ರಫ್ತು ಅವಕಾಶಗಳು ಹಾಗೂ ಉತ್ತಮ ಕೃಷಿ ಪದ್ಧತಿ, ಸಂವೇದನಾ ಕಾರ್ಯಕ್ರಮ

Date:

ಮೂಡುಬಿದಿರೆ : ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿ, ತೋಟಗಾರಿಕಾ ಇಲಾಖೆ ಮಂಗಳೂರು, ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ಕೃಷಿ ವಿಚಾರ ವಿನಿಮಯ ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಸಮಾಜ ಮಂದಿರದಲ್ಲಿ ರಫ್ತು ಅವಕಾಶಗಳು ಹಾಗೂ ಉತ್ತಮ ಕೃಷಿ ಪದ್ಧತಿ, ಸಂವೇದನಾ ಕಾರ್ಯಕ್ರಮ ನಡೆಯಿತು.


ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಅಪೇಡಾ)ದ ಎ.ಜಿ.ಎಮ್. ಧರ್ಮ ರಾವ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಪೇಡಾ ದ ಡಾ. ಪೂಜಾ, ಕೃಷಿ ವಿಜ್ಞಾನ ಕೇಂದ್ರದ ಡಾ. ರಶ್ಮಿ, ಅಪೇಡಾ ದ ಕಾರಂತ್ ಬಿ., ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಗಳನ್ನು ಒದಗಿಸಿದರು. ರೈತರೊಂದಿಗೆ ಮುಖಾಮುಖಿ ಚರ್ಚೆಯು ನಡೆಯಿತು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಚರ್ಚೆಯಲ್ಲಿ ಭಾಗವಹಿಸಿ ಸಾಕಷ್ಟು ಮಾಹಿತಿಯನ್ನು ಒದಗಿಸಿದರು.

ಸಸ್ಯ ಸಂರಕ್ಷಣೆಯ ಬಗ್ಗೆ ಡಾ. ಕೇದಾರನಾಥ್, ವಿಟ್ಲ ಸಿಪಿಸಿಆರ್ ಐ ನ ಡಾ. ಭವಿಷ್ಯ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.
ಅಪೇಡಾದ ಡಾ ಪೂಜಾ ಮತ್ತು ಡಾ ಕಾರಂತ್ ಇವರಿ ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಡಾ . ರಶ್ಮಿ ಆರ್ ಮತ್ತು ಕೇದಾರನಾಥ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅಡಿಕೆ ಬೆಳೆಯಲ್ಲಿ ಉತ್ತಮ ಕೃಷಿ ಪದ್ಧತಿಗಳ ಕುರಿತು ಸಂಪೂರ್ಣ ತಾಂತ್ರಿಕ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ಅಜಯ್ ಕುಮಾ‌ರ್, ರೈತಜನ್ಯ ಕಂಪೆನಿಯ ಲಿಯೋ ವಾಲ್ಟರ್ ನಜರತ್‌, ಹಾಜರಿದ್ದರು. ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಡಿ ಜೆ ರಮೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕೆ ಪ್ರವೀಣ್‌ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಪೂಜಾರಿ ಕಾರ್ಯಕ್ರಮ ಅಯೋಜಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಮನಬೆಟ್ಟುವಿನಲ್ಲಿ ಉಚಿತ ಆರೋಗ್ಯ ಮತ್ತು ನೇತ್ರಾ ಚಿಕಿತ್ಸಾ ಶಿಬಿರ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಡುಬಿದಿರೆ...

ಅಣಬೆ ಕೃಷಿ ಮತ್ತು ಸಾಬೂನು ತಯಾರಿಕೆಯ ಬಗ್ಗೆ ಮಾಹಿತಿ

ಮೂಡುಬಿದಿರೆ: ರೈತ ದಿನಾಚರಣೆ ಅಂಗವಾಗಿ ತೆಂಕ ಮಿಜಾರ್ ಗ್ರಾಮ ಪಂಚಾಯತ್ ಹಾಗೂ...

ಕೇಮಾರು: ಶಾಲಾ ವಾರ್ಷಿಕೋತ್ಸವ ಸಮಾರಂಭ

ಮೂಡುಬಿದಿರೆ : ಕೇಮಾರು ದ.ಕ.ಜಿ.ಪಂ‌‌ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ವಿಜೃಂಭಣೆಯಿಂದ...

ಶಾಲಾಡಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ: ಶಶಿಧರ್ ಡಿ. ಡಿ. ಪಿ. ಐ.

ಉಳ್ಳಾಲ: ಸರಕಾರವು ಇಂದು ಸರಕಾರಿ ಶಾಲೆಗಳ ಎಲ್ಲಾ ವ್ಯವಸ್ಥೆಗಳೊಂದಿಗೆ ಉತ್ತಮವಾದ ಬೆಳವಣಿಗೆಗೆ...