ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿವಿ ಜೊತೆ ಕರ್ನಾಟಕ ಸಂಶೋಧನೆ, ಶೈಕ್ಷಣಿಕ ಸಹಯೋಗ

Date:

ಬೆಂಗಳೂರು: ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಪುರಾತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ಸರ್ಕಾರದ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗ ಏರ್ಪಟ್ಟಿದೆ. ಈ ಮೂಲಕ ಕರ್ನಾಟಕ ಸರ್ಕಾರವು ಜಾಗತಿಕ ಶೈಕ್ಷಣಿಕ ವಲಯದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್‌ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ದೀರ್ಘಾವಧಿಯ ಶೈಕ್ಷಣಿಕ ಸಹಯೋಗವನ್ನು ಘೋಷಿಸಲಾಗಿದೆ. ಈ ಸಹಯೋಗವು ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವುದರೊಂದಿಗೆ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಅಂತರಾಷ್ಟ್ರೀಯ ಮಟ್ಟದ ಜ್ಞಾನ ವಿನಿಮಯ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಅವಕಾಶಗಳನ್ನು ಒದಗಿಸುವುದೇ ಪ್ರಧಾನ ಉದ್ದೇಶವಾಗಿದೆ.ಪ್ರೊಫೆಸರ್ ಪ್ರೊ. ರಾಜೀವ್, ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕರಾಗಿರುವ ಪ್ರೊ. ಟೊನ್ನಿ ಇದನ್ನು ಮುನ್ನಡೆಸಲಿದ್ದಾರೆ. ಸಂಶೋಧನಾ ಸಹಭಾಗಿತ್ವ, ಜ್ಞಾನ ವಿನಿಮಯ ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಇವು ಸಹಯೋಗದ ಪ್ರಮುಖ ಕ್ಷೇತ್ರಗಳಾಗಿದೆ. ಈ ಮಹತ್ವದ ಉಪಕ್ರಮವನ್ನು ಪರಿಕಲ್ಪನೆಗೊಳಿಸಿ ಮುನ್ನಡೆಸಲು ಪ್ರೊ. ಸುರೇಶ್ ರೇಣುಕಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ಈ ಸಹಯೋಗಕ್ಕೆ ಸಚಿವರಾಗಿರುವ ಡಾ. ಎಂ.ಸಿ. ಸುಧಾಕರ್‌, ಡಾ. ಶರಣಪ್ರಕಾಶ್ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾಗಿರುವ ಡಾ. ಮಂಜುನಾಥ ಭಂಡಾರಿ, ಕುಲಪತಿ ಪ್ರೊ. ಜಯಕರ್, ಕುಲಪ ಪ್ರೊ. ಭಗವಾನ್ ಬೆಂಬಲ ನೀಡಿದ್ದಾರೆ. ಈ ಸಹಯೋಗವು ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಅವಕಾಶಗಳನ್ನು, ಅಧ್ಯಾಪಕರಿಗೆ ಅಂತರಾಷ್ಟ್ರೀಯ ಸಂಶೋಧನಾ ವೇದಿಕೆಗಳನ್ನು ಮತ್ತು ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಿಗೆ ಜಾಗತಿಕ ಪ್ರಾಮುಖ್ಯತೆಯನ್ನು ತಂದುಕೊಡಲಿದೆ ಎಂಬ ನಿರೀಕ್ಷೆ ಹುಟ್ಟಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಂಗಳೂರು: ರಾಣಿ ಅಬ್ಬಕ್ಕ@500 ಉಪನ್ಯಾಸ – 49 ಕಾರ್ಯಕ್ರಮ

ಉಳ್ಳಾಲ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಹಾಗೂ...

ಮಂಗಳೂರು ವಿವಿ ಕುಲಪತಿಪ್ರೊ.ಪಿ.ಎಲ್ ಧರ್ಮ ಇಂಗ್ಲೆಂಡಿಗೆ ಪ್ರವಾಸ

ಮಂಗಳಗಂಗೋತ್ರಿ: ಬ್ರಿಟಿಶ್ ಕೌನ್ಸಿಲ್ ಲಂಡನ್ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ...

ಕಡಬ ಪಟ್ಟಣ ಪಂಚಾಯತ್ ಇದರ ನೂತನ ಅದ್ಯಕ್ಷರಾಗಿ ತಮನ್ನಾ ಜಬೀನ್ ಉಪಾಧ್ಯಕ್ಷರಾಗಿ ನೀಲಾವತಿ ಶಿವರಾಂ ಆಯ್ಕೆ

ಕಡಬ ಪಟ್ಟಣ ಪಂಚಾಯತ್ ಇದರ ನೂತನ ಅದ್ಯಕ್ಷರಾಗಿ ತಮನ್ನಾ ಜಬೀನ್ ಉಪಾಧ್ಯಕ್ಷರಾಗಿ...

ತೋಡಾರು ವಿವಾಹಿತ ಮಹಿಳೆ ಆತ್ಮಹತ್ಯೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ ಜಿಲ್ಲಾ ಪ್ರಧಾನ ನ್ಯಾಯಾಲಯ

ಮಂಗಳೂರು: ತೋಡಾರಿನ ವಿವಾಹಿತ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಟೋ...