ದೆಹಲಿ:ಗಾಜಾದಲ್ಲಿ ಯುದ್ಧ ವಿರಾಮದ ಪ್ರಾರಂಭಿಕ ಹಂತಗಳನ್ನು ವಿಶ್ವವು ಕಣ್ತುಂಬಿಕೊಳ್ಳುತ್ತಿರುವ ಈ ಮಹತ್ವದ ಮುನ್ನಡೆಯ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತೂರ್ವಕ ಕೃತಜ್ಞತೆಯನ್ನು ಎಸ್.ಡಿ.ಪಿ.ಐ ಸಲ್ಲಿಸುತ್ತದೆ. ಖತಾರ್, ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್,...
ಮುಂಬಯಿ, ಅ.02:ಮಹಾರಾಷ್ಟ್ರ ಸರ್ಕಾರರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿ ಮುಂಬಯಿ ಇದರ ಸೆನ್ಸಾರ್ ಮಂಡಳಿಗೆ ಪತ್ರಕರ್ತ ರೋನ್ಸ್ ಬಂಟ್ವಾಳ್ ಪುನರ್ ನೇಮಕಗೊಳಿಸಿಸರ್ಕಾರದ ಪರ್ಯಟನ ಮತ್ತು ಸಾಂಸ್ಕೃತಿಕ ವ್ಯವಹಾರ ಇಲಾಖೆ01.10.2025 ರಂದು ಕಚೇರಿ ಆದೇಶ ಹೊರಡಿಸಿದೆ.ಸರ್ಕಾರದ...
ಗುಜರಾತ್‌ನಲ್ಲಿ ಸಾಂಪ್ರದಾಯಿಕವಾಗಿ ಕದಿರೆ ಕಟ್ಟಿ ಪ್ರಕೃತಿಮಾತೆಗೆ ಸ್ಮರಿಸಿದ ದಯಾನಂದ ಬೊಂಟ್ರ
ಮುಂಬಯಿ (ಆರ್‌ಬಿಐ), ಸೆ. 28: ಗುಜರಾತ್ ಬಿಲ್ಲವರ ಸಂಘವು ಇಂದಿಲ್ಲಿ ಆದಿತ್ಯವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಸಿದ್ಧಿವಿನಾಯಕ ಕಾಂಪ್ಲೆಕ್ಸ್‌ನಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದಲ್ಲಿ ತುಳುವರ ವೈಶಿಷ್ಟ ಮಯ ಸಾಂಪ್ರದಾಯಿಕ ತೆನೆ (ಕದಿರು) ಹಬ್ಬವನ್ನು (ಕುರಲ್ ಪರ್ಬ-ಪುದ್ದಾರ್) ಪೂಜಾಧಿಗಳೊಂದಿಗೆ ಧಾರ್ಮಿಕದತ್ತವಾಗಿ ನೆರವೇರಿಸಿತು.
ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು) ಬರೋಡಾ ಇವರ ದಕ್ಷ ಮಾರ್ಗದರ್ಶನ ಹಾಗೂ ಜಿಬಿಎಸ್ ಅಧ್ಯಕ್ಷ ಹರೀಶ್ ವಿ.ಪೂಜಾರಿ ಮಡ್ಯಾರ್ (ದೇರಳಕಟ್ಟೆ) ಮುಂದಾಳುತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಸರಿತಾ ಸೋಮನಾಥ್ ಪೂಜಾರಿ ಸಾರಥ್ಯದಲ್ಲಿ ಅರಿಶಿನ ಕುಂಕುಮ ಕಾರ್ಯಕ್ರಮ ನೆರವೇರಿತು.
