ಮೂಡುಬಿದಿರೆ: ಶಾಂತಿ, ಪ್ರೀತಿ ಮತ್ತು ಕರುಣೆಯ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ ಯೇಸು ಕ್ರಿಸ್ತನ ಜನ್ಮೋತ್ಸವವಾದ ಕ್ರಿಸ್ಮಸ್ ಹಬ್ಬವು,ಮಾನವ ಹೃದಯಗಳಲ್ಲಿ ನಂಬಿಕೆ, ಸಹೋದರತ್ವ, ಹಂಚಿ ತಿನ್ನುವ ಗುಣ ಮತ್ತು ಮಾನವೀಯ ಮೌಲ್ಯಗಳ ದೀಪವನ್ನು ಬೆಳಗಿಸಲಿ ಎಂದು ಖ್ಯಾತ ಉದ್ಯಮಿ ಶರ್ಲಿನ್ ರೋಡ್ರಿಗಸ್ ಎಂದು ಹೇಳಿದರು ಅವರು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಕ್ರಿಸ್ಮಸ್ ದಿನಾಚರಣೆಯ ಸಂಭ್ರಮದಲ್ಲಿ ಮಾತನಾಡಿದರು.

ಕ್ರಿಸ್ಮಸ್ ನಕ್ಷತ್ರವು – “ಬೆಳಕು ನೀನಾಗು, ದಾರಿ ನೀನೇ ಆಗು” ಎಂಬ ಮಾನವೀಯ ಸಂದೇಶವನ್ನು ಜಗತ್ತಿಗೆ ಸಾರುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಸುದೈವ ಕುಟುಂಬಕಂ ಎಂಬ ಭಾರತೀಯ ಮಹಾವಾಕ್ಯವು “ಪೂರ್ಣ ಭೂಮಿಯೇ ಒಂದು ಕುಟುಂಬ” ಎಂಬ ಉದಾತ್ತ ತತ್ತ್ವವನ್ನು ಸಾರುತ್ತದೆ. ಕ್ರಿಸ್ಮಸ್ ಸೇವೆ, ದಾನ ಮತ್ತು ತ್ಯಾಗವನ್ನು ಜೀವನಮಾರ್ಗವಾಗಿ ಪ್ರತಿಪಾದಿಸುತ್ತದೆ ಎಂದರು.
ವೇದಿಕೆಯಲ್ಲಿ ಎಕ್ಸಲೆಂಟ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ , ಸಿ ಬಿ ಎಸ್ ಈ ಪ್ರಾಂಶುಪಾಲ ಶ್ರೀಪ್ರಸಾದ್ ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ನಿರೂಪಿಸಿದರು. ಶಿಕ್ಷಕಿ ಅನಿತಾ ಸ್ವಾಗತಿಸಿ, ಮೆಲಿಟಾ ವಂದಿಸಿದರು.


