- ಕ್ರಿಸ್ಮಸ್ ನ ಆದಶ೯ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಿ
ಮೂಡುಬಿದಿರೆ: ಮಂಗಳೂರು ಧಮ೯ಪ್ರಾಂತ್ಯ ಮೂಡುಬಿದಿರೆ ವಾರಾಡೋ ಮತ್ತು ಸಂಪಿಗೆ ಹೋಲಿ ಸ್ಪೀರಿಟ್ ಚಚ್೯ ವತಿಯಿಂದ ಪ್ರವಾಸಿ ಮತ್ತು ಶ್ರಮಿಕರ ಆಯೋಗದವರಿಗೆ ಭಾನುವಾರ ಕ್ರಿಸ್ಮಸ್-2025ನ್ನು ಆಚರಿಸಲಾಯಿತು.

ಮೂಡುಬಿದಿರೆ ವಲಯದ ಪ್ರಧಾನ ಧಮ೯ಗುರು ಓನಿಲ್ ಡಿ’ಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ರಿಸ್ಮಸ್ ಹಬ್ಬ ಕೇವಲ ಡಿಸೆಂಬರ್ 25ಕ್ಕೆ ಮಾತ್ರ ಸೀಮಿತವಾಗದೆ ಅದರ ಆದಶ೯ ಮತ್ತು ತತ್ವಗಳನ್ನು ವಷ೯ವಿಡೀ ನಾವು ಮೈಗೂಡಿಸಿಕೊಳ್ಳಬೇಕು. ಏಸು ಕ್ರಿಸ್ತರು ರೋಗ ಪೀಡಿತ ಜನರ, ದೀನ ದಲಿತರ ಮತ್ತು ಎಲ್ಲಾ ವಗ೯ದ ಜನರ ಜತೆ ಹೇಗೆ ಹೊಂದಿಕೊಂಡು ಬಾಳಬೇಕೆಂದು ತಿಳಿಸಿಕೊಟ್ಟಿದ್ದಾರೆ ಅದರಂತೆ ನಾವು ಬಾಳೋಣ ಎಂಬ ಸಂದೇಶವನ್ನು ನೀಡಿದರು.

ಸಂಪಿಗೆ ಪವಿತ್ರಾತ್ಮ ದೇವಾಲಯದ ಧಮ೯ಗುರು ವಿನ್ಸೆಂಟ್ ಡಿ’ಸೋಜ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದೇವರ ಮೇಲಿನ ನಂಬಿಕೆ ನಮ್ಮ ಬದುಕಿನ ಅಂಧಕಾರವನ್ನು ತೊಲಗಿಸುತ್ತದೆ. ಸೇವೆ-ಸೌಹಾರ್ದತೆ ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಬೆಳಗಿಸುತ್ತದೆ ಎಂದರು.

ಬೆಳ್ಳೂರು ಮರಿಯಾಶ್ರಮದ ಸುನಿಲ್ ಕ್ರಿಸ್ಟೋಪರ್ ಡಿ’ಸೋಜ, ಪವಿತ್ರಾತ್ಮ ದೇವಾಲಯದ ಉಪಾಧ್ಯಕ್ಷ ವಿಲ್ಫ್ರೆಡ್ ಮಿಸ್ಕಿತ್, ಕಾಯ೯ದಶಿ೯ ರೋಶನ್ ಫೆನಾ೯ಂಡಿಸ್, ಸಂಪಿಗೆ ಚಚ್೯ನ 21ನೇ ಆಯೋಗದ ಸಂಯೋಜಕ ರೋಬಟ್೯ ಡಿ’ಸೋಜ, ಪ್ರವಾಸಿ ಶ್ರಮಿಕ ಆಯೋಗದ ಸಂಚಾಲಕ ಆಲ್ವಿನ್ ಸಾಂಕ್ತೀಸ್, ಕಾಯ೯ದಶಿ೯ ಎಗ್ಬಟ್೯ ಡಿ’ಸಿಲ್ವ ಅತಿಥಿಗಳಾಗಿ ಭಾಗವಹಿಸಿದ್ದರು.
ಆಲಂಗಾರು ಮೌಂಟ್ ರೋಸರಿ ಕಾನ್ವೆಂಟ್ ನ ಸಿಸ್ಟರ್ ಲೀನಾ ಡಿಕುನ್ಹಾ, ಐಸಿವೈಎಂ ಸಚೇತಕಿ ಗ್ರೇಸಿ ಡಿ’ಸೋಜ, ಚಚ್೯ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಲೋನ ಡಿ’ಸೋಜ ಸ್ವಾಗತಿಸಿದರು. ಲ್ಯಾನ್ಸಿ ಡಿ’ಸೋಜ ಕಾಯ೯ಕ್ರಮ ನಿರೂಪಿಸಿದರು. ಜೊಸ್ವಿನ್ ಅಮಿತಾ ಫೆನಾ೯ಂಡಿಸ್ ವಂದಿಸಿದರು.


