
ಕುವೈತ್: ಕುವೈತ್ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಸಾಲ್ಮಿಯ ಕಾರ್ಯಕರ್ತರನ್ನು ಒಳಗೊಂಡ ನೂತನ ಸಾಲ್ಮಿಯ ಯೂನಿಟ್ ಗೆ ಇಂದು ಸಯ್ಯದ್ ಅಹ್ಮದ್ ಮುಕ್ತಾರ್ ತಂಗಲ್ ಕುಂಬೋಲ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಇಷಾ ನಮಾಝ್ ಬಳಿಕ ನಡೆದ ಕಾರ್ಯಕ್ರಮ ವನ್ನು ಅಬ್ದುಲ್ ಲತೀಫ್ ಷೇಡಿಯ ಸಾಗತಿಸಿದರು. DKSC ಸ್ಥಾಪಕ ಸದಸ್ಯರಾದ ಅಬೂಬಕ್ಕರ್ ಬರ್ವ ಉದ್ಘಾಟಿಸಿ ಸಂಘಟನೆ ಹಾದು ಬಂದ ದಾರಿಯನ್ನು ಸಭೆಗೆ ವಿವರಿಸಿ ಕೊಟ್ಟರು.
ಸಯ್ಯದ್ ಮುಕ್ತಾರ್ ತಂಗಲ್ ನೂತನ ಸಮಿತಿಯನ್ನು ಘೋಷಿಸಿದರು, ಅಧ್ಯಕ್ಷರಾಗಿ ಸಮದ್ ಕುಂಜಾಲು ಹಾಗೂ ಉಪಾಧ್ಯಕ್ಷರಾಗಿ ತೌಫೀಕ್ ಅಲಿ ಪಡುಬಿದ್ರೆ, ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಕುಂಜಾಲು ಮತ್ತು ಹಣಕಾಸು ಕಾರ್ಯದರ್ಶಿಯಾಗಿ ಮುಬೀನ್ ಸಾಸ್ತಾನ ಇವರನ್ನು ಆಯ್ಕೆ ಮಾಡಲಾಯಿತು. ಯಾವ ರೀತಿ ಇಖ್ಲಾಸ್ ನೊಂದಿಗೆ ದೀನೀ ಚಟುವಟಿಕೆ ಮಾಡಬೇಕೆಂದು ಸಯ್ಯದ್ ರವರು ವಿವರಿಸಿದರು. ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಮೂಳೂರು ಸಾಂಘಿಕ ಚಟುವಟಿಕೆ ಬಗ್ಗೆ ವಿವರಿಸಿದರು.
ನೂರೇ ಮದೀನಾ ಪ್ರೋಗ್ರಾಂ ಸಮಿತಿ ಚೇರ್ಮನ್ ಯೂಸುಫ್ ಮುನಿಯಮ್ ವಂದಿಸಿದರು. DKSC ಕೇಂದ್ರ ಮತ್ತು ರಾಷ್ಟ್ರೀಯ ಸಮಿತಿ ನೇತಾರರು ಉಪಸ್ಥಿತರಿದ್ದರು.


