JAMWA ಮಹಾಸಭೆ: GCC ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಅರಿಕೆರೆ, ಪೂರ್ವ ಪ್ರದೇಶದ ಅಧ್ಯಕ್ಷರಾಗಿ ಇಕ್ಬಾಲ್ ಬೊಟ್ಟು

Date:

​ಜುಬೈಲ್, ಫೆ.6:ಸೌದಿ ಅರೇಬಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೋಕಟ್ಟೆ ಮೂಲದ ಅನಿವಾಸಿಗಳ ಸಂಘಟನೆಯಾದ JAMWA – GCC ಸಮಿತಿಯ 2026–28ರ ಸಾಲಿನ 5ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಲ್-ಜುಬೈಲ್‌ನ ಮಸ್ಕ್ ರೆಸಾರ್ಟ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

ಬಷೀರ್ NCMS ಮತ್ತು ಶರೀಫ್ ಬಿ.ಎಂ ವೈಟ್ ಸ್ಟೋನ್ ಅವರ ನೇತೃತ್ವದಲ್ಲಿ ಜುಮ್ಮಾ ನಮಾಜಿನ ಬಳಿಕ ಈ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ವಿಶೇಷವಾಗಿ ‘ಎಪಿ ಸೆಂಟರ್’ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಿರ್ಧರಿಸಲಾಯಿತು. ಇದರೊಂದಿಗೆ, ಸಂಘಟನೆಯ ಶಕ್ತಿಯನ್ನು ವೃದ್ಧಿಸಲು ‘JAMWA ಯೂತ್ ವಿಂಗ್’ ಆರಂಭಿಸುವ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಂಘಟನೆಯು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಮಾರ್ಗದರ್ಶನ ಹಾಗೂ ಆರ್ಥಿಕ ನೆರವಿನ ಯೋಜನೆಗಳಿಗಾಗಿ ದೀರ್ಘಕಾಲೀನ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ (JAMWA GCC ಸಮಿತಿ):

ಸಭೆಯಲ್ಲಿ 2026-28ನೇ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು:

​ಅಧ್ಯಕ್ಷರು: ಶರೀಫ್ ಅರಿಕೆರೆ
​ಉಪಾಧ್ಯಕ್ಷರು: ಸಿರಾಜ್ ಬಿ.ಎಸ್.
​ಪ್ರಧಾನ ಕಾರ್ಯದರ್ಶಿ: ಮೊಯಿದಿನ್ ಜಿ.
​ಸಂಘಟನಾ ಕಾರ್ಯದರ್ಶಿ: ಆರೀಫ್ ಎ.ಎಂ.
​ಕೋಶಾಧಿಕಾರಿ: ಸಲಾಹುದ್ದೀನ್
​ಆಡಿಟರ್: ರೌಫ್ ಎ.ಕೆ.ಎಫ್.
​ಎಪಿಕ್ ಸೆಂಟರ್ ಕೋ-ಆರ್ಡಿನೇಟರ್: ಎ. ರಹ್ಮಾನ್ ಚೆಯ್ಯೊನು
​ಎಪಿಕ್ ಸೆಂಟರ್ ಅಸಿಸ್ಟೆಂಟ್ ಕೋ-ಆರ್ಡಿನೇಟರ್: ರಾವೂಫ್ ಎನ್.ಎಂ.
​ಯೂತ್ ವಿಂಗ್ ಇಂಚಾರ್ಜ್: ಶಿಹಾಬುದ್ದೀನ್ ಎ.ಎಂ.

JAMWA ಪೂರ್ವ ಪ್ರದೇಶ (ದಮ್ಮಾಮ್–ಜುಬೈಲ್ ಘಟಕ) ಮಹಾಸಭೆ:

​ಇದೇ ಸಂದರ್ಭದಲ್ಲಿ JAMWA ಪೂರ್ವ ಪ್ರದೇಶದ ಘಟಕದ ಮಹಾಸಭೆಯೂ ನಡೆಯಿತು. ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಬೊಟ್ಟು (World Wide) ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
​ಘಟಕದ ಇತರ ಪದಾಧಿಕಾರಿಗಳು:

ಅಧ್ಯಕ್ಷರು: ಇಕ್ಬಾಲ್ ಬೊಟ್ಟು
​ಉಪಾಧ್ಯಕ್ಷರು: ಮುಹಮ್ಮದ್ ಅಝೀಮ್ (ಬ್ಲೂ ಗ್ಲಿಟ್ಝ್)
​ಪ್ರಧಾನ ಕಾರ್ಯದರ್ಶಿ: ಹಬೀಬ್ ರಹ್ಮಾನ್ ಈದ್ಗಾ
​ಕಾರ್ಯದರ್ಶಿಗಳು: ಶಾಫಿ ಮತ್ತು ಸಿನಾನ್
​ಕೋಶಾಧಿಕಾರಿ: ಸಲಾಹುದ್ದಿನ್
​ಕಾರ್ಯಕ್ರಮ ಸಂಯೋಜಕರು: ಅರಿಫ್ ಬಿ.ಎ.
​ಹಣಕಾಸು ನಿಯಂತ್ರಕರು: ಅಬ್ದುಲ್ ಹಮೀದ್ ಇಂತಿಯಾಝ್ (BS)
​ಸಂಗ್ರಹ ಉಸ್ತುವಾರಿಗಳು: ಕಸೀರ್ (ಬ್ಲೂ ಟೆಕ್) ಮತ್ತು ಹಫೀಝ್ ಪಿ.ಎಚ್.

​ಸಭೆಯಲ್ಲಿ ಮಾತನಾಡಿದ ಗಣ್ಯರು, ನೂತನ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸಂಘಟನೆಯು ಇನ್ನಷ್ಟು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘಟನೆಯ ಅಭಿವೃದ್ಧಿ ಹಾಗೂ ಪದಾಧಿಕಾರಿಗಳ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...