ಸಂಪ್ರದಾಯಬದ್ಧ ಉಡುಗೆ ಧರಿಸಿ ತುಳುನಾಡ ಹಬ್ಬದ ವಾತಾವರಣ ಸೃಷ್ಟಿಸಿದ ಸದಸ್ಯರನ್ನೊಳಗೊಂಡು ಪದಾಧಿಕಾರಿಗಳು ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುವಿಗೆ ಆರಂಭದಲ್ಲಿ ಪೂಜೆ ನೆರವೇರಿಸಿದರು. ಅಧ್ಯಕ್ಷ ಹರೀಶ್ ವಿ.ಪೂಜಾರಿ ತೆನೆಯನ್ನು (ಕದಿರು) ಹೊತ್ತು ಚಾವಡಿಗೆ ಪ್ರವೇಶಿಸಿದ್ದು ಸದಸ್ಯರು ಮತ್ತು ಮಹಿಳೆಯರು ಪರಂಪರಿಕವಾಗಿ ಹೊಸಬೆಳೆ (ತೆನೆ) ಬರಮಾಡಿ ಕೊಂಡರು. ಶೃಂಗರಿತ ದೇವರ ಮಂಟದ ಮುಂದಿರಿಸಿದ ತೆನೆ, ಕಾಯಿಪಲ್ಯ, ಫಲಪುಷ್ಪಗಳಿಗೆ ದಯಾನಂದ ಬೊಂಟ್ರ ಅವರು ಸೀಯಾಳ, ಹಾಲಿನ ಅಭಿಷೇಕಗೈದು ಪ್ರಾರ್ಥನೆ ನೆರವೇರಿಸಿ ಸಾಂಪ್ರದಾಯಿಕವಾಗಿ ಕದಿರೆ ಕಟ್ಟಿ, ಪ್ರಕೃತಿಮಾತೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಿಬಿಎಸ್ ಮುಖ್ಯ ಸಂಯೋಜಕ ವಾಸು ವಿ.ಸುವರ್ಣ, ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲಿಯನ್, ಖಜಾಂಚಿ ಸುದೇಶ್ ಕೋಟಿಯನ್, ಜೊತೆ ಕಾರ್ಯದರ್ಶಿ ರವಿ ಸಾಲಿಯನ್, ಜೊತೆ ಕೋಶಾಧಿಕಾರಿ ಜ್ಯೋತಿ ಎಸ್.ಕೋಟ್ಯಾನ್ ಪ್ರಧಾನವಾಗಿ ಉಪಸ್ಥಿತರಿದ್ದರು. ಅಂತೆಯೇ ಜಿಬಿಎಸ್ ಸೂರತ್ ಶಾಖೆಯ ಕಾರ್ಯಾಧ್ಯಕ್ಷ ಪ್ರಭಾಕರ್ ಎಸ್.ಪೂಜಾರಿ, ಉಪಾಧ್ಯಕ್ಷೆ ಕುಸುಮ್ ಗೋಪಾಲ್ ಪೂಜಾರಿ, ಶೋಭಾ ಹರೀಶ್ ಪೂಜಾರಿ, ಮಾ| ಮಾನ್ವಿತ್ ಹೆಚ್.ಪೂಜಾರಿ, ಮಾ| ವರ್ಣಿತ್ ಹೆಚ್.ಪೂಜಾರಿ ಸೇರಿದಂತೆ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು.
ಪೂಜೆಯ ನಂತರ ಶುದ್ಧೀಕರಿಸಿದ ವರುಷದ ಪ್ರಥಮ ಫಸಲು ಭತ್ತದ ಹೊಸತೆನೆಯಾದ ಸುಲಿದ ಹೊಸ ಭತ್ತದ ಅಕ್ಕಿಯೊಂದಿಗೆ ಸಾಂಪ್ರದಾಯಿಕವಾಗಿ ಸಿದ್ಧಪಡಿಸಿದ ಶುದ್ಧ ಶಾಖಾಹಾರಿ (ಹೊಸಅಕ್ಕಿ ಊಟ, ಪಾಯಸ, ಬಗೆಬಗೆಯ ಪಲ್ಯಗಳ) ಹೊಸ ಭೋಜನ (ಪೊಸ ವೊಣಸ್) ಸವಿದು ತೆನೆಹಬ್ಬ ಆಚರಿಸಿದರು. ಕೊನೆಯಲ್ಲಿ ಗರ್ಬಾ, ದಾಂಡಿಯಾ ನಡೆಸಿ ತೆನೆಹಬ್ಬ ಸಂಭ್ರಮಿಸಿ ವಾರ್ಷಿಕ ದಸರಾ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಬಿಎಸ್ ಬರೋಡ ಶಾಖೆಯ ಮಹಿಳಾ ಘಟಕದ ಕಾರ್ಯಧ್ಯಕ್ಷೆ ಯಶೋದಾ ನಾಗೇಶ್ ಪೂಜಾರಿ, ಕಾರ್ಯದರ್ಶಿ ಯಶೋದಾ ರವಿ ಸಾಲಿಯನ್, ಖಜಾಂಚಿ ಆಗಿ ರೇವತಿ ರೋಹಿದಾಸ್ ಪೂಜಾರಿ ಇವರನ್ನು ಆಯ್ಕೆ ಮಾಡಲಾಯಿತು.
