ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆ ಯಲ್ಲಿ ಬೃಹತ್ ಮಹಿಳಾ ಆರೋಗ್ಯ ಶಿಬಿರ

Date:

ಉಳ್ಳಾಲ: ಮಹಿಳೆಯರ ಆರೋಗ್ಯ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆರೋಗ್ಯವಿಲ್ಲದೆ ದೇಹ ಸದೃಢವಾಗಲು ಸಾಧ್ಯವಿಲ್ಲ. ಮಹಿಳೆಯರಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾದರೆ, ಅದರ ಪರಿಣಾಮ ಸಂಪೂರ್ಣ ಕುಟುಂಬದ ಮೇಲೆ ಬೀಳುತ್ತದೆ ಎಂದು ಫಾದರ್ ಮುಲ್ರ‍್ಸ್ ಚಾರಿಟೇಬಲ್ ಸಂಸ್ಥೆಗಳ ಆಡಳಿತ ನಿರ್ದೇಶಕ ಫಾ.ಫಾಸ್ಟಿನ್ ಲೂಕಸ್ ಲೋಬೊ ಅಭಿಪ್ರಾಯಪಟ್ಟರು.


ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸ್ತಿçà ಆಯೋಗ ಹಾಗೂ ಕೆಥೋಲಿಕಾ ಸ್ತಿçà ಸಂಘಟನೆ , ದಕ್ಷಿಣ ವಲಯ , ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆ, ಹಳೆಯ ವಿದ್ಯಾರ್ಥಿಗಳ ಅಸೋಸಿಯೇಶನ್ , ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಸಹಯೋಗದೊಂದಿಗೆ ದೇರಳಕಟ್ಟೆಯ ಫಾದರ್ ಮುಲ್ಲರ್ ಆಡಿಟೋರಿಯಂನಲ್ಲಿ ಜರಗಿದ ಬೃಹತ್ ಮಹಿಳಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಮಹಿಳೆಯರ ಆರೋಗ್ಯಕ್ಕೆ ಗಮನಕೊಟ್ಟಾಗ ಮಾತ್ರ, ಇಡೀ ಸಮಾಜ ಆರೋಗ್ಯವಾಗಿರಲು ಸಾಧ್ಯ. ಆದುದರಿಂದ ಮಹಿಳೆಯರ ಆರೋಗ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡೋಣ. ಈ ನಿಟ್ಟಿನಲ್ಲಿ ಸಂಸ್ಥೆ ಹಾಗೂ ವಿವಿಧ ಸಂಘಗಳ ಸಹಯೋಗದೊಂದಿಗೆ ಆಯೋಜಿಸಲಾದ ಆರೋಗ್ಯ ಶಿಬಿರ ಮಹಿಳೆಯರ ಆರೋಗ್ಯ ಸುಧಾರಣೆಗೆ ಸಹಖಾರಿಯಾಗಲಿ ಎಂದು ಹಾರೈಸಿದರು.


ವರಡೋ ನಿರ್ದೇಶಕ ಫಾ| ಜೋಸೆಫ್ ಮಸ್ಕರೇನಸ್ , ಸ್ತಿçà ಆಯೋಗ ಮತ್ತು ಕೆಥೊಲಿಕ್ ಸ್ತಿçà ಸಂಘಟನೆ ವಲಯ ಕರ‍್ಯದರ್ಶಿ ಅನಿತಾ ಫ್ರಾö್ಯಂಕ್ , ಬೆಳ್ಮ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಜಗದೀಶ್ ರೈ, ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿಗಳ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕಥರ್, ನಿತ್ಯಾಧರ್ ಪಾಲನಾ ಸಮಿತಿ ಅಧ್ಯಕ್ಷೆ ಲಿನೆಟ್ ಕ್ಯಾಸ್ಟಲಿನೋ, ರಾಣಿಪುರ ಚರ್ಚ್ ಕರ‍್ಯದರ್ಶಿ ಲಿಡ್ವಿನ್ ಲೋಬೋ, ಪೆರ್ಮನ್ನೂರು ಚರ್ಚ್ ಸಮಿತಿ ಉಪಾಧ್ಯಕ್ಷೆ ಪ್ರಮೀಲಾ ಡಿಸೋಜ, ಪಜೀರು ಚರ್ಚ್ ಸಹ ಕರ‍್ಯದರ್ಶಿ ಆಶಾ ಫೆರ್ನಾಂಡಿಸ್ , ಅಮ್ಮೆಂಬಳ ಕೋಶಾಧಿಕಾರಿ ಟ್ರೆಸ್ಸಿ ರಾಡ್ರಿಗಸ್, ಸುನಿತಾ ವಿಜಯಡ್ಕ ಉಪಸ್ಥಿತರಿದ್ದರು.
ಡಾ. ದೀಪಾ ಪಾಯಸ್ ಶಿಬಿರ ಕುರಿತು ಮಾಹಿತಿ ನೀಡಿದರು
ಫಾ.ಡೊನಾಲ್ಡ್ ನಿಲೇಶ್ ಕ್ರಾಸ್ತ ಸ್ವಾಗತಿಸಿದರು. ಡಾ.ಸುಶ್ಮಿತಾ ನಾಯರ್ ನಿರೂಪಿಸಿದರು. ಸೌಹಾದ್ ಜಿ.ಎಂ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...