
ಕೊಣಾಜೆ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯು ನಡೆಯಿತು. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬೈಕ್ ರ‍್ಯಾಲಿ ನಡೆಸಬಾರದು ಎಂದು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ಬೈಕ್‌ಗಳನ್ನು ತೆಗೆದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಬಾರದು. ಯಾರಾದರೂ ಬೈಕ್‌ನಲ್ಲಿ ಬರುತ್ತಿದ್ದರೆ ಅವರು ಶಿಸ್ತಿನಿಂದ, ಸರಿಯಾಗಿ, ಯಾವುದೇ ರ‍್ಯಾಲಿ ಮಾದರಿಯಲ್ಲಿ ಚಾಲನೆ ಮಾಡಬಾರದು. ಮೆರವಣಿಗೆಯನ್ನು ಶಾಂತಿಯುತವಾಗಿ, ಶಿಸ್ತಿನಿಂದ ಮತ್ತು ಕಾನೂನು ನಿಯಮಗಳನ್ನು ಪಾಲಿಸಿ ನಡೆಸಬೇಕಾಗಿದೆ. ಈ ನಿರ್ಧಾರವನ್ನು ಜನರ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಸಂಘಟನಾ ಪ್ರತಿನಿಧಿಗಳೂ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಎಲ್ಲಾ ಸಂಘಟಕರು ಹಾಗೂ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಕೋಣಾಜೆ ಪೋಲೀಸರು ವಿನಂತಿ ಮಾಡಿದ್ದಾರೆ.