ಕಡಬ: ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್
(ರಿ) ಪುಣ್ಯತ್ತಾರು, ಕಾಣಿಯೂರು ಗ್ರಾಮ ಇದರ ವತಿಯಿಂದ
ದೀಪಾವಳಿ ಪ್ರಯುಕ್ತ
ನಡೆದ ಪ್ರೊ ವಾಲಿಬಾಲ್ ಪಂದ್ಯಾಟ ಮತ್ತು ಸಾಧಕರಿಗೆ
ಸನ್ಮಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರ ಸಾಧನೆ ಗುರುತಿಸಿ ಸಂಘಟನೆ ವತಿಯಿಂದ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು.

ರಾಜ್ಯ ಮಟ್ಟದಲ್ಲಿ ಕವನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಬರಹದ ಮೂಲಕ ಹಲವಾರು ಬಹುಮಾನಗಳನ್ನು ಪಡೆದ ಹಾಗೂ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದ, ಯುವ ಪ್ರತಿಭೆ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ ಇವರು ಕಡಬ ತಾಲೂಕು ಚಾರ್ವಾಕ ಗ್ರಾಮದ ಪಾಲ್ತಿಲ ಕುಮಾರ್ ಮತ್ತು ಸರೋಜಿನಿ ದಂಪತಿ ಪುತ್ರ.


