ಬಲಿಪ ಭಾಗವತದ್ವಯರ ಪುಣ್ಯ ಸ್ಮೃತಿ: ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ

Date:


ಮೂಡುಬಿದಿರೆ: ಯಕ್ಷಗಾನದ ಮುಖಾಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡುತ್ತದೆ. ತಮ್ಮದೇ ಅಪೂರ್ವ ಶೈಲಿಯ ಮೂಲಕ ಬಲಿಪ ಭಾಗವತಧ್ವಯರು ಯಕ್ಷಗಾನರಂಗವನ್ನು ಆಳಿದ್ದಾರೆ. ಯಕ್ಷಗಾನ ಕಲಾವಿದರಿಗೆ ಬದುಕಿಗೆ ಶಕ್ತಿ ತುಂಬುವಂತಹ ಕೆಲಸ ಸರ್ಕಾರ, ಸಮಾಜ ಮಾಡಬೇಕು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.


ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲಿ ಭಾನುವಾರ ನಡೆದ ಕೀರ್ತಿಶೇಷ ಬಲಿಪ ಭಾಗವತದೈಯರ ಪುಣ್ಯ ಸ್ಮೃತಿಯ ಕಾಯ೯ಕ್ರಮದಲ್ಲಿ
ಹಿಮ್ಮೇಳ ವಾದಕ ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಬಲಿಪ ಭಾಗವತರು ಹಾಗೂ ಅವರ ಕುಟುಂಬಿಕರ ಸರಳ, ಸಜ್ಜನಿಕೆ ಪ್ರತಿಯೊಬ್ಬರಿಗೂ ಮಾದರಿ. ಇಂದಿಗೂ ಅವಿಭಕ್ತ ಕುಟುಂಬದಲ್ಲಿ ಪರಸ್ಪರ ಪ್ರೀತಿ, ಸಾಮರಸ್ಯದಿಂದ ಬಹುದುಕುತ್ತಿರುವುದು ಶ್ಲಾಘನೀಯ. ಹಿಂದೆ ಕಾಲೇಜು ಸ್ಥಾಪನೆಯ ಸಂದರ್ಭ ಪರಿಚಿತರೊಬ್ಬರು ಬಲಿಪ ಭಾಗವತರ ಮನೆಯ ಪರಿಸರವನ್ನು ತೋರಿಸಿದ್ದರು. ನಾನು ಬಲಿಪ ಮನೆ, ಪರಿಸರ ಕಲೆ ನೆಲೆಸಿರುವ ಪರಿಸರ ಅದನ್ನು ಎಂದಿಗೂ ಮಾರಾಟಕ್ಕೆ ಉಪಯೋಗಿಸಬೇಡಿ ಎಂದು ಹೇಳಿದ್ದೆ. ಬಲಿಪರ ಮನೆಯ ಮಕ್ಕಳ ಶಿಕ್ಷಣಕ್ಕೆ ಎಕ್ಸಲೆಂಟ್ ಸಂಸ್ಥೆಯಲ್ಲಿ ಪ್ರೋತ್ಸಾಹ ನೀಡಲಾಗುವುದು ಎಂದರು.


ಡಾ.ವಾದಿರಾಜ ಕಲ್ಲೂರಾಯ ಸಂಸ್ಮರಣಾ ನುಡಿಗಳನ್ನಾಡಿ, ಯಕ್ಷಗಾನವೇ ಬಲಿಪರಿಗೆ ಆತ್ಮವಾಗಿತ್ತು. ಅವರು ಕಲೆಯನ್ನು ಪ್ರೀತಿಸುವ, ಆರಾಧನೆ ಮಾಡುವಂತವಾಗಿ ಪ್ರಾತಃಸ್ಮರಣೀಯರು. ಬಲಿಪ ಭಾಗವತರ ಗುಣಗಳನ್ನು ಪ್ರತಿಬಿಂಬಿಸುವಂತಹ ವ್ಯಕ್ತಿತ್ವ, ಶೈಲಿ ಪ್ರಸಾದ ಬಲಿಪರದ್ದು. ಅವರು ಮಗು ಮನಸ್ಸಿನ ಕಲಾವಿದ. ಬಲಿಪ ಧ್ವಯರ ಒಡನಾಡಿಯಾಗಿ, ಯಕ್ಷಗಾನದ ಹಿಮ್ಮೇಳದಲ್ಲಿ ತಮ್ಮದೇ ಛಾಪು ಮೂಡಿಸಿ, ಯುವ ಹಿಮ್ಮೇಳ ಕಲಾವಿದರನ್ನು ರೂಪಿಸುತ್ತಿರುವ ಪೆರುವಾಜೆ ಭಟ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ ಎಂದರು.


ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಯುವರಾಜ್-ಜೈನ್ ರಶ್ಮಿತಾ ದಂಪತಿಯನ್ನು ಬಲಿಪರ ಕುಟುಂಬಸ್ಥರು ಗೌರವಿಸಿದರು.
ಉದ್ಯಮಿ ಕೆ.ಶ್ರೀಪತಿ ಭಟ್, ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಬಲಿಪ ಮಾಧವ ಭಟ್, ಬಲಿಪ ನಾರಾಯಣ ಭಾಗವತರ ಪುತ್ರ ಶಿವಶಂಕರ ಬಲಿಪ, ವಿಕ್ರಂ ನಾಯಕ್ ಸನ್ಮಾನಪತ್ರ ವಾಚಿಸಿದರು. ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಬಳಿಕ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...