
ಉಳ್ಳಾಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ‘ಯಕ್ಷಧಾರೆ’ ಯಕ್ಷಗಾನ ಕಾರ್ಯಕ್ರಮ ಸೆ.14ರಂದು, ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆಯಲಿದೆ. 9.30ಕ್ಕೆ ಯಕ್ಷ ಗುರು ಸಬ್ಬಣಕೋಡಿ ರಾಮಭಟ್ ಉದ್ಘಾಟಿಸಲಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ದಿ.ಬರೆ ಕೇಶವ ಭಟ್ ಸಂಸ್ಮರಣೆ ನಡೆಯಲಿದೆ. 10.30ಕ್ಕೆ ಯಕ್ಷವಾಚಿಕ, ಯಕ್ಷ ಆಹಾರ್ಯ ಪ್ರಸ್ತುತಿ ನಡೆಯಲಿದೆ. ಮಧ್ಯಾಹ್ನ 2ರಿಂದ ಮೋಕ್ಷ ಸಂಗ್ರಾಮ ಬಡಗುತಿಟ್ಟು ಯಕ್ಷಗಾನ ನಡೆಯಲಿದೆ. ಸಂಜೆ 5ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಆಶೀರ್ವಚನ ನೀಡಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ.ಟಿ.ಶಾಮ ಭಟ್, ಪ್ರಮುಖರಾದ ಟಿ.ಜಿ.ರಾಜಾರಾಮ ಭಟ್, ಪುಂಡರೀಕಾಕ್ಷ ಯು.ಮೂಲ್ಯ ಉಪಸ್ಥಿತರಿರುತ್ತಾರೆ. ಬಳಿಕ ಪ್ರಸಿದ್ಧ ಕಲಾವಿದರಿಂದ ಚಕ್ರವ್ಯೂಹ-ವೀರಮಣಿ ಕಾಳಗ ತೆಂಕುತಿಟ್ಟು ಯಕ್ಷಗಾನ ನಡೆಯಲಿದೆ ಎಂದು ಅಕಾಡೆಮಿ ಸದಸ್ಯ ಗುರುರಾಜ್ ಭಟ್ ಕೈರಂಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.