ಮೂಡುಬಿದಿರೆ: ರೈತ ದಿನಾಚರಣೆ ಅಂಗವಾಗಿ ತೆಂಕ ಮಿಜಾರ್ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ಮತ್ತು ಕೃಷಿ ಇಲಾಖೆ ಸಯೋಗದೊಂದಿಗೆ ಅಣಬೆ ಕೃಷಿ ಹಾಗೂ ಸಾಬೂನು ತಯಾರಿಕೆ ತರಬೇತಿ ಕಾರ್ಯಕ್ರಮವು ಶಾಂತಿಗಿರಿ ಹರಿ ಭಜನಾ ಮಂಡಳಿಯ ಸಭಾಭವನದಲ್ಲಿ ಸೋಮವಾರ ನಡೆಯಿತು.

ಗ್ರಾಮೀಣ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಆಯೋಜಿಸಿರುವ ಕಾಯ೯ಕ್ರಮವನ್ನು ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್ ಉದ್ಘಾಟಿಸಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಇಂದಿರಾ ತರಬೇತಿಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಗೋಪಾಲ ಪೂಜಾರಿ ಅವರು ಅಣಬೆ ಕೃಷಿಯ ಬಗ್ಗೆ ಮಾಹಿತಿ ಹಾಗೂ ಸಾಬೂನು ತಯಾರಿಕೆಯ ಬಗ್ಗೆ ಇಗ್ನೇಶಿಯಸ್ ಲೋಬೊ ಪ್ರಾಯೋಕವಾಗಿ ಮಾಡಿ ತೋರಿಸಿದರು.

ಕೃಷಿ ಸಹಾಯಕ ನಿದೇ೯ಶಕ ಗಣೇಶ್ ಅಡಿಗ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


