ಬಂಟ್ಸ್ ಸಂಘ ಅಹಮದಾಬಾದ್ (ಗುಜರಾತ್) ಸಂಭ್ರಮಿಸಿದ ೩೨ನೇ ವಾರ್ಷಿಕೋತ್ಸವ

Date:

ಸ್ವಸಮಾಜದ ಒಲವು ಬಂಟರ ಬಲಾಢ್ಯತೆಗೆ ಪೂರಕ: ಪ್ರವೀಣ್ ಭೋಜ ಶೆಟ್ಟಿ

ಮುಂಬಯಿ, ನ.೦೨: ಸಮಾಜದ ಮೇಲಿನ ಒಲವು ಬಂಟ ಬಲಾಢ್ಯತೆಗೆ ಪೂರಕವಾಗಿದೆ ಆದ್ದರಿಂದ ಸ್ವಸಮಾಜದ ಪರಸ್ಪರ ಪರಿಚಯ ಮಾಡಿಸಿಕೊಳ್ಳುವುದು ಅತ್ಯವಶ್ಯ. ಇದರಿಂದ ಸಮುದಾಯದ ಸಾಂಘಿಕತೆ ಸುಗಮವಾಗುವುದು. ಮನಸ್ಸಿನ ದುಃಖದುಮ್ಮನಗಳನ್ನು ಹಗುರಗೊಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದ್ದು ಸಮರ್ಥ ಸಾರಥ್ಯವುಳ್ಳವರಿಂದ ಮಾತ್ರ ಸಂಘದ ಮುನ್ನಡೆ ಸಾಧ್ಯವಾಗುವುದು. ಜಾತೀಯ ಸಂಸ್ಥೆಗಳಿದ್ದಾಗಲೇ ಸಮುದಾಯದ ಉದ್ಧಾರ ಸಾಧ್ಯವಾಗುವುದು. ಬಂಟರು ಸಂಖ್ಯೆಯಲ್ಲಿ ಕಡಿಮೆಯಲ್ಲಿದ್ದರೂ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸಿ ವಿಶ್ವ ಮಾನ್ಯತೆಗೆ ಪಾತ್ರರಾದವರಲ್ಲಿ ಬಂಟರೇ ಶ್ರೇಷ್ಠರು ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಸಂಜೆ ಗುಜರಾತ್ ರಾಜ್ಯದಲ್ಲಿನ ಅಹಮದಾಬಾದ್ ‘ಸ್ಮಾರ್ಟ್ ಸಿಟಿ’ಯಲ್ಲಿನ ಗುಜರಾತ್ ವಿಶ್ವವಿದ್ಯಾಲಯದ ಶ್ಯಾಮ ಪ್ರಸಾದ್ ಮುಖರ್ಜಿ ಸಭಾಗೃಹದಲ್ಲಿ ಬಂಟ್ಸ್ ಸಂಘ ಅಹಮದಾಬಾದ್ (ಗುಜರಾತ್) ಸಂಸ್ಥೆಯು ತನ್ನ ಮೂವತ್ತ್ತೆರಡನೇ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ಸಮಾರಂಭಮಕ್ಕೆ ಚಾಲನೆಯನ್ನೀಡಿ ಪ್ರವೀಣ್ ಶೆಟ್ಟಿ ಮಾತನಾಡಿದರು.

