ಓಂ ಶ್ರೀ ಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.27ರಂದು

Date:

ಉಳ್ಳಾಲ: ಕಳೆದ 35 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಓಂ ಶ್ರೀ ಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಫೆಬ್ರವರಿ 27 ಶುಕ್ರವಾರ ಮತ್ತು ಫೆ 28 ಶನಿವಾರದಂದು ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ತಿಳಿಸಿದ್ದಾರೆ.


ಗುರುವಾರ ತೊಕ್ಕೊಟ್ಟು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು ಸಂಘದ ಬೆಳವಣಿಗೆಯ ಬಗ್ಗೆ ವಿವರಿಸಿದರು.
ಆರಂಭದಲ್ಲಿ ಕೇವಲ 41 ಸದಸ್ಯರೊಂದಿಗೆ ಕಾರ್ಯಾರಂಭ ಮಾಡಿದ ಈ ಸಂಘದಲ್ಲಿ ಇದೀಗ 75 ಮಂದಿ ಸದಸ್ಯರಿದ್ದಾರೆ. ಬಡವ-ಶ್ರೀಮಂತ ಎಂಬ ಭೇದವಿಲ್ಲದೆ, ಜಾತಿ ಭಿನ್ನತೆ ಎಂಬ ಸಂಘರ್ಷವಿಲ್ಲದೆ ಭಾರತಾಂಬೆ ಅಡಿಯಲ್ಲೆಲ್ಲರೂ ಒಂದೇ ಎಂಬ ಧ್ಯೇಯವಾಕ್ಯದಡಿ ಸಂಘವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.


ಸಣ್ಣ ಕಟ್ಟಡ ನಿರ್ಮಿಸುವ ಕನಸಿನಿಂದ ಆರಂಭವಾದ ಪ್ರಯತ್ನ ದೇವರ ಆಶೀರ್ವಾದದಿಂದ ಇಂದು ಅದರ ಹತ್ತು ಪಟ್ಟು ದೊಡ್ಡ ಕಟ್ಟಡವಾಗಿ ರೂಪುಗೊಂಡಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಂದರ ಕಟ್ಟಡದ ಉದ್ಘಾಟನೆ ನಾಳೆ ಸಂಜೆ ಭಾರೀ ವಿಜೃಂಭಣೆಯಿಂದ ನಡೆಯಲಿದ್ದು ಈ ಸಮಾರಂಭಕ್ಕೆ ಎಲ್ಲಾ ಧರ್ಮದ ಜನರು ಭಾಗವಹಿಸಲಿದ್ದಾರೆ ಎಂದರು.


ಅಧ್ಯಕ್ಷರಾದ ಜಗದೀಶ್ ಕೋಟ್ಯಾನ್ ಪಾಣೇಲ ಮಾತನಾಡಿ ಫೆ.27 ಶುಕ್ರವಾರ ಸಂಜೆ 4 ಗಂಟೆಗೆ ಪಡೀಲಿನಿಂದ ನೂತನ ಕಟ್ಟಡದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 6 ಗಂಟೆಗೆ ನೂತನ ಕಟ್ಟಡದಲ್ಲಿ ದೀಪ ಪ್ರಜ್ವಲನೆಯನ್ನು ಉದಯ ಗುರು ಸ್ವಾಮಿ ಮಂಜೇಶ್ವರ ನಡೆಸಲಿದ್ದಾರೆ, ಭಗವಧ್ವಜ ಅನಾವರಣವನ್ನು ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸೇಸಪ್ಪ ಟೈಲರ್ ಸುದರ್ಶನನಗರ ಪಜೀರು ನಡೆಸಲಿದ್ದಾರೆ. ಸಂಜೆ 6.30 ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಸಾಮೂಹಿಕ ಪ್ರಾರ್ಥನೆ, ಪ್ರಸಾದ, ರಾಕ್ಷೋಘ್ನ ಹೋಮ, ವಾಸ್ತು ಹೋಮ ನಡೆಯಲಿದೆ ರಾತ್ರಿ 8 ಗಂಟೆಗೆ ದೇವೆರ್ ಬರೆತಿನ ಹಣೆಬರಹ ಎಂಬ ತುಳು ಸಾಮಾಜಿಕ ನಾಟಕ ನಡೆಯಲಿದೆ.


ಸಂಜೆ ಕೀರ್ತಿಶೇಷ ಪದ್ಮಾವತಿ ಕೋಚಣ್ಣ ಆಳ್ವ ವೇದಿಕೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಓಂ ಶ್ರೀ ಗಣೇಶ ಯುವಕ ಮಂಡಲ ಅಧ್ಯಕ್ಷರಾದ ಜಗದೀಶ್ ಕೋಟ್ಯಾನ್ ಪಾಣೇಲ ಅಧ್ಯಕ್ಷತೆ ವಹಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮೈಸೂರು ಎಲೆಕ್ಟ್ರಿಕಲ್ ಇಂಡ್ರಸ್ಟ್ರೀಸ್ ಲಿ ಇದರ ನಿಕಟ ಪೂರ್ವ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯರು ನಡೆಸಲಿದ್ದಾರೆ.