ಕಲಾವಿದರ ಉದ್ದೇಶಿತ ಕಾರ್ಯಗಳು ಮುನ್ನಲೆಗೆ ಬರಲಿವೆ: ಡಾ| ಸುರೇಂದ್ರಕುಮಾರ್ ಹೆಗ್ಡೆ
ಮುಂಬಯಿ, ಸೆ.25: ಒಳ್ಳೆಯ ಕೆಲಸ ಮಾಡುವ ತುಡಿತ ಇದ್ದವರು ಎಲ್ಲೂ ಪದಾಧಿಕಾರಿಯೇ ಆಗಬೇಕೆಂದಿಲ್ಲ. ಸಾಮಾನ್ಯ ಸದಸ್ಯನಾಗಿಯೂ ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯ. ಪರಿಷತ್ತುನ ಸ್ವಂತಃ ಕಚೇರಿ ಹೊಂದಿ ನಮ್ಮ ಸಂಘಕ್ಕೆ ಒಂದು ನೆಲೆ ಸಿಕ್ಕಿದೆ. ಪರಿಷತ್ತುವಿನ ಬಹಳ ಮುಖ್ಯವಾದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಂಡಿರುವುದರಿಂದ ಮುಂದಿನ ಅವಧಿಯಲ್ಲಿ ನಮ್ಮ ಉದ್ದೇಶಿತ ಕಾರ್ಯಗಳು ಮುನ್ನಲೆಗೆ ಬರಲಿವೆ ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.
ಇಂದಿಲ್ಲಿ ಮಂಗಳವಾರ ಸಾಂತಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ನಡೆಸಲಾದ ಪರಿಷತ್ತುವಿನ 17ನೇ ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆ ವಹಿಸಿ ಸುರೇಂದ್ರಕುಮಾರ್ ಮಾತನಾಡಿ ಷೋಡಶ ಸಂಭ್ರಮದಲ್ಲಿರುವ ಕನ್ನಡಿಗ ಕಲಾವಿದರ ಪರಿಷತ್ತು 18ರ ಹೊಸ್ತಿಲ ಪಯಣದಲ್ಲಿದೆ. ಎಲ್ಲಾ ಪ್ರಕಾರದ ಕಲಾಸಂಸ್ಥೆಗಳ ಮಾತೃಸಂಸ್ಥೆಯಾದ ನಮ್ಮ ಪರಿಷತ್ತು ಹಲವಾರು ವರುಷಗಳಿಂದ ಪ್ರಯಣತ್ನದ ಸ್ವಂತ ಕಚೇರಿ ಸದಸ್ಯರೆಲ್ಲ್ಲರ ಸಾಂಘಿಕ ಪ್ರಯತ್ನದ ಫಲಶ್ರುತಿ, ಕಲಾಮಾತೆಯ ಅನುಗ್ರಹ, ಬೃಹನ್ಮುಂಬಯಿಯಲ್ಲಿನ ಸಹೃದಯಿ ಕಲಾಪ್ರೇಮಿ ದಾನಿಗಳ ಸಹಕಾರದಿಂದ ಸದ್ಯ ಸಾಕಾರಗೊಂಡಿದೆ. ನಮ್ಮ ಬಹುದೊಡ್ದ ಯೋಜನೆಯಾದ ಕಲಾವಿದರ ಮಾಹಿತಿ ಗ್ರಂಥ ‘ಕಲಾವಿದರ ಕೈಪಿಡಿ’ ಕೂಡಾ ಈ ವರ್ಷ ಸದಸ್ಯರ ಕೈಸೇರಿದೆ ಎಂಬ ತೃಪ್ತಿ ನಮಗಿದೆ. ಪ್ರಸ್ತುತ ವರ್ಷದಲ್ಲಿ ಕಲಾವಿದರ ಶ್ರೇಯೋಭಿವೃದ್ಧಿಗಾಗಿನ ನಮ್ಮ ಕನಸಿನ ಬಹುದೊಡ್ಡ ಯೋಜನೆ ‘ಕ್ಷೇಮನಿಧಿ’ಗಾಗಿ ಬಹು ಮೊತ್ತವನ್ನೂ ಶೀಘ್ರವಾಗಿ ಸಂಗ್ರಹಿಸುವ ಭರವಸೆ ನಮಗಿದೆ. ಪರಿಷತ್ತ್‌ನ ಸಿದ್ಧಿ ಸಾಧನೆಗಳು ಮಹಾರಾಷ್ಟ್ರವಲ್ಲದೆ ಕರ್ನಾಟಕದಲ್ಲೂ ಪ್ರಸಿದ್ದಿಯಲ್ಲಿದೆ ಎಂಬ ಸಂತೋಷ ನಮ್ಮೆಲ್ಲರಿಗಿದೆ ಎಂದರು.
ಪರಿಷತ್ತ್‌ನ ಉಪಾಧ್ಯಕ್ಷರುಗಳಾದ ಕಮಲಾಕ್ಷ ಸರಾಫ್ ಮತ್ತು ಸಿಎ| ಶ್ರೀನಿವಾಸ ಪಿ.ಸಫಲ್ಯ, ಗೌರವ ಕಾರ್ಯದರ್ಶಿ ಚಂದ್ರಶೇಖರ ಭಟ್, ಗೌರವ ಖಜಾಂಚಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಆರ್.ಬಂಗೇರ, ಪ್ರಕಾಶ್ ಶೆಟ್ಟಿ ಪಯ್ಯಾರು, ಎನ್.ಟಿ ಪೂಜಾರಿ, ಕೊಲ್ಯಾರು ರಾಜು ಶೆಟ್ಟಿ, ಬಾಲಕೃಷ್ಣ ಡಿ.ಶೆಟ್ಟಿ ವೇದಿಕೆಯಲ್ಲಿದ್ದು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನಿತ್ತರು.
ಉಪಾಧ್ಯಕ್ಷ ಶ್ರೀನಿವಾಸ ಪಿ.ಸಫಲ್ಯ ಮಾತನಾಡಿ ನೆಲೆಯ ಮೇಲೆ ಕಲೆ ನಿಂತಾಗ ಆದು ಪ್ರಜ್ವಲಿಸುತ್ತದೆ. ಕಲಾವಿದರು, ಕ್ಷಣವಾದರೂ ಈ ಸಂಸ್ಥೆಗೆ ಸ್ಪಂದಿಸಬೇಕು. ಕೆಲವು ಸದಸ್ಯರು ತಮ್ಮ ಅಸಹಾಯಕ ಸ್ಥಿತಿಯಲ್ಲಿ ಸಂಸ್ಥೆಯ ಬಳಿ ಬಂದು ಮತ್ತೆ ದೂರ ನಿಲ್ಲುವಾಗ ಖೇದವಾಗುತ್ತದೆ ಎಂದು ವಿಷಾಧಿಸಿದರು.
ಚಂದ್ರಶೇಖರ ಭಟ್ ಗತವಾರ್ಷಿಕ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪಿ.ಬಿ ಚಂದ್ರಹಾಸ್ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. 2025-2028ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಮತ್ತೆ ಜಗದೀಶ್ ಡಿ.ರೈ ಅವರನ್ನೇ ಹಾಗೂ ಬಾಹ್ಯ ಲೆಕ್ಕಪರಿಶೋಧ ಕರನ್ನಾಗಿ ರಾವ್ ಎಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯನ್ನೇ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.
