ಒಂದೇ ಒಂದು ಧಮ೯ ಅದು ಮಾನವ ಧಮ೯. ಪ್ರೀತಿ, ನೀತಿ ಮತ್ತು ಕರುಣೆ ಅದು ಎಲ್ಲಾ ಧಮ೯ದಲ್ಲೂ ಇದೆ. ನಮ್ಮ ಧಮ೯ವನ್ನು ಪ್ರೀತಿಸುವುದರ ಜತೆಗೆ ಇತರ ಎಲ್ಲಾ ಧಮ೯ವನ್ನು ಪ್ರೀತಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಆದ್ಯ ಕತ೯ವ್ಯ ಎಂದು ಆಲಂಗಾರು ಹೋಲಿ ರೋಸರಿ ಚಚ್೯ನ ಧಮ೯ಗುರು, ಸಂತ ಥೋಮಸ್ ವಿದ್ಯಾ ಸಂಸ್ಥೆಗಳ ಸಂಚಾಲಕ ವಂದನೀಯ ಮೆಲ್ವೀನ್ ನೊರೋನ್ಹಾ ನುಡಿದರು.

ಅವರು ಸಂತ ಥೋಮಸ್ ವಿದ್ಯಾ ಸಂಸ್ಥೆಗಳು ಹಾಗೂ ಆಲಂಗಾರು ಹೋಲಿ ರೋಸರಿ ಚಚ್೯ ಇದರ ಸಹಭಾಗಿತ್ವದಲ್ಲಿ ಶನಿವಾರ ಸಂಸ್ಥೆಯ ಆವರಣದಲ್ಲಿ ನಡೆದ ಬಂಧುತ್ವ ಕ್ರಿಸ್ಮಸ್-ಸ್ನೇಹಕೂಟ 2025ರ ಸಭಾ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾನು ಹಿಂದಿನಿಂದಲೂ ಎಲ್ಲಾ ಧಮ೯ದವರ ಜತೆ ಎಲ್ಲಾ ಸಮಯದಲ್ಲೂ ಶಾಂತಿ ಸೌಹಾ೯ತೆಯನ್ನು ಕಾಪಾಡಿಕೊಂಡು ಬಂದಿದ್ದೇನೆ ಎಂದರು.

ಮೂಡುಬಿದಿರೆ ಜೈನ ಮಠದ ಭಾರತಭೂಷಣ ಸ್ವಸ್ತಿ ಶ್ರೀ ಡಾ. ಚಾರುಕೀತಿ೯ ಭಟ್ಪಾರಕ ಸ್ವಾಮೀಜಿ ಅವರು ಗಿಡಕ್ಕೆ ಮೌಲ್ಯಯುತ ವಾಕ್ಯಗಳನ್ನು ತೂಗು ಹಾಕುವ ಮೂಲಕ ಉದ್ಘಾಟಿಸಿ, ಆಶೀವ೯ಚನ ನೀಡಿ ಸೌಹಾದ೯ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಕ್ರೈಸ್ತ ಧಮ೯ ಕಲಿಸುತ್ತದೆ. ಶಿಕ್ಷಣ, ಆರೋಗ್ಯ ಹಾಗೂ ಸೇವೆಯ ಮೂಲಕ ಈ ಧಮ೯ ಗುರುತಿಸಿಕೊಂಡಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಮಾತನಾಡಿ ಹೆಣ್ಣು ಮತ್ತು ಗಂಡುವಿನಲ್ಲಿ ದೈಹಿಕ ಮತ್ತು ಜೈ ವಿಕ ಭಿನ್ನತೆಯಿತೆ ಆದರೆ ಆಧ್ಯಾತ್ಮದ ದೃಷ್ಠಿಯಲ್ಲಿ ಒಂದೇ ಆತ್ಮ. ನಮ್ಮಲ್ಲಿ ಬೇರೆ ಬೇರೆ ಭಾಷೆಗಳು, ಬಣ್ಣಗಳು, ಆಚರಣೆಗಳು ಇವೆ ಆದರೆ ಹುಟ್ಟು ಮತ್ತು ಸಾವು ಎಲ್ಲರಿಗೂ ಸಮಾನ ಮತ್ತು ನಾವೆಲ್ಲರೂ ಒಂದೇ ಆಕಾಶದಡಿಯಲ್ಲಿದ್ದೇವೆ. ನಾವು ಒಂದೇ ಊರಿನಲ್ಲಿ ಎಷ್ಟೋ ವಷ೯ಗಳಿಂದ ಇದ್ದರೂ ಬಾಂಧವ್ಯ ಬೆಳೆಯುವುದಿಲ್ಲ ಆದರೆ ಆದರೆ ಆಸ್ಪತ್ರೆಗಳಲ್ಲಿ ಪರಿಚಯವಿಲ್ಲದವರ ಜತೆ ನಮಗೆ ಎರಡ್ಮೂರು ದಿನಗಳಲ್ಲಿಯೇ ಬಾಂಧವ್ಯ ಬೆಳೆಯುತ್ತದೆ ಎಂದ ಅವರು ನಮಗೆ ನೋವು, ಕಷ್ಟ, ಹಸಿವು ಇದ್ದಾಗ ಸಹಜವಾಗಿಯೇ ಮನುಷ್ಯನ ಮೇಲೆ ಪ್ರೀತಿ ಬಂಧುತ್ವ ಬೆಳೆಯುತ್ತದೆ ಎಂದರು.


