ತುಳು ನಾಡು-ನುಡಿಗೆ ಜೈನರ ಕೊಡುಗೆ ಉಪನ್ಯಾಸ

Date:

ಮೂಡುಬಿದಿರೆ: ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಗೆ ಜೈನ ವಿದ್ವಾಂಸರು, ರಾಜಮನೆತನಗಳು ಹಾಗೂ ಜಿನಾಲಯಗಳ ಕೊಡುಗೆ ಚಾರಿತ್ರಿಕವಾದುದು. ಶಾಂತಿ, ಸಾಮರಸ್ಯ ಮತ್ತು ಸಾಮಾಜಿಕ ಸಮನ್ವಯತೆಯನ್ನು ಕಾಪಾಡುವಲ್ಲಿ ಜೈನ ಧರ್ಮದ ಪಾತ್ರ ಹಿರಿದು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮೂಡುಬಿದಿರೆ ಶ್ರೀ ಜೈನ ಮಠ ಹಾಗೂ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ತುಳುನಾಡು ನುಡಿಗೆ ಜೈನರ ಕೊಡುಗೆ ಎಂಬ ಎಂ.ಕೆ. ರವೀಂದ್ರನಾಥ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂಡುಬಿದಿರೆ ಜೈನ ಮಠದ ಡಾ.ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾರ್ಯವರ್ಯ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಅನೇಕ ಜೈನ ಕವಿಗಳು ತುಳು ಭಾಷೆಗೆ ವಿಶಿಷ್ಟ ಸಾಹಿತ್ಯಿಕ ಕೊಡುಗೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ವಿಷಯ ಮಂಡನೆ ಮಾಡಿ, ಮಹಾತ್ಮ ಗಾಂಧೀಜಿಯವರು ಅನುಷ್ಠಾನಗೊಳಿಸಿದ ಶಾಂತಿ ಮತ್ತು ಉಪವಾಸದ ತತ್ವಗಳು ಮೂಲತಃ ಜೈನ ತೀರ್ಥಂಕರರು ಬೋಧಿಸಿದ ವಿಚಾರಗಳಾಗಿವೆ. ತುಳುನಾಡಿನ ಸಾಂಸ್ಕೃತಿಕ ಸಮೃದ್ಧಿಯಲ್ಲಿ ಜೈನರ ಪಾಲು ದೊಡ್ಡದಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸುತೇಜ ಅವರು ವಿದ್ಯಾರ್ಥಿಗಳ ಪರವಾಗಿ ವಿಷಯದ ಬಗ್ಗೆ ಮಾತನಾಡಿದರು. ನೆಲ್ಲಿಕಾರು ಬಸದಿ ಮೊಕ್ತೇಸರ ವಿಮಲ್ ಕುಮಾರ್ ಬೆಟ್ಕೇರಿ, ವೀಣಾ ರಘುಚಂದ್ರ ಶೆಟ್ಟಿ, ವಂಡಾರು ಗೋವಿಂದ ಉಪಸ್ಥಿತರಿದ್ದರು. ಶುಭಾಶಯ ಜೈನ್ ಸ್ವಾಗತಿಸಿದರು. ಅಕಾಶವಾಣಿ ಉದ್ಘೋಷಕ ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಂಜಯಂತ ಕುಮಾರ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ಕಾರ್ಮಿಕ ಮೃತ್ಯು: ಸೂಕ್ತ ಪರಿಹಾರಕ್ಕೆ ಎಸ್.ಡಿ.ಟಿ.ಯು ಆಗ್ರಹ.

ಮಂಗಳೂರು:ಪೆ22: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ತಮಿಳುನಾಡಿನ ಮೀನು ಕಾರ್ಮಿಕ...

‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಆದ್ಯಾತ್ಮಿಕ ಜಾಥಾ

ಉಳ್ಳಾಲ‌: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ...

ಮಸ್ಜಿದ್ ಬಿಲಾಲ್ ಸಜಿಪನಡು ಇದರ ನೂತನ ಅಧ್ಯಕ್ಷರಾಗಿ ಜಾಬಿರ್ ಮತ್ತು ಕಾರ್ಯದರ್ಶಿಯಾಗಿ ಇರ್ಶಾದ್

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಸಜಿಪನಡು ಇದರ ವಾರ್ಷಿಕ...

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...