ಬಂಟ್ವಾಳ ತಾಲೂಕಿನ ಗಡಿಯಾರ ಜೋಗಿಬೆಟ್ಟುವಿನ ಐಎಂಸಿ ಸಂಘಟನೆಯ ನೇತೃತ್ವದಲ್ಲಿ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಊರಿನ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭಗಡಿಯಾರ ಜುಮಾ ಮಸೀದಿ ಆವರಣದಲ್ಲಿ ನಡೆಯಿತು.

ಇದೇ ವೇಳೆ ಉತ್ತಮ ಅಂಕಗಳನ್ನು ಪಡೆದ ದುಲ್ಖತ್ಹುಲ್ ಅಫೀಫಾ (ಅಂಕ 617), ಮುಹಮ್ಮದ್ ಶಬೀರ್ ಕೆ (ಅಂಕ 590), ಮುಹಮ್ಮದ್ ರಾಫಿ (ಅಂಕ 566),
ಮುಹಮ್ಮದ್ ನಿಹಾಲ್ (ಅಂಕ 560), ಮರಿಯಂ ರಾಯಿದ್ (ಅಂಕ 549) ಇವರನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಎಂಜೆಎಂ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಮುಹಮ್ಮದಲಿ ದಾರಿಮಿ (ಖತೀಬರು, MJM ಗಡಿಯಾರ್), ರಶೀದ್ ಸಖಾಫಿ, ಸಿರಾಜುದ್ದೀನ್ ಮದನಿ ಉಸ್ತಾದ್, ಪಿ.ಕೆ. ಅಬ್ದುಲ್ ರಹ್ಮಾನ್ (ಕಾರ್ಯದರ್ಶಿ, MJM ಗಡಿಯಾರ್), ಶಂಶೀರ್ ಬುಡೋಳಿ (ಪತ್ರಕರ್ತರು), ಹಾರಿಶ್ (ಅಧ್ಯಕ್ಷರು, IMC), ಬಶೀರ್ ಕರಾಯ, ರಿಯಾಝ್ ವಿದ್ಯಾನಗರ ಉಪಸ್ಥಿತರಿದ್ದರು. ಜೊತೆಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