ಬಿಎಸ್‌ಎ ಅಧ್ಯಕ್ಷ ನಿತೇಶ್ ಎಸ್.ಶೆಟ್ಟಿ ಶಿರ್ವಾಕೋಡು ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಬಂಟ್ಸ್ ಸಂಘ ಮುಂಬಯಿ ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌರವ ಅತಿಥಿಗಳಾಗಿ ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ರಾಧಾಕೃಷ್ಣ ಟಿ.ಶೆಟ್ಟಿ (ಆಡಳಿತ ನಿರ್ದೇಶಕ ರಾಧಾಕೃಷ್ಣ ಗ್ರೂಪ್ ಆಫ್ ಹೋಟೆಲ್ಸ್), ತುಳು ಸಂಘ ಅಂಕ್ಲೇಶ್ವರ ಇದರ ಅಧ್ಯಕ್ಷ ಶಂಕರ ಶೆಟ್ಟಿ, ತುಳುನಾಡ ಐಸಿರಿ ಅಧ್ಯಕ್ಷ ನವೀನ್ ಶೆಟ್ಟಿ ಹೆರೂರು, ಬಿಎಸ್‌ಎ ಉಪಾಧ್ಯಕ್ಷೆ ಶಕುಂತಲಾ ಐ.ಶೆಟ್ಟಿ, ಕಾರ್ಯದರ್ಶಿ ಕಿರಣ್ ಶೆಟ್ಟಿ, ಖಜಾಂಚಿ ಪ್ರಶಾಂತ್ ನಾಕ್ ಮುಂಡ್ಕೂರು ವೇದಿಕೆಯನ್ನಲಂಕರಿಸಿದ್ದರು.

ನಮ್ಮ ಆಚಾರ, ವಿಚಾರ ಪರಂಪರೆಗಳ ಉಳಿವು ಇಂತಹ ಸಂಘಗಳಿಂದ ಸಾಧ್ಯವಾಗುವುದು. ಒಗ್ಗಟ್ಟಿಗೆ ಸಂಸ್ಥೆಗಳೇ ಬೆನ್ನೆಲುಬುವಾಗಿದ್ದು, ಸಾಧನೆಗೆ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವುದು ಅತ್ಯವಶ್ಯವಾಗಿದೆ. ಸಮಾಜದ ಕಟ್ಟಕಡೆಯ ಜನರಿದ್ದರೆ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದಾಗಲೇ ಸಂಘ ಸಂಸ್ಥೆಗಳ ಸೇವೆ ಸಾರ್ಥಕವಾಗುವುದು. ನಾವೆಲ್ಲರೂ ಐಕ್ಯತೆಯಿಂದ ಸೇವಾ ನಿರತರಾಗಿ ಬಂಟರಲ್ಲಿ ಬಡವರನ್ನು ಕಾಣದಂತಾಗಿಸೋಣ ಎಂದು ಡಾ| ಆರ್.ಕೆ ಶೆಟ್ಟಿ ತಿಳಿಸಿದರು.

