ಮಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಉದ್ಘಾಟನೆ ಹಾಗೂ ‘ನೂತನ ಶಿಕ್ಷಣ ನೀತಿಯ ಬಿಕ್ಕಟ್ಟುಗಳು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ದಿನಾಂಕ 10-1-2026 ಶನಿವಾರ ಅಪರಾಹ್ನ 2.30ಕ್ಕೆ ಮಂಗಳೂರಿನ ಹೋಟೆಲ್ ಶ್ರೀನಿವಾಸ್ ಮಂಗಳ ಸಭಾಂಗಣದಲ್ಲಿ ನೆರವೇರಲಿದೆ.
ಟ್ರಸ್ಟಿನ ಉದ್ಘಾಟನೆಯನ್ನು ಎ. ಎಂ. ಖಾನ್, ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಮಾಡಲಿದ್ದು ವಿಚಾರ ಮಂಡನೆಯನ್ನು ಬದ್ರುದ್ದೀನ್ ಕೆ. ಮಾಣಿ, ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ ಮಾಡಲಿದ್ದಾರೆ. ಟ್ರಸ್ಟ್‌ನ ಗೌರವಾಧ್ಯಕ್ಷ ಬಿ. ಎಮ್. ಹನೀಫ್ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ.

ಸಮಾರಂಭದಲ್ಲಿ ಎಂ.ಎ. ಗಫೂರ್ ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಟಿ.ಎಂ. ಶಹೀದ್, ಅಧ್ಯಕ್ಷರು, ಕನಿಷ್ಠ ವೇತನ ಸಲಹಾ ಮಂಡಳಿ, ಝಕರಿಯಾ ಜೋಕಟ್ಟೆ, ಚೇರ್‌ಮೆನ್, ಅಲ್ ಮುಝೈನ್ ಗ್ರೂಪ್ ಸೌದಿ ಅರೇಬಿಯಾ, ಉಮರ್ ಯು.ಎಚ್.ಅಧ್ಯಕ್ಷರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬಿ. ಇಬ್ರಾಹಿಂ, ಅಧ್ಯಕ್ಷರು, ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್, ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷರು, ಮುಸ್ಲಿಮ್ ಎಜ್ಯುಕೇಶನಲ್ ಇನ್ ಸ್ಟಿಟ್ಯೂಷನ್ಸ್ ಫೆಡರೇಶನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಟ್ರಸ್ಟಿನ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.



