ರೈತರಿಗೆ ಪರಿಹಾರ ನೀಡದೆ ಟವರ್ ನಿರ್ಮಾಣಕ್ಕೆ ಮುಂದಾದ ಯುಕೆಟಿಎಲ್ ಕಂಪನಿ ವಿರುದ್ಧ ಪ್ರತಿಭಟನೆ

Date:

ಮಂಗಳೂರು: ತೆಂಕ ಮಿಜಾರು ಗ್ರಾಮದ ಪಡೀಲು ಎಂಬಲ್ಲಿ ಯುಕೆಟಿಎಲ್ ಕಂಪನಿಯವರು ರೈತರಿಗೆ ಸಂಪೂರ್ಣ ಪರಿಹಾರದ ಮೊತ್ತ ಪಾವತಿಸದೆ ಟವರ್ ನಿರ್ಮಾಣ ಕಾರ್ಯ ಮಾಡಲು ಬಂದ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸ್ಥಳೀಯ ಕಿಸಾನ್ ಕರೆ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ರೈ,ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ರೈ, ನೇಮಿರಾಜ ಹಾಗೂ ಮತ್ತಿತರ ಪ್ರಮುಖರು ಸೇರಿ ಪ್ರತಿಭಟನೆಯನ್ನು ನಡೆಸಿದರು.


ರೈತರಿಗೆ ಪರಿಹಾರ ಸಿಗದೇ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಂತಿ ಪ್ರಸಾದ್ ಹೆಗ್ಡೆ ತಿಳಿಸಿದರು. ಮತ್ತು ಯು ಕೆ ಟಿ ಎಲ್ ಕಂಪನಿಯ ಕೆಲಸಗಾರರನ್ನು ಅವರ ಸ್ವತ್ತುಗಳ ಸಮೇತ ವಾಪಸ್ ಕಳುಹಿಸಲಾಯಿತು. ಮುಂದಿನ ದಿನಗಳಲ್ಲಿ ರೈತರಿಗೆ ಪರಿಹಾರ ನೀಡದೇ ಕಾನೂನುಬಾಹಿರವಾಗಿ, ಬಲಾತ್ಕಾರದಿಂದ ಅವರ ಜಾಗವನ್ನು ಪ್ರವೇಶಿಸಿದಲ್ಲಿ ಹೋರಾಟವನ್ನು ನಡೆಸುತ್ತೇವೆಂಬ ಎಚ್ಚರಿಕೆಯನ್ನು ಕಂಪನಿಯ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಶಾಂತಿ ಪ್ರಸಾದ್ ಹೆಗ್ಡೆ ನೀಡಿರುತ್ತಾರೆ.


ರೈತರು ನಡೆಸುತ್ತಿದ್ದ ಪ್ರತಿಭಟನಾ ಸಂದರ್ಭದಲ್ಲಿ ಮೂಡಬಿದ್ರೆ ಪೊಲೀಸರು ಆಗಮಿಸಿದ್ದು ರೈತರು,ಕಂಪನಿಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು ರೈತರ ಪ್ರತಿಭಟನೆಗೆ ಮಣಿದು ತಮ್ಮ ಸರಕು ಸಾಮಗ್ರಿಗಳೊಂದಿಗೆ ಕಂಪೆನಿಯವರು ವಾಪಸು ಹೋಗಿರುತ್ತಾರೆ. ಇದು ರೈತರಿಗೆ ಸಂದ ಗೆಲುವಾಗಿದೆ. ಈ ಸಂದರ್ಭದಲ್ಲಿ ಪ್ರವೀಣ್ ಭಂಡಾರಿ, ಶಿವಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...