ನಿತೇಶ್ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ಬಂಟರ ಬಂಧುತ್ವಕ್ಕೆ ಈ ಸಂಘವು ಬಲಾಢ್ಯ ತುಂಬಿದೆ. ನಮ್ಮಲ್ಲಿನ ಧುರೀಣರ ದೂರತ್ವದೃಷ್ಠಿಯಿಂದ ಈ ಸಂಘವು ಸಾಂಘಿಕವಾಗಿ ಸಾಗಿ ಬಂದಿದ್ದು, ನಮ್ಮ ಭಾವೀ ಜನಾಂಗಕ್ಕೆ ಒಗ್ಗೂಡಿಸುವ ಉದ್ದೇಶ ನಮ್ಮದಾಗಿದೆ. ಬದಲಾವಣಿಯ ಕಾಲಕ್ಕಾನುಸಾರವಾಗಿ ಮುಂದಿನ ಪೀಳಿಗೆಗೆ ಈ ಸಂಸ್ಥೆಯನ್ನು ಮುಡಿಪಾಗಿರಿಸಿದ್ದು, ಸಮುದಾಯದ ಮುನ್ನಡೆಗೆ ನಾವು ಕಾವಲುಗಾರರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಎಸ್.ಶೆಟ್ಟಿ ವಾಪಿ, ಅಜಿತ್ ಶೆಟ್ಟಿ ಅಂಕ್ಲೇಶ್ವರ, ಜೊತೆ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜೊತೆ ಕೋಶಾಧಿಕಾರಿ ದೇವಿಪ್ರಸಾದ್ ಡಿ.ಶೆಟ್ಟಿ, ಸಂಯೋಜನಾ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಅಜೆಕಾರು ಸಂಜೀವ ಶೆಟ್ಟಿ, ದೇವದತ್ತ ಶೆಟ್ಟಿ, ಅಪ್ಪು ಪಿ.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುರೇಶ್ ಎನ್.ಶೆಟ್ಟಿ, ವಸಂತಕುಮಾರ್ ಶೆಟ್ಟಿ, ಅಪ್ಪು ಎ.ಶೆಟ್ಟಿ, ಸುದರ್ಶನ್ ಡಿ.ಶೆಟ್ಟಿ, ಪ್ರಶಾಂತ್ ಎಸ್.ಶೆಟ್ಟಿ, ಅಶೋಕ್ ಎಲ್.ಶೆಟ್ಟಿ, ಪ್ರಕಾಶ್ ಬಿ.ಶೆಟ್ಟಿ, ದಿನೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ವಿವೇಕ್ ಶೆಟ್ಟಿ, ಮನೋಜ್ ಶೆಟ್ಟಿ, ರವೀಂದ್ರ ಶೆಟ್ಟಿ, ವಿಶೇಷ ಆಮಂತ್ರಿತ ಸದಸ್ಯರುಗಳಾಗಿ ಪುರುಷೋತ್ತಮ ಶೆಟ್ಟಿ, ಆಶೀಶ್ ಶೆಟ್ಟಿ, ಹರೀಶ್ ಶೆಟ್ಟಿ, ದಿಶಾ ನಿತೇಶ್ ಶೆಟ್ಟಿ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಅತಿಥಿಗಳು ಸಾಧಕರಾದ ಅಮೀತಾ ಶೆಟ್ಟಿ(ಯೋಗ) ಹಾಗೂ ಮತ್ತಿತರ ಸಾಧಕರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ಪ್ರವೀಣ್ ಎಸ್.ಶೆಟ್ಟಿ ಮತ್ತು ವಿಕ್ರಮ್ ಆರ್.ಶೆಟ್ಟಿ ಇವರಿಗೆ ಬಂಟರ ಚೈತನ್ಯ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ಸಂಘದ ಕಲಾವಿದ ಮಕ್ಕಳು, ಮಹಿಳೆಯರು ಸಾಂಸ್ಕೃತಿಕ ಹಾಘು ಕಾರ್ಯಕಾರಿ ಸಮಿತಿ ಸದಸ್ಯರು ಕುಣಿತ ಭಜನೆ ನಡೆಸಿದರು. ನಾಡಿನ ಹೆಸರಾಂತ ಪ್ಲೇಬ್ಯಾಕ್ ಗಾಯಕ, ಭಾರತೀಯ ಸಂಗೀತ ಲೋಕದ ಅತ್ಯುಜ್ವಲ ಯುವ ತಾರೆ, ಪ್ರಶಸ್ತಿ ವಿಜೇತ ನಿಶಾನ್ ರೈ ಅತ್ಯುತ್ತಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.ಮಮತಾ ಡಿ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ನಿತೇಶ್ ಎಸ್.ಶೆಟ್ಟಿ ಸ್ವಾಗತಿಸಿ,ಪ್ರಸ್ತಾವನೆಗೈದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ, ಪುಷ್ಫಗುಚ್ಛಗಳನ್ನೀಡಿ ಗೌರವಿಸಿದರು. ನಮ್ಮ ಟಿವಿ ವಾಹಿನಿಯ ಕಾರ್ಯಕ್ರಮ ನಿರೂಪಕ ನವೀನ್ ಕುಮಾರ್ ಶೆಟ್ಟಿ ಎಡ್ಮೆಮಾರ್ ಅತಿಥಿಗಳು, ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸುದರ್ಶನ್ ಶೆಟ್ಟಿ ವಂದಿಸಿದರು.

(ಚಿತ್ರ/ವರದಿ : ರೋನ್ಸ್ ಬಂಟ್ವಾಳ್)

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...