ಮೂಡುಬಿದಿರೆ : ಮಕ್ಕಳ ದಿನಾಚರಣೆಯ ಪ್ರಯುಕ್ತ ಬೆಳುವಾಯಿಯಲ್ಲಿರುವ ಸ್ಪೂತಿ೯ ಭಿನ್ನ ಸಾಮಥ್ಯ೯ದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದಲ್ಲಿ ವಿಶೇಷ ಮಕ್ಕಳಿಗಾಗಿ ಛದ್ಮವೇಷ ಹಾಗೂ ನೃತ್ಯ ಸ್ಪಧೆ೯ ನಡೆಯಿತು.
ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ, ವಕೀಲೆ ಶ್ವೇತಾ ಜೈನ್ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ ಸ್ಪಧೆ೯ಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.

ಸನ್ಮಾನ : ಸಂಸ್ಥೆಯ ವಿದ್ಯಾಥಿ೯ಯಾಗಿದ್ದು ಇದೀಗ ಇದೇ ಸಂಸ್ಥೆಯಲ್ಲಿ ಕೇರ್ ಟೇಕರ್ ಆಗಿ ದುಡಿಯುತ್ತಿರುವ ಮಹಮ್ಮದ್ ಆರೀಸ್ ಅವರನ್ನು ಸನ್ಮಾನಿಸಲಾಯಿತು.
ಬೆಳುವಾಯಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುಭಾಶ್ ಪೈ, ಬೆಂಗಳೂರು ತುಳುಕೂಟದ ದೇವೇಂದ್ರ ಹೆಗ್ಡೆ, ಬೆಳುವಾಯಿ ವಿದ್ಯಾ ವಧ೯ಕ ಸಂಘ (ರಿ)ದ ಟ್ರಸ್ಟಿ ಯುವರಾಜ್ ಜೈನ್, ಪಿಂಗಾರ ಕಲಾವಿದೆರ್ ಬೆದ್ರದ ಮಣಿ ಕೋಟೆಬಾಗಿಲು, ರಂಗಭೂಮಿ ಕಲಾವಿದ ಸತೀಶ್ ಕಲ್ಲಮುಂಡ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್, ಪೋಷಕರ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು.ಶಿಕ್ಷಕಿ ಅನಿತಾ ರೊಡ್ರಿಗಸ್ ಸ್ವಾಗತಿಸಿ ಬಹುಮಾನಿತರ ಪಟ್ಟಿ ವಾಚಿಸಿದರು. ಸುಮನಾ ಸನ್ಮಾನ ಪತ್ರ ವಾಚಿಸಿದರು. ಸುಚಿತ್ರ ಕಾಯ೯ಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶಮಿ೯ಳಾ ವಾಸ್ ವಂದಿಸಿದರು.


