
ಶಿರೋವಸ್ತ್ರ ಧರಿಸಿದ ವಿದ್ಯಾರ್ಥಿನಿಯೊಂದಿಗೆ ನಿಂತಿರುವ ಫೋಟೋವನ್ನೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ತಿರುವನಂತಪುರಂ: ಶಿರೋವಸ್ತ್ರ ನಿಷೇಧದಿಂದಾಗಿ ಪಳ್ಳುರುಥಿ ಸೇಂಟ್ ರೀತಾಸ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಶಾಲೆಯನ್ನು ಬದಲಾಯಿಸುತ್ತಿರುವ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ. ‘ಮಕ್ಕಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವುದೇ ಕೇರಳದ ಪರಂಪರೆ’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯೊಂದಿಗೆ ತಾನು ನಿಂತಿರುವ ಫೋಟೋವನ್ನೂ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗು ಓದನ್ನು ನಿಲ್ಲಿಸಿ ಹೋದರೆ, ಪಳ್ಳುರುಥಿ ಸೇಂಟ್ ರೀತಾಸ್ ಶಾಲಾ ಅಧಿಕಾರಿಗಳು ಸರ್ಕಾರಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಸಚಿವರು ಹೇಳಿದರು. ‘ಆ ಮಗು ಅನುಭವಿಸುತ್ತಿರುವ ಮಾನಸಿಕ ಒತ್ತಡ ಬಹಳ ದೊಡ್ಡದಾಗಿದೆ. ಒಂದು ಪುಟ್ಟ ಮಗಳೊಂದಿಗೆ ಹಾಗೆ ನಡೆದುಕೊಳ್ಳುವುದು ಸರಿಯೇ? ಇದೊಂದು ಮಗುವಿನ ಸಮಸ್ಯೆ ಆಗಿದ್ದರೂ, ರಕ್ಷಣೆ ನೀಡುವುದು ಸರ್ಕಾರದ ನಿಲುವು’ ಎಂದೂ ಸಚಿವರು ಹೇಳಿದರು.
ಶಿರೋವಸ್ತ್ರ ಧರಿಸಿರುವ ಶಿಕ್ಷಕಿಯೇ ಮಗುವಿಗೆ ಇದನ್ನು ಧರಿಸಬಾರದು ಎಂದು ಹೇಳುವುದು ದೊಡ್ಡ ವಿಪರ್ಯಾಸವಾಗಿದೆ. ಸಮವಸ್ತ್ರದ (Uniform) ವಿಷಯದಲ್ಲಿ ರಾಜಿಯ ಅಗತ್ಯವಿಲ್ಲ. ಆದರೆ, ಶಾಲೆಗೆ ಸೌಜನ್ಯದಿಂದ ಈ ಸಮಸ್ಯೆಯನ್ನು ಪರಿಹರಿಸಲು ಅವಕಾಶವಿತ್ತು. ಸಮವಸ್ತ್ರದ ಅದೇ ಬಣ್ಣದ ಶಿರೋವಸ್ತ್ರವನ್ನು ಧರಿಸಲು ಅನುಮತಿ ನೀಡಿದ್ದರೆ, ಸಮಸ್ಯೆ ಪರಿಹಾರವಾಗುತ್ತಿತ್ತು ಎಂದೂ ಸಚಿವರು ಹೇಳಿದರು.


