ಉಡುಪಿ: 13ನೇ ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಣಂಕಿಲ ಅಂಗನವಾಡಿಗೆ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸಹನ ಜಯಪ್ರಕಾಶ್ ಕಾಮತ್ ರವರು ನೀಡಿದ ಕೊಡುಗೆಯನ್ನು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆಯವರು ಬಟನ್ ಒತ್ತುವ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೊರಕೆಯವರು ಹವಾ ನಿಯಂತ್ರಣ ಅಂಗನವಾಡಿಯನ್ನು ಪ್ರಥಮ ಬಾರಿಗೆ ನೋಡುತ್ತಿದ್ದು ಕೊಡುಗೆ ನೀಡಿದ ಕಾಮತ್ ಕುಟುಂಬದವರಿಗೆ,ಪುಟಾಣಿ ಮಕ್ಕಳಿಗೆ ಹಾಗೂ ಅಲ್ಲಿ ಸೇರಿದ ಗ್ರಾಮಸ್ಥರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಹನ ಜಯಪ್ರಕಾಶ್ ಕಾಮತ್, ಪೆರ್ಣಂಕಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಣಿ ಶ್ರೀಮತಿ ಸುರೇಖಾರವರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಗುರುದಾಸ್ ಭಂಡಾರಿ,ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ಪಡುಬೆಟ್ಟು ,ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರ್ ಸೇರಿಗಾರ್, ಹಾಗೂ ಗಂಗಯ್ಯ ಪೂಜಾರಿ, ಸದಾನಂದ ವಾಗ್ಲೆ,ಸದಾನಂದ ನಾಯಕ್, ಸದಾನಂದ ತೆಂಡೂಲ್ಕರ್,ಅಂಗನವಾಡಿ ಟೀಚರ್ ಸುನೀತ ಮುಂತಾದವರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ಲಕ್ಷ್ಮಿನಾರಾಯಣ ಪ್ರಭು ಸ್ವಾಗತಿಸಿ ಪ್ರಸ್ತುತವಾಗಿ ಮಾತನಾಡಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಕಾಶ್ ಶೆಟ್ಟಿ ವಂದಿಸಿದರು.


