ಮೂಡುಬಿದಿರೆ : ಸೊಸೈಟಿಗೆ ಗ್ರಾಹಕರೇ ದೊಡ್ಡ ಆಸ್ತಿ. ಇಲ್ಲಿ ಶಾಖೆ ಪ್ರಾರಂಭವಾದ ದಿನದಿಂದಲೂ ಪ್ರಿಯದರ್ಶಿನಿ ಸೊಸೈಟಿಯನ್ನು ಪ್ರೋತ್ಸಾಹಿಸಿ ಗ್ರಾಹಕರು ವ್ಯವಹಾರವನ್ನು ಮಾಡುತ್ತಾ ಬಂದಿದ್ದು ಎಲ್ಲಾ ಗ್ರಾಹಕರಿಗೆ ಕೃತಜ್ಞತೆ ಅರ್ಪಿಸುತ್ತಾ ಮುಂದಿನ ದಿನಗಳಲ್ಲಿ ಇದೇ ರೀತಿ ಸಹಕಾರವನ್ನು ಮುಂದುವರೆಸುವಂತೆ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್ ನುಡಿದರು.

ಅವರು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮೂಡುಬಿದಿರೆ ಶಾಖೆಯಲ್ಲಿ ನಡೆದ ಗ್ರಾಹಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಪುರಸಭಾ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ ಕಾರಿಂಜೆ ಸರ್ವೀಸ್ ಕೋ – ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ರೆಕ್ಸಾನ್ ಪಿಂಟೋ ಕಟ್ಟಡ ಮಾಲಿಕರಾದ ದೇವದಾಸ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಶಾಖಾ ಪ್ರಬಂಧಕರಾದ ಅಭಿಷ್ಠಾ ಜೈನ್ ಸ್ವಾಗತಿಸಿದರು. ಪ್ರಧಾನ ಕಛೇರಿಯ ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು. ಸಿಬ್ಬಂದಿಗಳಾದ ವಿನಿತಾ ವಿಲ್ಮಾ ಕೈರನ್ನ, ಪ್ರಣೀತ್, ನಂದಿತಾ ವಿ. ಪದ್ಮಶಾಲಿ, ಪ್ರಕಾಶ್ ಚಂದ್ರ ಶೆಟ್ಟಿಗಾರ್ ಸಹಕರಿಸಿದರು.


