ಶಿತಾ೯ಡಿಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾಯ೯ಕ್ರಮ

Date:

ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಬಾರ್ಡ್, ಕೆನರಾ ಬ್ಯಾಂಕ್, ಕೆನರಾ ಫೈನಾನ್ಷಿಯಲ್ ಅಡ್ವೈಸರಿ ಟ್ರಸ್ಟ್ ಹಾಗೂ ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ನಡೆಯಿತು.ನಬಾರ್ಡ್‌ನ ಡಿಡಿಎಂ ಹಾಗೂ ಎಜಿಎಂ ಸಂಗೀತಾ ಎಸ್. ಕಾರ್ತಾ ಅವರು ಉದ್ಘಾಟಿಸಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ ವ್ಯಕ್ತಿಯ ಜೀವನಮಟ್ಟ ಸುಧಾರಣೆಗೆ ಎಷ್ಟು ಅಗತ್ಯ ಎಂಬುದನ್ನು ವಿವರಿಸಿದರು.ಈ ಸಂದರ್ಭದಲ್ಲಿ ಶಿರ್ತಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್., ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ರವಿನಾ ಬಂಗೇರ, ಸಂಜೀವಿನಿ ಜಿ.ಪಿ ಮಟ್ಟದ ಫೆಡರೇಷನ್ ಅಧ್ಯಕ್ಷೆ ಸವಿತಾ ಭಂಡಾರಿ, ಸಿಡಿಪಿಓ ಕಚೇರಿ ಮೇಲ್ವಿಚಾರಕಿ ಶುಭಾ, ಎನ್‌ಆರ್‌ಎಲ್‌ಎಂ ಕ್ಲಸ್ಟರ್ ಮೇಲ್ವಿಚಾರಕಿ ಶ್ರೀಮತಿ ಪ್ರಜ್ವತ ಅವರು ಉಪಸ್ಥಿತರಿದ್ದರು, ಶುಭಹಾರೈಸಿದರು.

ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಹಣಕಾಸು ಸಾಕ್ಷರತಾ ಸಲಹೆಗಾರ ಲತೇಶ್ ಬಿ. ಅವರು ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ವ್ಯವಹಾರಗಳು, ಉಳಿತಾಯ, ಸಾಲ ಶಿಸ್ತಿನ ಮಹತ್ವ ಹಾಗೂ ಹಣಕಾಸು ಭದ್ರತೆ ಕುರಿತು ಜಾಗೃತಿ ಮೂಡಿಸಿದರು.ಗೀತಾ ಪ್ರಾರ್ಥನೆಗೈದರು. , ಶ್ರೀಮತಿ ರೇಖಾ ಸ್ವಾಗತಿಸಿದರು. ಪ್ರತಿಭಾ ನಿರೂಪಣೆಗೈದರು. ಶ್ರೀಮತಿ ಮಮತಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...