ಉದ್ಯಮಿ ಅಬ್ದುಲ್ ಸಲಾಂ, ಪುರಸಭಾ ಸದಸ್ಯ ಪಿ. ಕೆ. ಥೋಮಸ್, ನಾಮ ನಿದೇ೯ಶಿತ ಸದಸ್ಯ ಕ್ಲಾರಿಯೋ, ಮೌಂಟ್ ರೋಸರಿಯ ಮದರ್ ಜನರಲ್ ಸಿ. ಸುನೀತಾ,ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಚಚ್ ೯ ಪಾಲನಾ ಮಂಡಳಿಯ ಕಾಯ೯ದಶಿ೯ ಲಾರೆನ್ಸ್ ಡಿ’ಕುನ್ಹಾ, ಶಾಲಾ ಆಡಳಿತ ಮಂಡಳಿಯ ಎಡ್ವಡ್೯ ಸೆರಾವೋ, ಜೆನೆಟ್ ಮಿರಾಂದ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಲ್ವಿಯಾ ಡೇಸಾ, ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಅಲ್ಫೋನ್ಸಾ ಉಪಸ್ಥಿತರಿದ್ದರು.


ರಾಜೇಶ್ ಕಡಲಕೆರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕರಾದ ಸೂಯ೯ನಾರಾಯಣ ಭಟ್ ಮತ್ತು ಕುಸುಮ ಕಾಯ೯ಕ್ರಮ ನಿರೂಪಿಸಿದರು. ಸಂತೋಷ್ ರೊಡ್ರಿಗಸ್ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಾಲಾಡಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ: ಶಶಿಧರ್ ಡಿ. ಡಿ. ಪಿ. ಐ.

ಉಳ್ಳಾಲ: ಸರಕಾರವು ಇಂದು ಸರಕಾರಿ ಶಾಲೆಗಳ ಎಲ್ಲಾ ವ್ಯವಸ್ಥೆಗಳೊಂದಿಗೆ ಉತ್ತಮವಾದ ಬೆಳವಣಿಗೆಗೆ...

ಬ್ರೇಕಿಂಗ್ ನ್ಯೂಸ್: ಬೆಳ್ತಂಗಡಿ ಪತಿ ಹತ್ಯೆ ಪ್ರಕರಣ – ಕೊಲೆ ಸಾಬೀತಾದರೂ ಪತ್ನಿಗೆ ಶಿಕ್ಷೆ ಇಲ್ಲ: ಕೋರ್ಟ್ ತೀರ್ಪು

ಕೋರ್ಟ್ ತೀರ್ಪಿನ ಪೂರ್ಣ ವಿವರ ಇಲ್ಲಿದೆ ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾವೂರು...

ಬಾಂಗ್ಲಾ ಪ್ರಜೆಗೆ ಪಾಸ್‌ಪೋರ್ಟ್ ಮಾಡಲು ಸಹಾಯ: ವಿಟ್ಲ ಪೊಲೀಸ್ ಕಾನ್ಸ್ಟೇಬಲ್ ಬಂಧನ

ಪಾಸ್‌ಪೋರ್ಟ್‌ ವೆರಿಫಿಕೇಶನ್‌ ವೇಳೆ ಸುಳ್ಳು ದಾಖಲೆ ಸೃಷ್ಟಿಸಿದ ಪೊಲೀಸ್ ಸಿಬ್ಬಂದಿಯನ್ನೇ ಬಂಧಿಸಿದ...

ಸಂಪಿಗೆ ಚಚ್೯ನಲ್ಲಿ ಕ್ರಿಸ್ಮಸ್-2025

ಕ್ರಿಸ್ಮಸ್ ನ ಆದಶ೯ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಿ ಮೂಡುಬಿದಿರೆ: ಮಂಗಳೂರು ಧಮ೯ಪ್ರಾಂತ್ಯ ಮೂಡುಬಿದಿರೆ...