ವಿಯೆಟ್ನಾಂನಲ್ಲಿ ಅಂತರಾಷ್ಟ್ರೀಯ ಭಾವ- ಜಾನಪದ ಝೇಂಕಾರ ಕಾರ್ಯಕ್ರಮ

Date:

ವಿಯೆಟ್ನಾಂ: ಜಾನಪದ ಸಂರಕ್ಷಣಾ ಪರಿಷತ್(ರಿ) ಬೆಂಗಳೂರು ಅಯೋಜಿಸಿದ ಅಂತರಾಷ್ಟ್ರೀಯ ಭಾವ- ಜಾನಪದ ಝೇಂಕಾರ ಕಾರ್ಯಕ್ರಮ ಹನೊಐ ವಿಯೆಟ್ನಾಂನ ಮೊಂಗ್ ಗ್ರಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಸಮಾಜ ಸೇವಕ ಟಿ.ವಿ ಬಾಬು ಅಂತರಾಷ್ಟ್ರೀಯ ಭಾವ- ಜಾನಪದ ಝೇಂಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಕನ್ನಡಾಂಬೆಯ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪರಿಚಯಿಸುವ ಅಗತ್ಯವಿದೆ ಎಂದು‌ ಹೇಳಿದರು.ಕೋಲಾರ‌ದ ನಿವೃತ್ತ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.ಜಾನಪದ ಸಂರಕ್ಷಣಾ ಪರಿಷತ್(ರಿ) ಅಧ್ಯಕ್ಷ ಗೊನಾಸ್ವಾಮಿ ಸಂಸ್ಥೆಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಓಂ ಸಾಯಿ ಆನಂದ ಆಶ್ರಮದ ಜಾನಕಿ.ಎಸ್ , ಸಮಾಜ ಸೇವಕ ಆಂಜನೇಯನ ಈಡಿಗ, ವಿಯೆಟ್ನಾಂನ ಮೊಂಗ್ ಗ್ರಾಂಡ್ ಹೊಟೇಲ್ ನ ಮ್ಯಾನೇಜರ್ ಅಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಬೆಂಗಳೂರಿನ ಅಬಕಾರಿ ಇಲಾಖೆಯ ಅಧಿಕಾರಿ ರಾಜಶೇಖರ್, ಸಮಾಜ ಸೇವಕ ಡಾ. ಪ್ರಹ್ಲಾದ್ ಬೋಯಿ, ಡಾ. ತನುಜಾ ಹಾಸನ, ಸಮಾಜ ಸೇವಕ ರಾಘವೇಂದ್ರ ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.ಮಹದೇವ ಸತ್ತಿಗೇರಿ ರವರಿಂದ ಸ್ಟಾಂಡ್ ಅಪ್ ಕಾಮಿಡಿ ನಡೆಯಿತು.ಚನ್ನರಾಯಪಟ್ಟಣದ ನೃತ್ಯಾಂಜಲಿ ಕಲಾ ನಿಕೇತನ ಸಂಸ್ಥೆಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಮಹಿಮಾ ಸಂತೋಷ್ ರೇವನಕರ್ ಭರತನಾಟ್ಯ ನೃತ್ಯಗೈದರು.ಶಿವರಾಜ್ ಪಿ.ಬಿ, ರಾಜಶೇಖರ್, ಹನುಮಂತ ಮಾದರ್, ಮತ್ತಿಕುಂಟೆ ಕೃಷ್ಣ, ದೇವಿ ಶ್ರೀ, ಅನಿತಾ ಕೆ.ಆರ್ ಪೇಟೆ ಜಾನಪದ ಗೀತೆ ಹಾಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...