ಪಜೀರ್ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಮ್ಮದ್ ರಫೀಕ್ ಪಜೀರ್, ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ಇನೋಳಿ ದೇವಂದಬೆಟ್ಟು ಇದರ ಆಡಳಿತ ಮೋಕೇಸರಾದ ಚಂದ್ರ ಹಾಸ್ ಪೂಂಜ ಕಿಲ್ಲೂರುಗುತ್ತು, ಭೀಮ ಲಕ್ಷ್ಮೀ ಚಿಟ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ಜಿತೇಂದ್ರ ಶೆಟ್ಟಿ. ತಲಪಾಡಿಗುತ್ತು ಅರಸು ಮುಂಡಿತ್ತಾಯ ದೈವಸ್ಥಾನ ಪಜೀರು ಭಂಡಾರಮನೆ ದೈವದ ಪಾತಿ ಸುಬ್ರಾಯ ಪೂಜಾರಿ ಮತ್ತಿತರರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಫೆ .28 ಶನಿವಾರ ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ ದೀಪ ಪ್ರಜ್ವಲನೆ ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಪ್ರಾರಂಭ, ಬೆಳಿಗ್ಗೆ ಗಂಟೆ 11.33 ಗಂಟೆಗೆ ನೂತನ ಕಟ್ಟಡ ಪ್ರವೇಶ
ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ,ಮಧ್ಯಾಹ್ನ 3 ಗಂಟೆಗೆ ಸತ್ಯನಾರಾಯಣ ಪೂಜೆ ಪ್ರಾರಂಭ 4.30 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.


ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಮಿತಿ ಓಂ ಶ್ರೀ ಗಣೇಶ ಯುವಕ ಮಂಡಲ (ರಿ.) ಕಟ್ಟಡ ನಿರ್ಮಾಣ ಹಾಗೂ ಮಹಿಳಾ ಮಂಡಳಿ ಅಧ್ಯಕ್ಷರು ಸಂತೋಷ್ ಕುಮಾರ್ ರೈ ಬೋಳ್ಳಾರು ವಹಿಸಲಿದ್ದಾರೆ. ಸಭಾಭವನ ಉದ್ಘಾಟನೆ ಸಂಸದ ಕ್ಯಾಪ್. ಬ್ರಿಜೇಶ್ ಚೌಟ ನೆರವೇರಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾಡಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು , ಶ್ರೀ ಶಾರದಾ ಗಣಪತಿ ವಿದ್ಯಾಸಂಸ್ಥೆ ಸಂಚಾಲಕರಾದ ಟಿ.ಜಿ. ರಾಜಾರಾಮ್ ಭಟ್, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಪದ್ಮ ಸರ್ವಿಸಸ್ ಬಿ.ಸಿ.ರೋಡು ಐತ್ತಪ್ಪ ಅಳ್ವ ಸುಜೀರುಗುತ್ತು, ಲಂಚುಲಾಲ್ ಕೆ.ಎಸ್, ಪ್ರಶಾಂತ್ ಕಾಜವ ಮಿತ್ತಕೋಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಭಾ ಕಾರ್ಯಕ್ರಮದ ನಂತರ ವಿವಿಧ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಅನ್ನ ಸಂತರ್ಪಣೆ ನಡೆಯಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ನಿತಿನ್ ಪೂಂಜ ಪಾಣೇಲ ಬರಿಕೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆಧುನಿಕ ಶಿಕ್ಷಣದೊಂದಿಗೆ ದೇಶಕ್ಕೆ ಕೊಡುಗೆಯಾಗಬಲ್ಲ ಆವಿಷ್ಕಗಳನ್ನು ಮಾಡಿ: ಕಾಳಹಸ್ತೇಂದ್ರ ಸ್ವಾಮೀಜಿ

ಮೂಡುಬಿದಿರೆ: ವಿಶ್ವಕಮ೯ರು ಸಮಾಜದವರು ಸಾಂಪ್ರದಾಯಿಕವಾಗಿ ತಾಂತ್ರಿಕ ಕೌಶಲವನ್ನು ಸಹಜವಾಗಿ ಮೈಗೂಡಿಸಿಕೊಂಡಿದ್ದು ಮುಂದೆ...

ಪೆ.28: ಕರಿಂಜೆ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರೋಪ

ಮೂಡಬಿದಿರೆ: ಇಲ್ಲಿನ ಕರಿಂಜೆ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭವು...

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯ ಬಹಿರಂಗ ಹೇಳಿಕೆಯು ವ್ಯವಸ್ಥಿತ ತಾರತಮ್ಯವೆಂದು ವಿಮ್ ತೀವ್ರ ಆಕ್ಷೇಪ

ನವದೆಹಲಿ: ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂರವರು...

ಕುತ್ತಾರು: ಆದಿಸ್ಥಳ ಸ್ವಾಮಿ ಕೊರಗಜ್ಜ ದೇವಸ್ಥಾನ ಪರಿಸರದಲ್ಲಿ ಆದಿಸ್ಥಳ ಕೊರಗಜ್ಜ ಸೇವಾ ಕ್ಲಿನಿಕ್ ಆರಂಭ

ಕುತ್ತಾರು: ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯತೆಯಿದ್ದು, ಸಮಾಜಮುಖಿ...