ಕುಮ್ಕಿ ಕಾಯ್ದೆಯ ವಿರುದ್ಧ ಹೋರಾಟ: ಶಾಂತಿ ಪ್ರಸಾದ್ ಹೆಗ್ಡೆ

Date:

ಮೂಡುಬಿದಿರೆ: ರಾಜ್ಯ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕುಮ್ಕಿ ಕಾಯ್ದೆಯ ವಿರುದ್ಧ ರೈತರು ಹೋರಾಟ ನಡೆಸುವ ಅಗತ್ಯತೆಯಿದೆ ಎಂದು ವಕೀಲ ಶಾಂತಿಪ್ರಸಾದ್ ಹೆಗ್ಡೆ ಕರೆ ನೀಡಿದರು. ಅವರು ಭಾರತೀಯ ಕಿಸಾನ್ ಸಂಘ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಸಮಿತಿಯ ವತಿಯಿಂದ ಇರುವೈಲು ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ‘ಕಿಸಾನ್ ಗ್ರಾಮ ಜಾಗೃತಿ- ಮಾಹಿತಿ ಕಾಯ೯ಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಸೂರ್ಯ ಘರ್ ಯೋಜನೆಯ ಸೌಲಭ್ಯವನ್ನು ಪಡೆಯಲು ಗ್ರಾಮದ 45 ಜನ ರೈತರು ಹೆಸರು ನೋಂದಾಯಿಸಿರುವ ಬಗ್ಗೆ ಅವರು ಮಾಹಿತಿ ನೀಡಿದ್ದು ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಿಗೆಯನ್ನು ಸೂಚಿಸಿತು. ಹಿರಿಯ ಕೃಷಿಕರಾದ ಜಿನ್ನಪ್ಪ ನಾಯ್ಕ್ ಕಟ್ಟಣಿಗೆ ಕಾಯಾ೯ಗಾರವನ್ನು ಉದ್ಘಾಟಿಸಿದರು.


ರಾಜೇಶ್ ಕಾಳೂರು ಅಧ್ಯಕ್ಷತೆ ವಹಿಸಿದ್ದರು. ಸೆಲ್ಕೋ ಸೋಲಾರ್ ಲೈಟ್ ನ ಹಿರಿಯ ಪ್ರಬಂಧಕ ಪ್ರವೀಣ್ ಬಂಗೇರ ಅವರು ಸೂಯ೯ಘರ್ ಯೋಜನೆ ಹಾಗೂ ಕುಸುಮ ಯೋಜನೆಯ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದೇ೯ಶಕ ಪ್ರವೀಣ್ ಕೆ ಇಲಾಖೆ ವತಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.


ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಶೆಟ್ಟಿ, ಇರುವೈಲು ಗ್ರಾ. ಪಂ.ನ ಮಾಜಿ ಸದಸ್ಯ ವಲೇರಿಯನ್ ಕುಟಿನ್ಹ, ರವಿರಾಜ್ ಪುತ್ತೂರು, ಪ್ರವೀಣ್ ಭಂಡಾರಿ, ಚಿಕ್ಕಯ್ಯ ಪೂಜಾರಿ ಮತ್ತು ಪ್ರವೀಣ್ ಶೆಟ್ಟಿ ಕುತ್ಯಾಡಿ, ದಿನೇಶ್ ಶೆಟ್ಟಿ, ಪದ್ಮನಾಭ ಪ್ರಭು, ಶಂಕರ್ ಶೆಟ್ಟಿ ಬಕೆ೯, ಸುಬ್ರಹ್ಮಣ್ಯ ವಕ೯ಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...