ಪರಿಷತ್ತುವಿನ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪದ್ಮನಾಭ ಸಸಿಹಿತ್ಲು, ಎನ್.ಪೃಥ್ವಿರಾಜ್ ಮುಂಡ್ಕೂರು, ಲ| ಮುರಳೀಧರ ಹೆಗಡೆ, ವಿಶೇಷ ಆಹ್ವಾನಿತ ಸದಸ್ಯರುಗಳಾದ ಡಿ.ಭಾಸ್ಕರ ಶೆಟ್ಟಿ, ಚಂದ್ರಕಾಂತ ಕೆ.ಸಾಲಿಯಾನ್, ಜೂಲಿಯೆಟ್ ಪಿರೇರಾ, ಸುಶೀಲಾ ಎಸ್.ದೇವಾಡಿಗ, ಮಹಿಳಾ ವಿಭಾಗದ ಸಂಚಾಲಕಿ ಕುಸುಮಾ ಸಿ.ಪೂಜಾರಿ, ಸದಸ್ಯೆಯರುಗಳಾದ ಅಮಿತ ಜತ್ತನ್, ಪ್ರತಿಮಾ ಬಿ.ಬಂಗೇರ, ಸುರೇಖಾ ಹೆಚ್.ದೇವಾಡಿಗ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಸಭೆಯಲ್ಲಿನ ಸಲಹೆಗಾರರಾದ ಕೆ.ಕೆ ಶೆಟ್ಟಿ, ಡಾ| ಭರತಕುಮಾರ್ ಪೊಲಿಪು, ಸದಸ್ಯೆ ಡಾ| ಜಿ.ಪಿ ಕುಸುಮಾ ಮಾತನಾಡಿ ಸಲಹೆ ಸೂಚನೆಗಳನ್ನೀಡಿ ಪರಿಷತ್ತುವಿಗೆ ಉಜ್ವಲ ಭವಿಷ್ಯ ಹಾರೈಸಿದರು.
ಹಿರಿಯ ರಂಗ ಕಲಾವಿದರಾಗಿದ್ದು ಪರಿಷತ್ತ್‌ನ ಸ್ಥಾಪಕಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಎಸ್.ಟಿ ವಿಜಯಕುಮಾರ್ ತಿಂಗಳಾಯ ಮತ್ತು ಭೋಜ ಬಂಗೇರ ಅವರ ಆಗಲಿಕೆಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಡಾ| ಸುರೇಂದ್ರಕುಮಾರ್ ಹೆಗ್ಡೆ, ಶ್ರೀನಿವಾಸ ಪಿ.ಸಫಲ್ಯ, ಡಾ| ಭರತಕುಮಾರ್ ಪೊಲಿಪು, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ಡಾ| ಸತೀಶ್ ಎನ್.ಬಂಗೇರ, ಶೈಲೇಶ್ ಪುತ್ರನ್, ವಾಸುದೇವ್ ಮಾರ್ನಾಡ್, ಜಗದೀಶ್ ಡಿ.ರೈ, ಓಂದಾಸ್ ಕಣ್ಣಂಗಾರ್, ಅಶೋಕ್ ಕುಕ್ಯಾನ್ ಸಸಿಹಿತ್ಲು, ತಾರಾ ಆರ್.ಬಂಗೇರ ನುಡಿ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.
ಜಯಲಕ್ಷ್ಮೀ ದೇವಾಡಿಗ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆ ಆರಂಭ ಗೊಂಡಿತು. ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಸಭಾ ಕಲಾಪ ಆರಂಭಿಸಿದರು. ಪಿ.ಬಿ ಚಂದ್ರಹಾಸ್ ಉಪಕಾರ ಸ್ಮರಿಸಿದರು.
ಗುಜರಾತ್‌ನ ಬರೋಡಾದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆಸಾಮರಸ್ಯದ ಜೀವನವೇ ನಾರಾಯಣ ಗುರುಗಳ ಆದರ್ಶ: ಶಶಿಧರ್ ಬಿ. ಶೆಟ್ಟಿ, ಬರೋಡಾ
ಮುಂಬೈ (ಆರ್‌ಬಿಐ), ಸೆಪ್ಟೆಂಬರ್ 10: ಗುಜರಾತ್ ಬಿಲ್ಲವರ ಸಂಘವು ಕಳೆದ...